July 26, 2026
Sunday, July 26, 2026
spot_img

ದಿನ ಭವಿಷ್ಯ | ಇಂದು ಈ ರಾಶಿಯವರಿಗೆ ಕಾಯುತ್ತಿದೆ ಪ್ರವಾಸದ ಅವಕಾಶ; ಆದರೆ ಆತ್ಮೀಯರೊಂದಿಗೆ ಜಾಗರೂಕರಾಗಿರಿ!

ಮೇಷ

 ಆತ್ಮೀಯರ ವರ್ತನೆ ಯಲ್ಲಿ ಬದಲಾವಣೆ ಕಂಡೀತು.  ವಾಗ್ವಾದಕ್ಕೆ ಇಳಿಯಬೇಡಿ.  ಪ್ರವಾಸ ಅವಕಾಶ. ದೈಹಿಕ ನೋವಿನಿಂದ ನಿರಾಳತೆ.

ವೃಷಭ

ಉದ್ಯೋಗದ ಹುಡುಕಾಟ ಅಂತ್ಯ. ಶುಭ ಸುದ್ದಿ ಸಿಗಲಿದೆ. ದಂಪತಿ ಮಧ್ಯೆ ಮುನಿಸು ಶಮನ.  ಮಧುಮೇಹಿಗಳು ಹೆಚ್ಚು ಎಚ್ಚರ ವಹಿಸಿ.

ಮಿಥುನ

ವೃತ್ತಿ ಮತ್ತು ಪ್ರೀತಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ. ಸರಿಯಾದ ಹೆಜ್ಜೆ ಇಟ್ಟರೆ ಉತ್ತಮ. ಆತ್ಮೀಯ ವ್ಯಕ್ತಿಗಳ ಮನ ನೋಯಿಸಬೇಡಿ.   

ಕಟಕ

 ಸರಿಯಾದ ದಿಕ್ಕಿನಲ್ಲಿ ನಿಮ್ಮ ಪ್ರಯತ್ನ ಸಾಗುತ್ತದೆ. ಕುಟುಂಬಸ್ಥರ ಮಧ್ಯೆ ಹೆಚ್ಚು ಸಮಯ ಕಳೆಯಿರಿ. ಅವರ ಮನಸ್ಸಿಗೆ ನೋವು ಉಂಟುಮಾಡಬೇಡಿ. 

ಸಿಂಹ

  ನಿಮ್ಮ ಧೋರಣೆಗೆ ಮನೆಯವರಿಂದ ವಿರೋಧ. ಬಾಕಿ ಉಳಿದ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಕ್ರೀಡಾಳು ಗಳಿಗೆ ಸಾಧನೆಯ ಯಶಸ್ಸು.     

ಕನ್ಯಾ

 ಅತಿಯಾದ ನಿರೀಕ್ಷೆ ಸಂತೋಷ ನೀಡದು. ಖಾಸಗಿ ಬದುಕಿನ ಕುರಿತು ಅನವಶ್ಯ ಚಿಂತಿಸುವಿರಿ. ನಿಜವಾಗಿ ಸಮಸ್ಯೆ ಕಾಡದು. ವಿವಾದವೊಂದು ಪರಿಹಾರ.   

ತುಲಾ

ವ್ಯಕ್ತಿಯೊಬ್ಬರ ಜತೆ ಸೌಖ್ಯ ವೃದ್ಧಿ. ನಿಮ್ಮ ಬದುಕಲ್ಲಿ ಪ್ರಭಾವ ಬೀರುವರು. ಸಂಘಟಿತ ಕಾರ್ಯದಿಂದ ವ್ಯವಹಾರ ಬೆಳವಣಿಗೆ ಕಾಣುವುದು.     

ವೃಶ್ಚಿಕ

ಎಲ್ಲ ಕಾರ್ಯ ಸುಸೂತ್ರವಾಗಿ ಸಾಗಲಿದೆ. ಅಡ್ಡಿಗಳ ನಿವಾರಣೆ. ವೃತ್ತಿ ಸಂಬಂಧಿತ ಉದ್ವಿಗ್ನತೆ ಶಮನ. ಆಪ್ತರ ಜತೆಗಿನ ವಿರಸ ಅಂತ್ಯ.         

ಧನು

 ಸಾಮಾಜಿಕ ಕಾರ್ಯದಲ್ಲಿ ಹೆಚ್ಚು ವ್ಯಸ್ತ. ಮನೆಯವರ ಜತೆ ಹೊಂದಾಣಿಕೆ ಇರಲಿ. ಸಣ್ಣ ಗಾಯವಾಗುವ ಸಂಭವ. ಎಚ್ಚರ ವಹಿಸಿ.   

ಮಕರ

ಬದುಕನ್ನು ಗಂಭೀರವಾಗಿ ಪರಿಗಣಿಸಿ. ಬೇಕಾಬಿಟ್ಟಿ ಧೋರಣೆ ಪ್ರತಿಕೂಲವಾದೀತು. ಇತರರಿಗೆ ಮಾನಸಿಕ ನೋವು ನೀಡಬೇಡಿ. 

ಕುಂಭ

  ಖಾಸಗಿ ಸಮಸ್ಯೆ ಮನಸ್ಸಿಗೆ ಕಿರಿಕಿರಿ ತರಲಿದೆ. ಇತರರ ಸಣ್ಣ ವಿಷಯದಲ್ಲೂ ತಪ್ಪು ಹುಡುಕುವಿರಿ. ಅದರಿಂದ ವಿರಸ ಉಂಟಾದೀತು.   

 ಮೀನ

  ಹಣದ ವ್ಯವಹಾರ ದಲ್ಲಿ ಜಾಗ್ರತೆ ವಹಿಸಿ. ನಷ್ಟ ಆಗದಂತೆ ನೋಡಿಕೊಳ್ಳಿ. ಮನೆಯವರ ಬೆಂಬಲ ವಿಶ್ವಾಸ ಹೆಚ್ಚಿಸಲಿದೆ. ಹಳೆ ಸ್ನೇಹಿತರ ಭೇಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !