ಮೇಷ
ಉದ್ಯೋಗದಲ್ಲಿ ಅವಕಾಶ ಹೆಚ್ಚಲಿದೆ. ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಡಬೇಡಿ. ವೃತ್ತಿ ಒತ್ತಡ ಹೆಚ್ಚುವುದು. ವೃಷಭ
ಆದಾಯ- ವೆಚ್ಚದ ಮಧ್ಯೆ ಸಮತೋಲನ ಇರಲಿ. ಖರ್ಚು ಹೆಚ್ಚಾಗಿ ತಾಪತ್ರಯ ಪಡುವಿರಿ. ಮಾನಸಿಕ ಶಾಂತಿ ತುಸು
ದೂರವಾದೀತು.
ಮಿಥುನ
ಕಹಿಸಿಹಿ ಪ್ರಸಂಗಗಳ ಮಿಶ್ರಣ ಈ ದಿನ. ಹೆಚ್ಚಿದ ಖರ್ಚು ಚಿಂತೆಗೆ ಕಾರಣವಾಗಲಿದೆ. ಆತ್ಮೀಯರ ಜತೆಗಿನ ಭೇಟಿಯಿಂದ ಸಂತೋಷ. ಕಟಕ
ಪ್ರಗತಿಗೆ ಬೇಕಾದ ಹಾದಿ ನಿಮ್ಮ ಮುಂದಿದೆ. ಸರಿಯಾದ ರೀತಿಯಲ್ಲಿ ಅದರ ಬಳಕೆ ಮಾಡಿಕೊಳ್ಳಿ. ಅನವಶ್ಯ ದ್ವೇಷ ಭಾವನೆ ಮುಂದುವರಿಸಬೇಡಿ.
ಸಿಂಹ
ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಸಣ್ಣಪುಟ್ಟ ವಿಷಯಗಳು ಮನಸ್ಸು ಕೆಡಿಸಲು ಅವಕಾಶ ಕಲ್ಪಿಸಬೇಡಿ. ಸಹನೆಯಿಂದ ವರ್ತಿಸಿ. ಕನ್ಯಾ
ಪ್ರಮುಖ ಕೆಲಸಕ್ಕೆ ನೆರವು ಪಡಕೊಳ್ಳಿ. ಏಕಾಂಗಿ ಪ್ರಯತ್ನ -ಲ ನೀಡದು. ಹೊಟ್ಟೆ ಸಮಸ್ಯೆ ಕಾಡಬಹುದು. ಆಪ್ತರ ಸಂಗದಲ್ಲಿ ಆನಂದ. ತುಲಾ
ನಿಮ್ಮ ವ್ಯವಹಾರ ಉನ್ನತಿಗೆ ಹೊಸ ಚಿಂತನೆ ಅಳವಡಿಸಿ. ಹಳೆಯ ದಾರಿ -ಲ ನೀಡದು. ಎಲ್ಲರನ್ನು ನಂಬಿ ಕೆಡಬೇಡಿ. ಕೌಟುಂಬಿಕ ಸಹಕಾರ.
ವೃಶ್ಚಿಕ
ಕೆಲಸದ ಮೇಲೆ ಉತ್ಸಾಹ ಕಳಕೊಳ್ಳುವಿರಿ. ಕೆಲವರ ಮೇಲೆ ಅಸಹನೆ ಹೆಚ್ಚಲಿದೆ. ಶಾಂತರಾಗಿ ಯೋಚಿಸಿ ಕಾರ್ಯವೆಸಗಿ. ದುಡುಕು ಬೇಡ.
ಧನು
ನೆಗೆಟಿವ್ ಚಿಂತನೆಯ ವ್ಯಕ್ತಿಗಳನ್ನು ದೂರವಿಡಿ. ಅವರ ಪ್ರಭಾವಕ್ಕೆ ಸಿಲುಕದಿರಿ. ಹಳೆಯ ಸ್ನೇಹಿತರ ಭೇಟಿ. ಕೌಟುಂಬಿಕ ಸಮಾಧಾನ. ಮಕರ
ಹಣಕ್ಕೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರ. ಸೂಕ್ತ ನೆರವು ಲಭ್ಯ. ಸಂಬಂಧ ದಲ್ಲಿ ಅನುಮಾನಕ್ಕೆ ಆಸ್ಪದ ನೀಡಬೇಡಿ. ವಸ್ತು ಖರೀದಿ, ಧನವ್ಯಯ.
ಕುಂಭ
ಅಶಾಂತ ಮನಸ್ಥಿತಿ. ಆಪ್ತರ ಜತೆಗೆ ಭಿನ್ನಮತ ಉಂಟಾದೀತು. ನಿಮಗೆ ಸಂಬಂಽಸದ ವಿಚಾರದಲ್ಲಿ ತಲೆಕೆಡಿಸಿಕೊಳ್ಳದಿರಿ. ವೆಚ್ಚ ಹೆಚ್ಚದಂತೆ ನೋಡಿ.
ಮೀನ
ಬಿಡುವಿಲ್ಲದ ದಿನ. ಕೆಲವು ಹೊಣೆಗಾರಿಕೆ ಪೂರೈಸಬೇಕಾದ ಬದ್ಧತೆ. ಭಾವನಾತ್ಮಕ ಏರುಪೇರು. ಅನವಶ್ಯ ಖರ್ಚು ಹೆಚ್ಚುತ್ತಲೆ ಹೋಗುತ್ತದೆ.



