ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ವೃತ್ತಿಯ ಒತ್ತಡ ಹೆಚ್ಚು. ಅದರಿಂದ ಹೊರಬರಲು ಕೌಟುಂಬಿಕ ಸಂತೋಷದಲ್ಲಿ ಪಾಲ್ಗೊಳ್ಳಿ.  ಅನ್ಯರಿಗೆ ಸಾಲ ಕೊಡುವ ಮುನ್ನ ಯೋಚಿಸಿ.
ವೃಷಭ
ವೃತ್ತಿ ಬದಲಾವಣೆ ಬಗ್ಗೆ ಈಗ ಯೋಚನೆ ಮಾಡಬೇಡಿ. ಗ್ರಹಗತಿ ನಿಮಗೆ ಪೂರಕವಾಗಿಲ್ಲ.    ಕೌಟುಂಬಿಕ ಸಾಮರಸ್ಯ ಕೆಡಬಹುದು.
ಮಿಥುನ
ಹೊಸತನಕ್ಕೆ ಗಮನ ಕೊಡಿ. ರಿಸ್ಕ್ ತೆಗೆದುಕೊಳ್ಳಲು ಅಂಜದಿರಿ. ಹಳೆಯ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಕಾಣುವಿರಿ.
ಕಟಕ
ವೃತ್ತಿ ಪೈಪೋಟಿ ಗೆಲ್ಲುವಿರಿ. ಆರ್ಥಿಕ ಪರಿಸ್ಥಿತಿ ತೃಪ್ತಿಕರ. ಹಳೆಯ ಸ್ನೇಹಿತರ ಭೇಟಿ ಸಂಭವ. ಕೌಟುಂಬಿಕ ನೆಮ್ಮದಿ ಮತ್ತು ಸಹಕಾರ. ವೆಚ್ಚ ಹೆಚ್ಚಲಿದೆ.
ಸಿಂಹ
ಕಂಡದ್ದೆಲ್ಲ ಕೊಳ್ಳುವ ಹವ್ಯಾಸದಿಂದ ಹಣ ಖರ್ಚು. ನಿಮ್ಮ ಬದುಕಿನ ಗುರಿಯ ಬಗ್ಗೆ ಯೋಚಿಸಿ. ಆಲಸ್ಯತನ ಬಿಟ್ಟು ಕ್ರಿಯಾಶೀಲರಾಗಿ.
ಕನ್ಯಾ
ವಿನಯವಂತಿಕೆಯೆ ನಿಮ್ಮ ಆಸ್ತಿ. ಕೆಲವರು ಅದನ್ನು ಟೀಕಿಸಿದ ಮಾತ್ರಕ್ಕೆ ವಿನಯ ಬಿಡಬೇಡಿ. ಸಂಘರ್ಷ ತಪ್ಪಿಸಿ. ಧನವ್ಯಯ ಹೆಚ್ಚಳ.
ತುಲಾ
ಮುಖ್ಯ ಕೆಲಸ ಮುಗಿಸಲು ಆದ್ಯತೆ ಕೊಡಿ. ನಿಮ್ಮ ಮಾತು ಮೀರಲು ಕೆಲವರು ಯತ್ನಿಸಿಯಾರು. ಅದರಿಂದ ಕೋಪಕ್ಕಿಂತ ಹೆಚ್ಚು ಬೇಸರವಾದೀತು.
ವೃಶ್ಚಿಕ
ನಿಮ್ಮನ್ನು ಕೆಳಕ್ಕೆ ತಳ್ಳಲು ಕೆಲವರ ಪ್ರಯತ್ನ. ನಿಮ್ಮ ಎಚ್ಚರದಲ್ಲಿ ನೀವಿರಬೇಕು. ಆತ್ಮೀಯರ ಸ್ಪಂದನೆ ಕಡಿಮೆ ಆದೀತು. ಅದರಿಂದ ಬೇಸರ.
ಧನು
ನಿಮ್ಮ ದೃಷ್ಟಿಕೋನ ಇತರರಿಗೆ ಮನವರಿಕೆ ಮಾಡಿಕೊಡಲು ಸಫಲರಾಗುವಿರಿ. ಇದರಿಂದ ವೃತ್ತಿ ಸಂಘರ್ಷ ತಪ್ಪುವುದು.
ಮಕರ
ಸ್ಪರ್ಧಾತ್ಮಕ ಪರೀಕ್ಷೆ ಉತ್ತಮ ಫಲ ನೀಡಲಿದೆ. ಅನವಶ್ಯ ವೆಚ್ಚ ತಪ್ಪಿಸಿ. ಅಲರ್ಜಿಯಂತಹ ಸಮಸ್ಯೆ ಕಾಣಿಸಬಹುದು. ಎಚ್ಚರ ವಹಿಸಿರಿ.
ಕುಂಭ
ಎಲ್ಲರ ಜತೆ ಸೌಹಾರ್ದ ಸಂಬಂಧ ಸ್ಥಾಪಿಸಿ. ಇಲ್ಲವಾದರೆ ಇತರರ ಅವಕೃಪೆಗೆ ಗುರಿಯಾಗುವಿರಿ. ಅವರಿಂದ ಹಾನಿ ಸಂಭವ.
ಮೀನ
ಹೊಸ ಕೆಲಸ ಆರಂಭಿಸುವ ಮುನ್ನ ಸೂಕ್ತ ಯೋಜನೆ ಅಗತ್ಯ.  ಇಲ್ಲವಾದರೆ ಗೊಂದಲಕ್ಕೆ ಸಿಲುಕುವಿರಿ. ಕೌಟುಂಬಿಕ ಭಿನ್ನಮತ, ಅಶಾಂತಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!