July 19, 2026
Sunday, July 19, 2026
spot_img

ದಿನಭವಿಷ್ಯ: ಮನಸ್ಸಿನ ಏಕಾಗ್ರತೆಗೆ ಭಂಗ ಬರಲಿದೆ, ಮಹತ್ವದ ಕಾರ್ಯಕ್ಕೆ ಕೈ ಹಾಕದಿರಿ

ಮೇಷ
ಮನಸ್ಸಿನ ಏಕಾಗ್ರತೆಗೆ ಭಂಗ ಬರಲಿದೆ. ಕೆಲಸದಲ್ಲಿ ತಪ್ಪಾದೀತು. ಸಂಗಾತಿ ಜತೆ ಭಿನ್ನಮತ. ಅನಿರೀಕ್ಷಿತ ಖರ್ಚು. ಮಹತ್ವದ ಕಾರ್ಯಕ್ಕೆ ಕೈ ಹಾಕದಿರಿ.
ವೃಷಭ
ವೃತ್ತಿಯಲ್ಲಿ ಗುಣಾತ್ಮಕ ಬೆಳವಣಿಗೆ. ಆದರೆ ಖಾಸಗಿ ಬದುಕಲ್ಲಿ ಹೊಸ ಸಮಸ್ಯೆ. ಹಣದ ಹರಿವು ಸರಾಗ. ಆರ್ಥಿಕ ಕೊರತೆ ಬಾಧಿಸದು.
ಮಿಥುನ
ಸಹೋದ್ಯೋಗಿ ನಿಮ್ಮ ಮೇಲೆ ಮೇಲುಗೈ ಸಾಧಿಸುವುದು ನಿಮಗೆ ತೊಂದರೆ ತರಬಹುದು. ಲಾಭನಷ್ಟ ಎರಡನ್ನೂ ಇಂದು ಅನುಭವಿಸುವಿರಿ.
ಕಟಕ
ಕಾಲಮಿತಿಯಲ್ಲಿ ಕೆಲಸ ಪೂರೈಸಬೇಕಾದ ಒತ್ತಡ. ಆರ್ಥಿಕ ಲಾಭ. ಏಕಾಂಗಿಗಳಿಗೆ ಸಂಗಾತಿ ಸಿಗಬಹುದು. ಸಂಬಂಧ ಗಾಢವಾದೀತು.
ಸಿಂಹ
ಆತ್ಮೀಯರ ಬಳಿ ನಿಮ್ಮ ಭಾವನೆ ವ್ಯಕ್ತಪಡಿಸಿ. ಅವರಿಂದ ಸೂಕ್ತ ಸ್ಪಂದನೆ ಸಿಗಲಿದೆ. ಆರ್ಥಿಕ ಉನ್ನತಿ. ವೃತ್ತಿಪರರಿಗೆ ಉತ್ತಮ ಅವಕಾಶ ಸಿಗಲಿದೆ.
ಕನ್ಯಾ
ವೃತ್ತಿಯಲ್ಲಿ ಸ-ಲ ದಿನ. ಅವಕಾಶ ಹೆಚ್ಚು. ಸಂಗಾತಿ ಜತೆ ಜಗಳ ಸಂಭವ. ಆದರೆ ಅದು ಅಲ್ಪಕಾಲೀನ. ಖರ್ಚು ಮಿತಗೊಳಿಸಿ.
ತುಲಾ
ಕಾರ್ಯ ವಿಳಂಬ. ತಾಳ್ಮೆಯಿಂದ ವ್ಯವಹರಿಸಿ. ಭಾವುಕ ಪ್ರಸಂಗ ಎದುರಿಸಿದರೂ ಮನಸ್ಸು ನಿಯಂತ್ರಿಸಿ. ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಿ.
ವೃಶ್ಚಿಕ
ಹೆಚ್ಚುತ್ತಿರುವ ವೆಚ್ಚ ಚಿಂತೆ ತಂದೀತು. ಆಹಾರ ಸೇವನೆ ಹೊಟ್ಟೆ ಕೆಡಿಸದಂತೆ ಎಚ್ಚರ ವಹಿಸಿ. ಸಣ್ಣ ಮಾತು ಕೌಟುಂಬಿಕ ಕಲಹ ತಂದೀತು, ಜಾಗ್ರತರಾಗಿ.
ಧನು
ಸಕಾಲದಲ್ಲಿ ಕೆಲಸ ಮುಗಿಸಲು ಆದ್ಯತೆ ಕೊಡಿ. ಅತೃಪ್ತಿ ತರುವ ಬೆಳವಣಿಗೆ.ಪ್ರೀತಿಯಲ್ಲಿ ಹಿನ್ನಡೆ. ಆರ್ಥಿಕ ಪ್ರಗತಿ ಕುಂಠಿತವಾದೀತು.
ಮಕರ
ಕೆಲ ವಿಷಯಗಳಲ್ಲಿ ಇಂದು ಏರಿಳಿತ ಕಾಣುವಿರಿ. ನಿಮ್ಮ ಖಾಸಗಿ ಬದುಕು ಹಾಳು ಮಾಡಲು ಕೆಲವರ ಯತ್ನ ನಡೆದೀತು.ಕೋಪಾವೇಶ ನಿಯಂತ್ರಿಸಿ.
ಕುಂಭ
ವೃತ್ತಿಯಲ್ಲಿ ಹಿನ್ನಡೆ. ಸರಿಯಾಗಿ ಯೋಚಿಸಿ ನಿರ್ಧಾರ ತಾಳಿ. ಮನೆ ನವೀಕರಣ ಕಾರ್ಯ. ಸಂಬಂಧದಲ್ಲಿ ಏರುಗತಿ.ಆಪ್ತರಿಂದ ಸಂತೃಪ್ತಿ.
ಮೀನ
ದಿನವಿಡೀ ಸ್ತಬ್ಧ ಗೊಂಡ ಭಾವನೆ. ಯಾವುದೇ ಕೆಲಸ ಮುಂದೆ ಸಾಗುತ್ತಿಲ್ಲ ಎಂದು ಅನಿಸೀತು. ಹಿರಿಯರಿಗೆ ಆರೋಗ್ಯ ಸಮಸ್ಯೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !