SKIN CARE | ಕಬ್ಬಿನ ಜ್ಯೂಸ್‌ ಆರೋಗ್ಯಕ್ಕಷ್ಟೇ ಅಲ್ಲ ಸ್ಕಿನ್‌ಗೂ ಬೆಸ್ಟ್‌! ಏನೆಲ್ಲಾ ಲಾಭ ಇದೆ ನೋಡಿ..

ಕಬ್ಬಿನ ಜ್ಯೂಸ್‌ ವಾರಕ್ಕೊಮ್ಮೆಯಾದ್ರೂ ಸೇವನೆ ಮಾಡಿ. ಇದು ಆರೋಗ್ಯಕ್ಕೆ ತುಂಬಾನೇ ಲಾಭದಾಯಕ. ಹೆಲ್ತ್‌ ಜೊತೆಗೆ ಸ್ಕಿನ್‌ಗೂ ಕಬ್ಬಿನ ಜ್ಯೂಸ್‌ ಉತ್ತಮ ಅನ್ನೋ ವಿಚಾರ ಗೊತ್ತಿದೆಯಾ?

  • ಚರ್ಮವನ್ನು ಕಾಂತಿಯುತವಾಗಿಸುವಲ್ಲಿ ಕಬ್ಬಿನ ರಸವು ತುಂಬಾ ಉತ್ತಮವಾಗಿದೆ. ಇದಕ್ಕಾಗಿ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಕಬ್ಬಿನ ರಸದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಚರ್ಮದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.
  • ಕಬ್ಬಿನ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಮಿಕ್ಸ್​ ಮಾಡಬೇಕು. ಈ ಮಿಶ್ರಣದಿಂದ ಚರ್ಮದ ಮೇಲೆ ಕಾಲು ಗಂಟೆ ಮಸಾಜ್ ಮಾಡಬೇಕು. ಇದನ್ನು ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆಯಬೇಕಾಗುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮುಖದ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯು ಮೃದುವಾಗುತ್ತದೆ.
  • ಕಾಫಿ ಪುಡಿಗೆ ಸ್ವಲ್ಪ ಕಬ್ಬಿನ ರಸವನ್ನು ಮಿಶ್ರಣ ಮಾಡಬೇಕು. ಈ ಪೇಸ್ಟ್​ನ್ನು ಸ್ಕ್ರಬ್ ಆಗಿ ಬಳಸುವುದರಿಂದ ಚರ್ಮವು ಕಾಂತಿಯುತವಾಗುತ್ತದೆ.
  • ಕಬ್ಬಿನ ರಸ, ನಿಂಬೆ ರಸ, ದ್ರಾಕ್ಷಿ ರಸ, ಸೇಬಿನ ರಸ, ತೆಂಗಿನ ಹಾಲು ಇವೆಲ್ಲವನ್ನೂ ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮದಲ್ಲಿನ ಮೊಡವೆಗಳು, ಕಲೆಗಳು ನಿವಾರಣೆಯಾಗಿ ಚರ್ಮವು ಫಳ ಫಳ ಹೊಳೆಯುತ್ತದೆ.
  • ಚರ್ಮ ಕಾಂತಿಯುತವಾಗಿಸಲು ಕಬ್ಬಿನ ರಸದಿಂದ ತಯಾರಿಸಿದ ಐಸ್ ಕ್ಯೂಬ್‌ಗಳನ್ನು ಬಳಸುವುದು ಸಾಮಾನ್ಯ ಐಸ್ ಕ್ಯೂಬ್‌ಗಳಿಗಿಂತ ಎರಡು ಪಟ್ಟು ಪರಿಣಾಮಕಾರಿ ಕೆಲಸ ಮಾಡುತ್ತದೆ.
- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!