ಮೇಷ
ಕುಟುಂಬದ ಹಿತಾಸಕ್ತಿ ಆದ್ಯತೆ ಪಡೆಯಲಿದೆ. ಉದ್ಯೋಗ ಅರಸುವವರಿಗೆ ಶುಭ ಬೆಳವಣಿಗೆ. ಮಾನಸಿಕ ದುಗುಡ ನಿವಾರಣೆ.
ವೃಷಭ
ಸಮಸ್ಯೆ ಪರಿಹಾರ. ಚಿಂತೆ ನಿವಾರಣೆ. ಧನಲಾಭ. ಪ್ರೀತಿಯಲ್ಲಿ ಗುಣಾತ್ಮಕ ಬೆಳವಣಿಗೆ. ಒಟ್ಟಿನಲ್ಲಿ ಈ ದಿನ ನಿಮಗೆ ಪ್ರಗತಿದಾಯಕ.
ಮಿಥುನ
ಏರಿಳಿತ ಎರಡನ್ನೂ ಇಂದು ಅನುಭವಿಸುವಿರಿ. ವೃತ್ತಿಯಲ್ಲಿ ಏಳಿಗೆ. ಖಾಸಗಿ ಬದುಕಲ್ಲಿ ಬೇಸರದ ಬೆಳವಣಿಗೆ. ಹೆತ್ತವರ ಕಾಳಜಿ ವಹಿಸಿರಿ.
ಕಟಕ
ಅನಿರೀಕ್ಷಿತ ಧನಪ್ರಾಪ್ತಿ. ಆಪ್ತರ ಜತೆ ಪ್ರವಾಸದ ಸಾಧ್ಯತೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಬಂಧು ಜತೆ ಕಲಹವಾದೀತು.
ಸಿಂಹ
ಸಮಸ್ಯೆ ಪರಿಹಾರಕ್ಕೆ ಅನ್ಯರ ನೆರವು ಪಡೆಯಲು ಹಿಂಜರಿಕೆ ಬೇಡ. ವ್ಯವಹಾರದಲ್ಲಿ ಪ್ರಗತಿ. ಅಪಥ್ಯ ಆಹಾರ ಸೇವನೆ ಹೊಟ್ಟೆ ಕೆಡಿಸಬಹುದು.
ಕನ್ಯಾ
ದಿನದ ಆರಂಭ ಕಷ್ಟಕರವಾಗಲಿದೆ. ವೃತ್ತಿ ಮತ್ತು ಕುಟುಂಬದ ಮಧ್ಯೆ ಸಮತೋಲನ ಸಾಽಸಿ. ದಿನದಂತ್ಯಕ್ಕೆ ಮಾನಸಿಕ ನಿರಾಳತೆ ಸಿಗಲಿದೆ.
ತುಲಾ
ವೈಯಕ್ತಿಕ ಬದುಕಲ್ಲಿ ಬಯಸದ ಬದಲಾವಣೆ ಉಂಟಾದೀತು. ಬೇಸರ ಪಡದಿರಿ. ಹೊಂದಿಕೊಂಡು ಮುನ್ನಡೆಯಿರಿ. ಆರ್ಥಿಕ ಒತ್ತಡ ಹೆಚ್ಚಲಿದೆ.
ವೃಶ್ಚಿಕ
ಫಲಪ್ರದ ದಿನ. ನಿರೀಕ್ಷೆಗಿಂತ ಹೆಚ್ಚು ಗಳಿಕೆ. ಆಪ್ತರ ಜತೆಗಿನ ಸಂಬಂಧ ಸುಧಾರಣೆ. ಆದರೂ ನಿಮ್ಮ ಮನದಲ್ಲಿ ಏನೋ ಕೊರಗು, ಗೊಂದಲ.
ಧನು
ನಿಮ್ಮ ಒಳ್ಳೆತನ ದುರುಪಯೋಗ ಮಾಡಲು ಇತರರಿಗೆ ಅವಕಾಶ ಕೊಡಬೇಡಿ. ಕೆಲ ವಿಷಯಗಳಲ್ಲಿ ಕಠಿಣ ಧೋರಣೆ ಬೇಕಾದೀತು.
ಮಕರ
ವೃತ್ತಿಯಲ್ಲಿ ಮೇಲಿನವರ ಬೆಂಬಲ. ಒತ್ತಡ ನಿವಾರಣೆ. ಮನೆಯಲ್ಲಿ ಹಿರಿಯರ ಆರೋಗ್ಯ ಕಳವಳಕ್ಕೆ ಕಾರಣವಾಗಬಹುದು.
ಕುಂಭ
ವ್ಯವಹಾರದಲ್ಲಿ ಕೆಲವು ವಿಷಯ ಚಿಂತೆಗೆ ಕಾರಣವಾದೀತು. ಸಮಸ್ಯೆಗೆ ಪರಿಹಾರ ಕೂಡಾ ನಿಮ್ಮ ಬಳಿಯೇ ಇದೆ. ಆತಂಕ ಬೇಡ.
ಮೀನ
ಎಲ್ಲ ವಿಧದಲ್ಲೂ ಇಂದು ನಿಮಗೆ ಯಶಸ್ವಿ ದಿನ. ವೃತ್ತಿಯಲ್ಲಿ, ಕೌಟುಂಬಿಕವಾಗಿ ನಿಮಗೆ ಪೂರಕ ಬೆಳವಣಿಗೆ. ಸಮಸ್ಯೆ ಪರಿಹಾರ.



