ದಿನಭವಿಷ್ಯ: ಇಂದು ಶುಭ ಶುಕ್ರವಾರ ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ?

ಮೇಷ
ಬಾಕಿ ಉಳಿದಿರುವ ಕೆಲಸಗಳನ್ನು ಮೊದಲು ಪೂರೈಸಿ. ವ್ಯವಹಾರದಲ್ಲಿ ಎಲ್ಲವೂ ನಿಮಗೆ ಅನುಕೂಲಕರ ಆಗಲಿದೆ. ಕೌಟುಂಬಿಕ ನೆಮ್ಮದಿ.
ವೃಷಭ
ಪೂರ್ಣತೃಪ್ತಿ ತರುವ ಬೆಳವಣಿಗೆ ಇಂದು ಸಂಭವಿಸದು. ಸಣ್ಣ ಮಟ್ಟಿನ ಅತೃಪ್ತಿ ಉಳಿಯಲಿದೆ. ಮನಶ್ಶಾಂತಿ ದೂರ.
ಮಿಥುನ
ಅನುಕೂಲಕರ ದಿನ. ನಿಮ್ಮ ಕಾರ್ಯ ಉತ್ತಮ ಫಲ ನೀಡುತ್ತದೆ. ಸಂಬಂಧ ವೃದ್ಧಿ. ದಾಂಪತ್ಯದಲ್ಲಿ ಸಂತೋಷ. ಉದ್ಯಮದಲ್ಲಿ ಧನಲಾಭ.
ಕಟಕ
ವೃತ್ತಿಗೆ ಸಂಬಂಧಿಸಿದಂತೆ ತೃಪ್ತಿಕರ ಬೆಳವಣಿಗೆ. ಆರ್ಥಿಕವಾಗಿ ನೀವು ನೆರವು ನೀಡಿದವರಿಂದ ಪ್ರತಿಫಲ ಪಡೆಯುವಿರಿ. ಕೌಟುಂಬಿಕ ಕ್ಲೇಶ ನಿವಾರಣೆ.
ಸಿಂಹ
ಕಾರ್ಯ ಸುಗಮ. ಮನಸ್ಸಿಗೆ ನಿರಾಳತೆ. ಕುಟುಂಬ ಸದಸ್ಯರ ಜತೆ ಉತ್ತಮ ಬಾಂಧವ್ಯ. ಆರ್ಥಿಕವಾಗಿ ಸಮಾಧಾನಕರ.
ಕನ್ಯಾ
ವೃತ್ತಿಯಲ್ಲೂ, ಮನೆಯಲ್ಲೂ ಹೆಚ್ಚಿನ ಹೊಣೆಗಾರಿಕೆ. ಅದನ್ನು ನಿಭಾಯಿಸಲು ಪ್ರಯತ್ನಿಸಿ. ಇದರ ಮಧ್ಯೆ ಆರೋಗ್ಯ ಕಡೆಗಣಿಸಬೇಡಿ.
ತುಲಾ
ಎಲ್ಲಾ ಕೆಲಸ ಬೇಗನೆ ಮುಗಿಸಿಕೊಳ್ಳಿ. ಬಳಿಕ ನಿಮಗೆ ವಿರಾಮ ಸಿಗಲಾರದು. ಏಕಾಗ್ರತೆ ಕೆಡಿಸುವಂತಹ ಸನ್ನಿವೇಶ ಎದುರಾದೀತು. ಸಹನೆಯಿಂದಿರಿ.
ವೃಶ್ಚಿಕ
ಸಹೋದ್ಯೋಗಿಗಳು ನಿಮ್ಮ ವಿರುದ್ಧವಾಗುವರು. ತಕ್ಷಣಕ್ಕೆ ಪ್ರತಿಕ್ರಿಯಿಸದಿರಿ. ಆಲೋಚಿಸಿ ಕ್ರಮ ತೆಗೆದುಕೊಳ್ಳಿ. ಸಾಂಸಾರಿಕ ನೆಮ್ಮದಿ ಕಲಕಲಿದೆ.
ಧನು
ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಕಳೆದು ಹೋದ ವಿಷಯಗಳಿಗೆ ಚಿಂತಿಸದಿರಿ. ಮನೋಭಾವ ಬದಲಿಸಿಕೊಳ್ಳಿ. ಶಾಂತ ಮನಸ್ಸು ಬೆಳೆಸಿ.
ಮಕರ
ಕಠಿಣ ಗುರಿ ಸಾಧಿಸುವ ಪ್ರಯತ್ನದಲ್ಲೇ ನಿಮ್ಮ ದಿನ ಕಳೆದು ಹೋಗುತ್ತದೆ. ಉಳಿದ ವಿಷಯಗಳು ಗೌಣ. ಪರೀಕ್ಷೆಯಲ್ಲಿ ಯಶ.
ಕುಂಭ
ಅತಿಯಾದ ಕೆಲಸ. ಅದರಲ್ಲೇ ಸಂತೋಷ ಕಾಣುವಿರಿ. ಆರೋಗ್ಯಕರ ಆಹಾರ ಸೇವಿಸಿರಿ.
ಮೀನ
ಇಂದು ವೃತ್ತಿಯ ಒತ್ತಡ ಕಡಿಮೆ. ಹಾಗಾಗಿ ಪ್ರೀತಿಪಾತ್ರರ ಜತೆ ನಿರಾಳ ಸಮಯ ಕಳೆಯಲು ಅವಕಾಶ. ಹಣದ ಚಿಂತೆ ನಿವಾರಣೆ. ಬಂಧು ನೆರವು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!