ದಿನಭವಿಷ್ಯ: ಇಂದು ಶುಭ ಶುಕ್ರವಾರ ಯಾರಿಗೆ ಒಲಿಯಲಿದ್ದಾಳೆ ಅದೃಷ್ಟ ಲಕ್ಷ್ಮಿ

ಮೇಷ
ಬಿಡುವಿಲ್ಲದ ದಿನ. ಶ್ರಮಕ್ಕೆ ತಕ್ಕ ಪ್ರತಿಫಲ. ಕರ್ತವ್ಯ ನಿಮಿತ್ತ ಪ್ರವಾಸ. ಕೌಟುಂಬಿಕ ಬದ್ಧತೆ  ಪೂರೈಸುವ ಅವಕಾಶ ಸಿಗಲಿದೆ.
ವೃಷಭ
ಈ ತನಕದ ಸಾಧನೆ ಮೆಲುಕು ಹಾಕುವ ಸಮಯ. ತೃಪ್ತಿಯ ಭಾವ. ಖರ್ಚು ಕಡಿಮೆ ಮಾಡಿ. ಸಹೋದ್ಯೋಗಿಯಿಂದ  ನೆರವು ಸಿಗುವುದು.
ಮಿಥುನ
ಇಂದು ಯಶಸ್ಸು ಸಂಪಾದಿಸುವಿರಿ.  ಮುಖ್ಯ ಉದ್ದೇಶವೊಂದು ಇಂದು ಸಫಲವಾಗಲಿದೆ. ಅಡ್ಡಿಗಳ ನಿವಾರಣೆ. ಆರೋಗ್ಯಕ್ಕೆ ಗಮನ ಕೊಡಿ.
ಕಟಕ
ಪ್ರತಿಕ್ಷಣ ಬದುಕು ಬದಲಾಗುತ್ತಿರುತ್ತದೆ. ಇಂದಿದ್ದಂತೆ ನಾಳೆಯಿಲ್ಲ. ಈ ಸತ್ಯದ ಅರಿವು ನಿಮಗೆ ಆಗಲಿದೆ. ಹೊಂದಾಣಿಕೆಯ ಬದುಕು ಮುಖ್ಯ.
ಸಿಂಹ
ಉದ್ಯೋಗದಲ್ಲಿ ಒತ್ತಡ. ಗೊಂದಲ ಮಾಡಿಕೊಳ್ಳದಿರಿ. ಯೋಜಿಸಿ ಕಾರ್ಯ ಎಸಗಿ. ತಪ್ಪು ಮಾತು ವಾಗ್ವಾದ ಸೃಷ್ಟಿಸೀತು.
ಕನ್ಯಾ
ದಿವಿಡೀ ಏರುಪೇರು ಅನುಭವಿಸುವಿರಿ.     ಕುಟುಂಬದಲ್ಲಿ ಸಣ್ಣ ಭಿನ್ನಮತ ಉಂಟಾದೀತು. ಉದ್ಯೋಗ ಹುಡುಕಾಟ ಫಲ ನೀಡಲಿದೆ.

ತುಲಾ
ಯಶಸ್ವಿ ದಿನ. ನಿಮ್ಮ ಸಂವಹನ ಸಾಮರ್ಥ್ಯ ಅಡ್ಡಿ ನಿವಾರಿಸುವುದು. ಸವಾಲನ್ನು ಸಮರ್ಥವಾಗಿ ಎದುರಿಸುವಿರಿ. ಮನೆ ಯಲ್ಲಿ ವಾಗ್ವಾದ ತಪ್ಪಿಸಿ.

ವೃಶ್ಚಿಕ
ಅಹಿತಕರ ಬೆಳವಣಿಗೆ ಸಂಭವ. ಸೈರಣೆಯಿಂದ ವರ್ತಿಸಿ. ಪರಿಸ್ಥಿತಿ ವಿಕೋಪಕ್ಕೆ ತೆರಳಲು ಅವಕಾಶ ಕೊಡದಿರಿ. ಸೂಕ್ತ ನೆರವು ಒದಗಲಿದೆ.
ಧನು
ಪರಿಸ್ಥಿತಿ ನಿಮ್ಮ ಪರವಾಗಿರುವ ರೀತಿಯಲ್ಲಿ  ಕಾರ್ಯವೆಸಗಿ. ಪ್ರತಿಕೂಲ ಸನ್ನಿವೇಶ ಉಂಟಾಗುವ ಸಾಧ್ಯತೆ. ಆಪ್ತರು ಮುನಿಸಿಕೊಂಡಾರು.

ಮಕರ
ಬಳಿಕ ಪಶ್ಚಾತ್ತಾಪ ಪಡುವಂತಹ ಕಾರ್ಯ ಎಸಗದಿರಿ. ಎಲ್ಲರ ಜತೆ ಒಳಿತಿನ ನಡೆನುಡಿ ಒಳಿತು.   ಆರ್ಥಿಕವಾಗಿ ಉತ್ತಮ ದಿನ. ಧನವ್ಯಯ ತಪ್ಪಲಿದೆ.

ಕುಂಭ
ಮನೆಯಲ್ಲಿ ನಿರಾಳ ಭಾವದಿಂದ ವ್ಯವಹರಿಸಿ. ಇಲ್ಲದ ವಿವಾದ ಸೃಷ್ಟಿಸಲು ಹೋಗದಿರಿ. ಕೆಲದಿನಗಳ ಆರೋಗ್ಯ ಸಮಸ್ಯೆ ನಿವಾರಣೆ.
ಮೀನ
ಪ್ರವಾಹದ ದಿಕ್ಕಿನಲ್ಲೇ ಈಜು ಒಳ್ಳೆಯದು. ಯಾರನ್ನೂ ಎದುರು ಹಾಕಿಕೊಳ್ಳಬೇಡಿ. ಹೊಂದಾಣಿಕೆ ಮುಖ್ಯ. ಆರೋಗ್ಯ ಸುಸ್ಥಿರ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!