July 17, 2026
Friday, July 17, 2026
spot_img

ದಿನಭವಿಷ್ಯ: ಆಡುವ ನುಡಿಯು ಜಗಳಕ್ಕೆ ಕಾರಣ ಆದೀತು, ಶಾಂತಿ ಕಾಪಾಡಲು ಆದ್ಯತೆ ನೀಡಿ

ಮೇಷ
ಹದ ತಪ್ಪಿದ ಮಾತು ಸಂಘರ್ಷಕ್ಕೆ ಕಾರಣ ಆದೀತು. ಸೌಹಾರ್ದ ವಾತಾವರಣ ಉಳಿಸಲು ಆದ್ಯತೆ ಕೊಡಿ. ಕಾಲು,  ಬೆನ್ನು ನೋವು ಸಂಭವ.
ವೃಷಭ
ಕೌಟುಂಬಿಕ ಬಿಕ್ಕಟ್ಟು. ಸಣ್ಣ ವಿಷಯ ದೊಡ್ಡ ವಾಗ್ವಾದಕ್ಕೆ ಕಾರಣ. ಸಮಸ್ಯೆ ಸದ್ಯಕ್ಕೆ ಪರಿಹಾರದ ಲಕ್ಷಣ ಕಾಣಿಸುತ್ತಿಲ್ಲ. ತಾಳ್ಮೆಯಿಂದ ವರ್ತಿಸಿ.  
ಮಿಥುನ
ಕೆಲಸದ ಒತ್ತಡ ಕಡಿಮೆ. ಕಾಲಮಿತಿಯಲ್ಲಿ ಕೆಲಸ ಪೂರ್ಣ.  ಆರ್ಥಿಕ ಪ್ರಗತಿ ಸಾಧಾರಣ. ನೆರೆಕರೆ ಜತೆ ಸಂಘರ್ಷ ನಡೆದೀತು.    
ಕಟಕ
   ವೃತ್ತಿಯಲ್ಲಿ ನಿಮ್ಮ ವಿರೋಽಗೆ ಮೇಲುಗೈ. ಲಾಭನಷ್ಟ ಎರಡನ್ನೂ ಇಂದು ಅನುಭವಿಸುವಿರಿ. ಹಣ ಗಳಿಕೆಯ ಹಾದಿ ಕಠಿಣವಾದೀತು.            
ಸಿಂಹ
 ಹೆದಗೆಟ್ಟ ಸಂಬಂಧ ಸುಧಾರಿಸಲು ಕ್ರಮ ತೆಗೆದುಕೊಳ್ಳಿ. ಈ ವಿಚಾರದಲ್ಲಿ ಬಿಗುಮಾನ ಬೇಡ. ವೃತ್ತಿಯಲ್ಲಿ ಪ್ರತಿಸ್ಪರ್ಧೆ ಹೆಚ್ಚಲಿದೆ.        
ಕನ್ಯಾ
ಮನೆಯಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದರೂ ಬಳಿಕ ತಿಳಿಯಾಗಲಿದೆ. ಸಹನೆಯ ನಡೆ ಅವಶ್ಯ. ಮಾತಿಗೆ ಮಾತು ಕೂಡಿಸದಿರಿ. ವೃತ್ತಿಯಲ್ಲಿ ಸಮಾಧಾನ.          
ತುಲಾ
ಸಂಘಟಿತವಾಗಿ ಕೆಲಸ ನಿರ್ವಹಿಸಿ. ಇಲ್ಲವಾದರೆ ಗೊಂದಲ. ಧನಹಾನಿ ಸಂಭವ. ಕೆಲವರ ಮಾತು ನೋವು ತರಬಹುದು.                  
ವೃಶ್ಚಿಕ
ಕಾರ್ಯ ವಿಳಂಬ. ಭಾವುಕರಾಗಿ ವರ್ತಿಸದಿರಿ. ಅದರಿಂದ ಸಂಬಂಧಕ್ಕೆ ಹಾನಿ. ಚರ್ಮದ ಅಲರ್ಜಿ ಕಾಡಬಹುದು. ಆಹಾರ ಹಿತಮಿತವಾಗಿರಲಿ.  
ಧನು
 ಕೆಲಸದ ಮೇಲೆ ಹೆಚ್ಚು ಗಮನ ಕೊಡಿ. ಮನಸ್ಸು ಎಲ್ಲೋ  ಹಾಯದಂತೆ ಎಚ್ಚರ ವಹಿಸಿ. ಕೆಲವರ ಟೀಕೆ ಎದುರಿಸುವಿರಿ.  
ಮಕರ
ನಿಮ್ಮ ಕಾರ್ಯ ಮುಗಿಸಲು ಹೆಚ್ಚಿನ ಶ್ರಮ ಆಗತ್ಯವಾದೀತು. ಸುಗಮವಾಗಿ ಆಗದು. ನಿಮ್ಮ ಕಾರ್ಯಕ್ಕೆ ಕೆಲವರ ಅಡ್ಡಗಾಲು.  
ಕುಂಭ
 ವಿರಾಮವಿಲ್ಲದ ದಿನ. ಸಂಗಾತಿ ಜತೆ ವಿರಸವಾದೀತು. ಕೆಲ ವಿಷಯಗಳನ್ನು ಚರ್ಚೆಗೆ ಎತ್ತದಿರುವುದೇ ಒಳಿತು. ಕಂಡೂ ಕಾಣದಂತಿರಿ.  
 ಮೀನ
ವೃತ್ತಿಯಲ್ಲಿ ನಿಮಗೆ ಪೂರಕವಾಗದ ಬೆಳವಣಿಗೆ. ಹೇಳಬೇಕಾದ ವಿಷಯದಲ್ಲಿ ಮನಬಿಚ್ಚಿ ಮಾತಾಡಿ. ಮನದಲ್ಲಿಟ್ಟು ಕೊರಗಬೇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !