August 24, 2026
Monday, August 24, 2026
spot_img

ದಿನಭವಿಷ್ಯ: ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇಂದೇ ಸಕಾಲ, ಆರೋಗ್ಯ ಸುಧಾರಿಸಲಿದೆ

ಮೇಷ
ಬಯಸಿದ ಕಾರ್ಯ ಸಾಧಿಸದು. ವಿಶ್ವಾಸ ಕುಂಠಿತ. ಪ್ರಮುಖ ಆರ್ಥಿಕ ನಿರ್ಣಯ ಮುಂದೂಡಿ. ಆರೋಗ್ಯ ಸಮಸ್ಯೆ ಪರಿಹಾರ.
ವೃಷಭ
ಸುಗಮ ಕಾರ್ಯ. ಉದ್ದೇಶ ಪೂರ್ಣ. ವೃತ್ತಿ ಕ್ಷೇತ್ರದಲ್ಲಿ ವದಂತಿಗಳಿಂದ ದೂರವಿರಿ. ಅನಿರೀಕ್ಷಿತ ಧನಲಾಭ ಸಂಭವ. ಕೌಟುಂಬಿಕ ನೆಮ್ಮದಿ.
ಮಿಥುನ
ಉದ್ಯೋಗದಲ್ಲಿ ಸಫಲತೆ. ಉತ್ತಮ ಫಲ. ಪ್ರಯಾಣ ಹೆಚ್ಚು. ಪಾಲುದಾರಿಕೆಯ ಉದ್ಯಮಿಗಳಿಗೆ ಆರ್ಥಿಕ ಲಾಭ. ಆರೋಗ್ಯ ಸ್ಥಿರ.
ಕಟಕ
ನಿಮ್ಮ ಸುತ್ತ ಹೊಸ ಬೆಳವಣಿಗೆ ಸಂಭವ. ಅದಕ್ಕೆ ಸೂಕ್ತವಾಗಿ ಸ್ಪಂದಿಸಿ. ದೂರ ಉಳಿದರೆ ಫಲವಿಲ್ಲ. ಪ್ರೀತಿ ಯಲ್ಲಿ ಬಿಕ್ಕಟ್ಟು. ಮಾನಸಿಕ ಉದ್ವಿಗ್ನತೆ.
ಸಿಂಹ
ಪ್ರಮುಖ ನಿರ್ಣಯ ತಾಳಲು ಹೊರಟಿದ್ದರೆ ಇಂದು ಸಕಾಲ. ಕಾರ್ಯ ಸ-ಲ. ಪ್ರೀತಿಯ ಅಹವಾಲು ಯಶಸ್ಸು. ಆರ್ಥಿಕ ಸ್ಥಿತಿ ಉತ್ತಮ.
ಕನ್ಯಾ
ಉಲ್ಲಾಸದ ಮನಸ್ಥಿತಿ. ಸಭೆಗಳಲ್ಲಿ ನಿಮ್ಮ ಮಾತಿಗೆ ಮನ್ನಣೆ. ನಿಮ್ಮ ಬದುಕಲ್ಲಿ ಹೊಸ ವ್ಯಕ್ತಿಯ ಪ್ರವೇಶ ಆಗಬಹುದು. ಕೆಟ್ಟ ಹವ್ಯಾಸ ಬಿಟ್ಟುಬಿಡಿ.
ತುಲಾ
ನಿಮ್ಮ ವಿಶ್ವಾಸ ಕುಂದಿಸುವ ಪ್ರಸಂಗ ಉಂಟಾದೀತು. ಆತುರದ ನಿರ್ಧಾರ ತಾಳಬೇಡಿ. ಅಲರ್ಜಿಯಂತಹ ಆರೋಗ್ಯ ಸಮಸ್ಯೆ.
ವೃಶ್ಚಿಕ
ಕೆಲಸಗಳು ಬಾಕಿ ಉಳಿಯುತ್ತವೆ. ಒತ್ತಡ ಹೆಚ್ಚು. ಮನಸ್ಸು ಕೆಡಿಸುವ ಪ್ರಸಂಗವೊಂದು ಉಂಟಾದೀತು. ಆಪ್ತರ ಅಸಡ್ಡೆ ಎದುರಿಸುವಿರಿ.
ಧನು
ನಿರಾಳ ದಿನ. ಸಮಸ್ಯೆ ಪರಿಹಾರ. ನಿಮ್ಮ ಉತ್ಸಾಹ ಹೆಚ್ಚಿಸುವ ಕೆಲಸದಲ್ಲಿ ತೊಡಗಿ. ಇತರರ ಬಗ್ಗೆ ಕರುಬುತ್ತಾ ಕೂರಬೇಡಿ. ಅದರಿಂದ ಮನಸ್ಸು ಹಾಳು.
ಮಕರ
ಹೆಚ್ಚಿನ ವಿಶೇಷ ಘಟಿಸದ ಸಾಮಾನ್ಯ ದಿನ. ಹಣದ ಚಿಂತೆ ಕಾಡದು. ಕೌಟುಂಬಿಕ ಸಮಸ್ಯೆ ತಾತ್ಕಾಲಿಕ ಉಪಶಮನ. ಆರೋಗ್ಯ ಸ್ಥಿರ.
ಕುಂಭ
ನಿರೀಕ್ಷಿತ ಫಲ ಸಿಗದು. ಕೇವಲ ಅದೃಷ್ಟ ನಂಬಿ ಕೂರಬೇಡಿ. ಪ್ರಯತ್ನ ಅಗತ್ಯ. ದೈಹಿಕ ಅಸೌಖ್ಯ ಕಾಡಬಹುದು. ವಾಗ್ವಾದ ತಪ್ಪಿಸಿ.
ಮೀನ
ಏರಿಳಿತ ಇಲ್ಲದ ಸಾಧಾರಣ ಪ್ರಗತಿಯ ದಿನ. ಏಕಾಂತದಲ್ಲಿ ನೆಮ್ಮದಿ ಕಾಣುವಿರಿ. ಗೌಜಿಗದ್ದಲ ಬೇಡವಾಗಲಿದೆ. ಹಣದ ಸಮಸ್ಯೆ ಪರಿಹಾರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !