ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರು ಹಗಲು ರಾತ್ರಿ ಕಷ್ಟ ಪಟ್ಟು ಹಾಲಿನ ಡೈರಿಗಳಿಗೆ ಶುದ್ದ ಹಾಲು ಸರಬರಾಜು ಮಾಡಿದರೆ, ಇತ್ತ ಸ್ವತಃ ಡೈರಿಗಳ ಸಿಬ್ಬಂದಿಗಳು ಶುದ್ದ ಹಾಲಿಗೆ ನೀರು ಮಿಶ್ರಣ ಮಾಡಿ ಹಾಲಿನ ಒಕ್ಕೂಟ ಹಾಗೂ ನಂದಿನಿ ಹಾಲಿನ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಬಯಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೆರೆ ಹಾಲಿನ ಡೈರಿ ಬಿ.ಎಂ.ಸಿ ಕೇಂದ್ರದಲ್ಲಿ ಹಸುವಿನ ಹಾಲಿಗೆ ಮನಸ್ಸೊ ಇಚ್ಚೆ ನೀರು ಮಿಶ್ರಣ ಮಾಡಿ ನಂದಿನಿ ಗ್ರಾಹಕರು ಹಾಗೂ ಚಿಮುಲ್ಗೆ ವಂಚನೆ ಮಾಡಲು ಯತ್ನಿಸಿದ್ದಾರೆ.
ಮಾಡಿಕೆರೆ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಹಾಲಿನ ಡಂಪ್ ಟ್ಯಾಂಲ್ಗೆ ನೀರು ಕಲಬೆರಕೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಮೆಗಾ ಡೈರಿಗೆ ಸರಬರಾಜು ಮಾಡಿ ಈಗ ಸಿಕ್ಕಿ ಬಿದ್ದಿದ್ದಾರೆ. ಸ್ವತಃ ಡೈರಿ ಸಿಬ್ಬಂದಿಗಳ ಕಳ್ಳಾಟವನ್ನು ಮತ್ತೊರ್ವ ಸಿಬ್ಬಂದಿ ತಮ್ಮ ಮೊಬೈಲ್ನಲ್ಲಿ ರೆಕಾರ್ಡ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇನ್ನೂ ಮಾಡಿಕೆರೆ ಹಾಲಿನ ಡೈರಿ ಬಿ.ಎಂ.ಸಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಹಾಲಿನ ಮಿಶ್ರಣ ಅಕ್ರಮ ವಿಚಾರ ಬಯಲಾಗುತ್ತಿದ್ದಂತೆ ಸ್ವತಃ ಚಿಮುಲ್ ಎಂ.ಡಿ. ಶ್ರೀನಿವಾಸಗೌಡ ಅಲರ್ಟ್ ಆಗಿದ್ದು, ಡೈರಿಯ ಸಹಾಯಕ ಚೇತನ್ ನನ್ನು ಕೆಲಸದಿಂದ ವಜಾ ಮಾಡಿದ್ದಾರೆ.