ಮೇಷ
ಅಹಿತಕರ ಪ್ರಸಂಗ. ಆತ್ಮವಿಶ್ವಾಸಕ್ಕೆ ಕುಂದು. ನಿರ್ಭೀತಿಯಿಂದ ಕಾರ್ಯ ನಿರ್ವಹಿಸಿ. ಈ ಬಗ್ಗೆ ಇತರರಿಗೆ ವಿವರಣೆ ಕೊಡುವ ಅಗತ್ಯ ಇಲ್ಲ.
ವೃಷಭ
ಶುಭ ಸುದ್ದಿ ಕೇಳುವಿರಿ. ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ. ನಿಮ್ಮ ನಿರ್ವಹಣೆ ಉತ್ತಮ ಪಡಿಸಿಕೊಳ್ಳಲು ಯತ್ನಿಸಿ.
ಮಿಥುನ
ಮನದ ಶಾಂತಿ ಕಾಯಲು ಸಂಘರ್ಷ ಗಳಿಂದ ದೂರವಿರಿ. ಸವಾಲು ಎದುರಿಸುವ ತಾಕತ್ತು ನಿಮಗಿದೆ, ಧೈರ್ಯ ಬೇಕು ಅಷ್ಟೆ.
ಕಟಕ
ಆರ್ಥಿಕವಾಗಿ -ಲಪ್ರದ ದಿನ. ಇತರರು ಹರಡುವ ವದಂತಿಗೆ ಕಿವಿಗೊಡಬೇಡಿ. ಆತ್ಮೀಯ ಬಂಧುಮಿತ್ರರ ಕಾಣುವ ಅವಕಾಶ ಸಿಗಲಿದೆ.
ಸಿಂಹ
ಅಸಹನೀಯ ಸನ್ನಿವೇಶ ಎದುರಿಸುವ ಪ್ರಸಂಗ ಬಂದೀತು. ತಕ್ಷಣ ಭಾವಾವೇಶದಿಂದ ಪ್ರತಿಕ್ರಿಯಿಸದಿರಿ. ತಾಳ್ಮೆಯಿಂದ ನಿಭಾಯಿಸಿ.
ಕನ್ಯಾ
ಸಿಹಿ-ಕಹಿ ಎರಡೂ ಪ್ರಸಂಗ ಎದುರಿಸುವಿರಿ.ವಾಗ್ವಾದದಿಂದ ದೂರ ಇರುವುದೇ ಒಳಿತು. ಆಪ್ತರ ಜತೆ ಪ್ರವಾಸ ಹೊರಡುವ ಅವಕಾಶ.
ತುಲಾ
ನಿಮ್ಮ ಭಾವನೆ ಸ್ಪಷ್ಟವಾಗಿ ವ್ಯಕ್ತಪಡಿಸಿ. ಅದಕ್ಕೆ ಮುಜುಗರ ಬೇಕಿಲ್ಲ. ಗೊಂದಲಕ್ಕೆ ಆಸ್ಪದ ನೀಡಬೇಡಿ. ಹಣಕಾಸು ಒತ್ತಡ ಎದುರಿಸುವಿರಿ.
ವೃಶ್ಚಿಕ
ನೆಗೆಟಿವ್ ಮನಸ್ಥಿತಿಯ ಜನರನ್ನು ದೂರವಿಡಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ ಕೌಟುಂಬಿಕ ಬಿಕ್ಕಟ್ಟು ಶೀಘ್ರ ಪರಿಹಾರ ಕಾಣಲಿದೆ.
ಧನು
ನಿಮ್ಮ ದೀರ್ಘ ಅನುಭವ ಇಂದು ನೆರವಿಗೆ ಬರಲಿದೆ. ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುವಿರಿ. ಹಣದ ಸಮಸ್ಯೆ ನಿವಾರಣೆ.
ಮಕರ
ನಾಯಕತ್ವದ ಗುಣ ಪ್ರದರ್ಶಿಸುವ ಪ್ರಸಂಗ ಬರಲಿದೆ. ದಿಟ್ಟ ನಿರ್ಧಾರ ತಾಳಲು ಹಿಂಜರಿಕೆ ತೋರದಿರಿ. ಕೌಟುಂಬಿಕ ಅಸಹಕಾರ ಕಾಣುವಿರಿ.
ಕುಂಭ
ಆತ್ಮವಿಶ್ವಾಸ ಹೆಚ್ಚಿ ಸುವ ಪ್ರಸಂಗ. ಭಾವುಕತೆ ಬಿಟ್ಟು ಪ್ರಾಯೋಗಿಕ ನೆಲೆಯಲ್ಲಿ ಚಿಂತಿಸಿ. ಆಗ ನಿಮ್ಮನ್ನು ಕಾಡುವ ಸಮಸ್ಯೆ ಇತ್ಯರ್ಥವಾದೀತು.
ಮೀನ
ಹಣದ ಕೊರತೆ ನೀಗುವುದು. ಸಂಬಂಧದಲ್ಲಿ ಯಾವುದೇ ಅನುಮಾನ ಉಳಿಯದಿರಲಿ. ಎಲ್ಲವನ್ನು ಸ್ಪಷ್ಟಪಡಿಸಿಕೊಳ್ಳಿ.



