ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮ ಆದ್ಯತೆಯ ವಿಷಯವನ್ನು ಕಡೆಗಣಿಸಬೇಡಿ. ಕೆಲಸ, ಕುಟುಂಬ ಮತ್ತು ಹೊಣೆಗಾರಿಕೆಯ ಮಧ್ಯೆ ಸಮತೋಲನ ಸಾಧಿಸಿ.
ವೃಷಭ
ನಿಮ್ಮ ವ್ಯವಹಾರದಲ್ಲಿ ಇತರರು ಮೂಗು ತೂರಿಸಲು ಅವಕಾಶ ಕೊಡದಿರಿ. ಆತ್ಮೀಯರ ಸೋಗಿನಲ್ಲಿರುವ ವಂಚಕರ ಕುರಿತು ಎಚ್ಚರಿಕೆಯಿಂದಿರಿ.
ಮಿಥುನ
ನೆಗೆಟಿವ್ ಚಿಂತನೆ ಮನದಿಂದ ದೂರವಾಗುವುದು.ಮನೆಯಲ್ಲಿ ಶಾಂತಿ, ಸಂತೋಷ. ಕೆಲಸದ ಒತ್ತಡ ನಿವಾರಣೆ.    ಕಟಕ
ಯಾವುದೇ ಕೆಲಸ ಬಾಕಿ ಉಳಿಸಬೇಡಿ. ಸಕಾಲದಲ್ಲಿ  ಮುಗಿಸಿರಿ. ಕೌಟುಂಬಿಕ ಸಾಮರಸ್ಯ ಕಾಪಾಡಿ. ಸಣ್ಣ ವಿಷಯಕ್ಕೆ ವಾಗ್ವಾದ ನಡೆಸದಿರಿ.
ಸಿಂಹ
ಖಾಸಗಿ ಬದುಕಿಗೆ ಹೆಚ್ಚಿನ ಗಮನ ಕೊಡಿ. ಇತರ ವಿಷಯಗಳ ಭರದಲ್ಲಿ ವೈಯಕ್ತಿಕ ಜೀವನ ಕಡೆಗಣಿಸಬೇಡಿ. ಪ್ರೀತಿಯಲ್ಲಿ ಯಶಸ್ಸು.
ಕನ್ಯಾ
ಕೌಟುಂಬಿಕ ಸಮ್ಮಿಲನ. ಸಣ್ಣ ಪುಟ್ಟ ಸಮಸ್ಯೆ ಬಾಽಸಿದರೂ ಅದನ್ನು  ಗಂಭೀರವಾಗಿ ಪರಿಗಣಿಸಬೇಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ತುಲಾ
ಮಾನಸಿಕ ಒತ್ತಡ. ಅಶಾಂತ ಮನಸ್ಸು. ಕೆಲ ಬೆಳವಣಿಗೆ ಚಿಂತೆಗೆ ಕಾರಣ. ನಿಮಗೆ ತುಸು ವಿಶ್ರಾಂತಿಯ ಅಗತ್ಯವಿದೆ. ಬಂಧುಗಳ  ಸಹಕಾರ.
ವೃಶ್ಚಿಕ
ಭಾವುಕ ಸನ್ನಿವೇಶ ಎದುರಾಗಲಿದೆ.  ಮನಸ್ಸು ದೃಢ ಮಾಡಿಕೊಳ್ಳಿ.  ಕೌಟುಂಬಿಕ ಜಗಳಕ್ಕೆ ಆಸ್ಪದ ಕೊಡಬೇಡಿ. ಹೊಂದಾಣಿಕೆ ಮುಖ್ಯವಾಗಲಿದೆ.
ಧನಸ್ಸು
ಕೆಲವರ ವರ್ತನೆ ನಿಮ್ಮಲ್ಲಿ ಅಸಹನೆ ತುಂಬಬಹುದು.ಮನಸ್ಸು ಕೆಡಿಸಿಕೊಳ್ಳದಿರಿ. ಬೇರಾವುದೋ ವಿಷಯ ಆತಂಕ ತುಂಬಲಿದೆ.
ಮಕರ
ಈ ದಿನ ಉತ್ಸಾಹ ದಿಂದ ಕಳೆಯಲಿದೆ.  ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಸಮಸ್ಯೆ ಮರೆತು ದಿವಸ ಆನಂದಿಸಿ.
ಕುಂಭ
ನೀವು ಬಯಸಿದಂತೆ ದಿನ ಸಾಗಲಿದೆ. ಉದ್ದೇಶ ಪ್ರಾಪ್ತಿ. ಮನಸ್ಸು ಬೇಸರಗೊಳಿಸುವ ಪ್ರಸಂಗ ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ.
ಮೀನ
ಗುಣಾತ್ಮಕ ದಿನ. ಇತರರಿಗೆ ನೆರವು ನೀಡುವ ಮೂಲಕ ಆತ್ಮತೃಪ್ತಿ. ಮನೆಯಲ್ಲಿ ಕಿರಿಯರಿಂದ ಆನಂದ. ಖರ್ಚು ಹೆಚ್ಚಿದರೂ ಬೇಸರವಿಲ್ಲ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!