ದಿನ ಭವಿಷ್ಯ: 12 ರಾಶಿಗಳ ಮೇಲೆ ಸೂರ್ಯನ ಪ್ರಭಾವ, ಯಾರಿಗೆ ಶುಭ, ಅಶುಭ?

ಮೇಷ
ವೃತ್ತಿಯಲ್ಲೂ, ಕುಟುಂಬದಲ್ಲೂ ಅಧಿಕ ಜವಾಬ್ದಾರಿ. ಅದನ್ನು ಸರಿಯಾಗಿ ನಿಭಾಯಿಸಿ. ಆತ್ಮೀಯರು ನಿಮ್ಮ ನೆರವಿಗೆ ಬರುವರು. ವ್ಯಯ ಅಧಿಕ.

ವೃಷಭ
ವೃತ್ತಿಯಲ್ಲಿ ಅಧಿಕ ಒತ್ತಡ. ಒಂದರ ನಂತರ ಮತ್ತೊಂದು ಕೆಲಸ ನಿಮ್ಮ ಹೆಗಲೇರುವುದು. ಇತರರ ಅಸಹಕಾರ ಅಸಹನೆ ತರಬಹುದು. ಸಂಯಮ ಮುಖ್ಯ.

ಮಿಥುನ
ವೃತ್ತಿಯಲ್ಲಿ ಹೊಸ ಪ್ರಯೋಗ ನಿಮಗೆ ಉತ್ತಮ ಫಲ ನೀಡುವುದು. ತಲೆನೋವು, ರಕ್ತದೊತ್ತಡದ ಸಮಸ್ಯೆ ಕಾಡಬಹುದು.

ಕಟಕ
ಹೊಸ ವ್ಯವಹಾರಕ್ಕೆ ಕೈಹಾಕುವ ಮೊದಲು ಕೌಟುಂಬಿಕ ಬದ್ಧತೆ ಪೂರೈಸಿಕೊಳ್ಳಿ. ಬಳಿಕ  ನಿಮಗೆ ಸಾಕಷ್ಟು ಸಮಯ ಸಿಗಲಾರದು. ಹಣದ ವ್ಯಯ ಅಧಿಕ.

ಸಿಂಹ
ಸಂಬಂಧದ ವಿಚಾರದಲ್ಲಿ ಉಡಾಫೆ ಸಲ್ಲದು. ಅದನ್ನು ಗಂಭೀರವಾಗಿ ಪರಿಗಣಿಸಿ. ಸಂಬಂಧ ಕೆಟ್ಟರೆ ಸರಿಪಡಿಸುವುದು ಕಷ್ಟ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ
ಆಪ್ತರೊಂದಿಗೆ ಭಿನ್ನಮತ ಏರ್ಪಡಬಹುದು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ವೃತ್ತಿಗೆ ಸಂಬಂಧಿಸಿ ಶುಭ ಬೆಳವಣಿಗೆ. ಆರ್ಥಿಕ ಉನ್ನತಿ.

ತುಲಾ
ಹೊಸ ವ್ಯವಹಾರಕ್ಕೆ ಹೂಡಿಕೆ ಮಾಡುವ ಮುನ್ನ ಆಲೋಚಿಸಿ. ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಕೌಟುಂಬಿಕ ಸಹಕಾರ ಪಡೆಯಿರಿ.

ವೃಶ್ಚಿಕ
ಆರೋಗ್ಯ ಸಮಸ್ಯೆ ಇರುವವರು ಇಂದು ಎಚ್ಚರ ವಹಿಸಿ. ಔಷಧ ಸೇವನೆ ಮರೆಯದಿರಿ. ಕುಟುಂಬದಲ್ಲಿ ಉದ್ವಿಗ್ನ ಸ್ಥಿತಿ ಉಂಟಾದೀತು. ಸಹನೆ ವಹಿಸಿರಿ.

ಧನು
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಇತರರ ಅಸಹಕಾರ. ಕೌಟುಂಬಿಕ ಸಮಸ್ಯೆ ಪರಿಹಾರ, ಅದರಿಂದ ನೆಮ್ಮದಿ.

ಮಕರ
ನಿಮ್ಮಿಂದ ಇತರರು ಬಹಳಷ್ಟನ್ನು ನಿರೀಕ್ಷೆ ಮಾಡುತ್ತಾರೆ. ಅವರಿಗೆ ನಿರಾಶೆ ತರದಿರಿ. ಆಹಾರ ಸೇವನೆಯಲ್ಲಿ ಹಿತಮಿತ ಸಾಧಿಸಿ. ಆರೋಗ್ಯ ಕಾಪಾಡಿಕೊಳ್ಳಿ.

ಕುಂಭ
ನಿಮ್ಮ ಆರ್ಥಿಕ ಪರಿಸ್ಥಿತಿ ಕುರಿತು ಹೆಚ್ಚಿನ ಗಮನ ಹರಿಸಿರಿ. ಹಠಾತ್ ಖರ್ಚಿನ ಪ್ರಸಂಗ ಉಂಟಾದೀತು. ಕೌಟುಂಬಿಕ ಅಸಹಕಾರ ಎದುರಿಸುವಿರಿ.

ಮೀನ
ನಿಮ್ಮ ಆರೋಗ್ಯ ಸುಧಾರಣೆಗೆ,  ಬದುಕು  ಉತ್ತಮಗೊಳಿಸಲು  ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಕೆಟ್ಟ ಆಹಾರ ದೂರವಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!