September 9, 2026
Wednesday, September 9, 2026
spot_img

ದಿನಭವಿಷ್ಯ: ಕಠಿಣ ಶ್ರಮದಿಂದ ಯಶಸ್ಸು, ಮುಕ್ತ ಮಾತುಕತೆಯೇ ಎಲ್ಲದಕ್ಕೂ ಪರಿಹಾರ

ಮೇಷ
ಉದ್ಯೋಗದಲ್ಲಿ ಅಸಮಾಧಾನ. ಕೆಲವರ ಜತೆ ಶೀತಲ ಸಂಘರ್ಷ. ಆತ್ಮೀಯ ಸಂಬಂಧದಲ್ಲಿ ಬಿರುಕು ಸಂಭವ. ಬೆನ್ನು ನೋವು ಕಾಡಬಹುದು.
ವೃಷಭ
ನಿಮ್ಮ ಕೆಲಸದಲ್ಲಿ ಹೆಚ್ಚು ಶ್ರಮ ಬೇಕಾದೀತು. ಇಲ್ಲವಾದರೆ ಫಲ ಸಿಗಲಾರದು. ಭಿನ್ನಮತ ಪರಿಹಾರಕ್ಕೆ ಮುಕ್ತ ಮಾತುಕತೆ ನಡೆಸಿ.
ಮಿಥುನ
ನಿಮ್ಮ ಕೆಳಗಿನ ಉದ್ಯೋಗಿಗಳಿಂದ ಸಮಸ್ಯೆ ಎದುರಿಸುವಿರಿ. ಭಾವುಕ ಸನ್ನಿವೇಶದಲ್ಲಿ ಮನಸ್ಸು ನಿಗ್ರಹಿಸಿಕೊಳ್ಳಿ. ದೌರ್ಬಲ್ಯ ಪ್ರದರ್ಶಿಸಬೇಡಿ.
ಕಟಕ
ಪ್ರಯತ್ನ ಫಲಪ್ರದ. ಎಲ್ಲರ ಜತೆ ಉತ್ತಮ ಹೊಂದಾಣಿಕೆ. ಮನೆಯಲ್ಲಿ ಮೌನ ಸಾಽಸಿ. ಅಂಕೆ ತಪ್ಪಿದ ಮಾತು ಜಗಳಕ್ಕೆ ಕಾರಣವಾದೀತು.
ಸಿಂಹ
ಉತ್ಸಾಹದ ದಿನ. ಸಮಸ್ಯೆಯೊಂದು ಪರಿಹಾರ. ದೊಡ್ಡ ಚಿಂತೆ ಕಳೆಯಲಿದೆ. ಆಹಾರ ಸೇವನೆಯಲ್ಲಿ ಆರೋಗ್ಯ ಕೆಡದಂತೆ ಎಚ್ಚರ ವಹಿಸಿ.
ಕನ್ಯಾ
ಸಹೋದ್ಯೋಗಿ ಗಳಿಂದ ಸಮಸ್ಯೆ. ತಾಳ್ಮೆ ವಹಿಸಿ. ದುಡುಕಿನ ಪ್ರತಿಕ್ರಿಯೆ ತೋರಬೇಡಿ. ಧ್ಯಾನದಿಂದ ಏಕಾಗ್ರತೆ ಸಾಧಿಸಲು ಯತ್ನಿಸಿ.
ತುಲಾ
ಮಹತ್ವದ ಕೆಲವು ನಿರ್ಧಾರ ನೀವಿಂದು ತಾಳಬೇಕಾಗುವುದು. ಪಾಲುದಾರರನ್ನು ಪೂರ್ಣವಾಗಿ ನಂಬಬೇಡಿ. ವಂಚನೆಗೆ ಒಳಗಾದೀರಿ.
ವೃಶ್ಚಿಕ
ಪ್ರಗತಿಪರ ದಿನ. ಪ್ರೀತಿಯಲ್ಲಿ ಯಶಸ್ಸು. ವೃತ್ತಿಯಲ್ಲಿ ಮನ್ನಣೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ವೃತ್ತಿಯ ಸಮಸ್ಯೆ ಪರಿಹಾರ.
ಧನು
ಸವಾಲಿನ ದಿನ. ಹೆಚ್ಚುವರಿ ಹೊಣೆಗಾರಿಕೆ. ಸುಲಭದ ಕಾರ್ಯಕ್ಕೂ ಅಡ್ಡಿಗಳು. ಪ್ರಯಾಣದಲ್ಲಿ ಹಣ ಕಳೆದುಹೋದೀತು. ಎಚ್ಚರ ವಹಿಸಿರಿ.
ಮಕರ
ವೃತ್ತಿಯಲ್ಲೂ ವೈಯಕ್ತಿಕ ಬದುಕಲ್ಲೂ ಯಶಸ್ಸು ಗಳಿಸುವಿರಿ. ಆರ್ಥಿಕ ಯೋಜನೆ ಉತ್ತಮ ಫ ಲ ನೀಡಲಿದೆ. ಆರೋಗ್ಯ ಸ್ಥಿರ.
ಕುಂಭ
ಅದೃಷ್ಟವನ್ನೆ ನಂಬಿ ಕೂರಬೇಡಿ. ಕಠಿಣ ಪ್ರಯತ್ನವೂ ಅಗತ್ಯ. ಚರ್ಮದ ಅಲರ್ಜಿ ಕಾಣಿಸೀತು. ಬಂಧು ಜತೆ ವಿರಸ ಮೂಡಬಹುದು.
ಮೀನ
ಆರ್ಥಿಕ ಕೊರತೆ ನೀಗಲಿದೆ. ಮನೆಯಲ್ಲಿ ಸೌಹಾರ್ದ ವಾತಾವರಣ. ಶನಿಯ ಪ್ರಭಾವದಿಂದ ನಿರಂತರ ಚಿಂತೆ ಕಾಡುತ್ತಲೇ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !