September 28, 2026
Monday, September 28, 2026
spot_img

ದಿನಭವಿಷ್ಯ: ವೃತ್ತಿರಂಗದಲ್ಲಿ ಮೇಲುಗೈ ಸಾಧಿಸುವಿರಿ, ದೀರ್ಘಕಾಲದ ಸಮಸ್ಯೆಗೆ ಇಂದು ಮುಕ್ತಿ ಸಿಗಲಿದೆ

ಮೇಷ.
 ವೃತ್ತಿಯಲ್ಲಿ ಎಲ್ಲ ಸುಸೂತ್ರ. ಆತ್ಮವಿಶ್ವಾಸ ಅಧಿಕ. ಮೇಲಧಿಕಾರಿಗಳ ಪ್ರಶಂಸೆ. ಸಂಬಂಧದಲ್ಲಿ ಬಿರುಕು ಮೂಡದಂತೆ ಎಚ್ಚರ ವಹಿಸಿರಿ.  
ವೃಷಭ
ನಿಮ್ಮ ಮೇಲೆ ತಕ್ಷಣದ ಪರಿಣಾಮ ಬೀರುವ ವಿಷಯಕ್ಕೆ ಆದ್ಯತೆ ಕೊಡಿ. ನಕಾರಾತ್ಮಕ ವಿಚಾರ ಬದಿಗೆ ಸರಿಸಿ. ದೃಢ ನಿಲುವಿರಲಿ.    
ಮಿಥುನ
ನಿಮಗೆ ಸಂಬಂಧ ಪಡದ ವಿಚಾರದಲ್ಲಿ ಅನವಶ್ಯ ಚಿಂತೆ ಮಾಡುವಿರಿ. ನೀವಾಗಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವಿರಿ.  
ಕಟಕ
ಶುಭ ಸಂಕೇತವನ್ನು ಗ್ರಹಗತಿ ತೋರಿಸುತ್ತಿದೆ.  ಮುಖ್ಯ ಚಿಂತೆಯೊಂದು ಪರಿಹಾರ ಕಾಣಲಿದೆ. ನಿಮ್ಮ ಪ್ರಗತಿಗೆ  ಪೂರಕ ಸನ್ನಿವೇಶ ಸೃಷ್ಟಿಯಾಗಲಿದೆ.  
ಸಿಂಹ
ಯಾವುದೇ ಕೊರತೆ ಇಂದು ಬಾಧಿಸದು. ಆದರೂ ನಿಮ್ಮ ಅಸಂತೃಪ್ತಿ ತಣಿಯದು.  ನಿಮಗೆ ಬೇಕಾದುದೇನು ಎಂಬ ಬಗ್ಗೆ ಸ್ಪಷ್ಟ ನಿಲುವು ತಾಳಿ.        
ಕನ್ಯಾ
ಒತ್ತಡ ಹಾಗೂ ಬಸವಳಿಕೆ. ಬಯಸಿದ ಕಾರ್ಯ ನಿಯಂತ್ರಣ  ತಪ್ಪಿ ಹೋದೀತು. ಸಂಬಂಧದಲ್ಲಿ ಋಣಾತ್ಮಕ ಚಿಂತನೆ ನುಸುಳಬಹುದು.
ತುಲಾ
ಸಂವಹನ ಕಲೆಯಲ್ಲಿ ನೀವು ನಿಪುಣರು. ಇದು ನಿಮಗೆ ಹೆಚ್ಚು ನೆರವಿಗೆ ಬರಲಿದೆ. ವೃತ್ತಿಯಲ್ಲಿ ಸಂದಿಗ್ಧತೆ ತೋರೀತು. ಮುಕ್ತ ಮನಸ್ಸಿರಲಿ.      
ವೃಶ್ಚಿಕ
ನಿಮ್ಮ ಭೀತಿ, ಆತಂಕ ಹೋಗಲಾಡಿಸಲು ಪ್ರಯತ್ನ ಪಡಿ. ಆಪ್ತರ ಜತೆ ಭಾವನೆ ಹಂಚಿಕೊಳ್ಳಿ. ನಿಮ್ಮನ್ನು ಪೂರ್ಣವಾಗಿ ಅರಿತವರ ನೆರವು ಪಡಕೊಳ್ಳದಿರಿ.    
ಧನು
ನೀವು ಉದ್ದೇಶಿಸಿದ ಕಾರ್ಯ ಇಂದು ಸಾಧ್ಯ ಆಗದಿರಬಹುದು. ಹತಾಶೆ ಬೇಡ, ನಾಳೆಯೆಂಬುದು ಇದ್ದೇ ಇದೆ. ಮರಳಿ ಪ್ರಯತ್ನವ ಮಾಡಿರಿ.  
ಮಕರ
ವಿವಾದದಿಂದ ದೂರವಿರಿ. ನೀವು ಬಯಸದಿದ್ದರೂ ಕೆಲವರು ತಮ್ಮ ಬಿಕ್ಕಟ್ಟಿನಲ್ಲಿ ನಿಮ್ಮನ್ನು ಎಳೆಯಬಹುದು. ಅವರಿಂದ ದೂರವಿರಿ.  
ಕುಂಭ
ವೃತ್ತಿಯಲ್ಲಿ ಕೆಲವು ಅನುಚಿತ ಬೆಳವಣಿಗೆ. ಮನಸ್ಸಿಗೆ ಬೇಸರ. ಕೆಲವರ ವರ್ತನೆಯೂ ಅಸಹನೆ ತರಲಿದೆ.   ಆರೋಗ್ಯದ ಬಗ್ಗೆ ಗಮನ ಕೊಡಿ.  
 ಮೀನ
ದೈನಂದಿನ ಕಾರ್ಯದ ಮಧ್ಯೆಯೂ ನೀವು ಇಂದು ಹೆಚ್ಚು ಸಂತೋಷ ಕಾಣುವಿರಿ. ಒತ್ತಡವೊಂದು ನಿವಾರಣೆ. ಆಪ್ತರ ಸಾಧನೆ ತೃಪ್ತಿ ತರುವುದು.  

Must Read