ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: 56 ಮಂದಿ ಸಾಧಕರು, 20 ಸಂಘಸಂಸ್ಥೆಗಳಿಗೆ ಪುರಸ್ಕಾರ

ಹೊಸದಿಗಂತ ವರದಿ, ಮಂಗಳೂರು:

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಸಂಘ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ 56 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ನ.೧ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಧಾನಸಭಾ ಸ್ಪೀಕರ್ ಸೇರಿದಂತೆ ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ.

೫೬ ಮಂದಿಗೆ ಜಿಲ್ಲಾ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ಕೃಷಿ, ವೈದ್ಯಕೀಯ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 56 ಮಂದಿಯನ್ನು ಜಿಲ್ಲಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮರ್ಸಿ ವೀಣಾ ಡಿಸೋಜ, (ಸಮಾಜ ಸೇವೆ) ಪಾಣಿಲ ಸತೀಶ್ಚಂದ್ರ ಸಾಲ್ಯಾನ್(ಕಂಬಳ), ಡಿ.ಬಿ.ಎಸ್.ಸಚ್ಚಿದಾನಂದ ರೈ(ವೈದ್ಯಕೀಯ ಕ್ಷೇತ್ರ), ಪದ್ಮನಾಭ ಕೋಟ್ಯಾನ್ (ಕೃಷಿ ), ಮುಹಮ್ಮದ್ ಹನೀಫ್(ಕ್ರೀಡೆ), ಡಾ.ಆನಂದ ವೇಣುಗೋಪಾಲ್(ವೈದ್ಯಕೀಯ ಕ್ಷೇತ್ರ)
ಕೃಷ್ಣ ಹೆಗ್ಡೆ (ಸಮಾಜಸೇವೆ), ಜೆ.ಆನಂದ ಸೋನ್ಸ್ (ಸಮಾಜಸೇವೆ), ಸೊಹೇಲ್ ಕಂದಕ್ (ಸಾಮಾಜಿಕ, ಕ್ರೀಡೆ), ದಯಾನಾಥ್ ಕೋಟ್ಯಾನ್ (ಸಮಾಜಸೇವೆ), ಹರ್ಬರ್ಟ್ ಡಿಸೋಜ (ಸಮಾಜಸೇವೆ), ಆರೂರು ಲಕ್ಷ್ಮೀ ರಾವ್ (ಸಮಾಜಸೇವೆ), ನಾಗೇಂದ್ರ ಕುಡುಪು (ವಿಶೇಷ ಪಂಚವಾದ್ಯ, ಚೆಂಡೆ, ಅತಿಥಿ ಕಲಾವಿದ), ವಿಲಿಯಂ ಆಂಟನಿ ಡಿಸೋಜ (ಪ್ರವಾಸೋದ್ಯಮ), ಪ್ರಭಾಕರ ಶ್ರೀಯಾನ್ (ಸಮಾಜಸೇವೆ), ಜಯರಾಮ್ (ಕಲೆ), ಮುನಿತಾ ವೇಗಸ್ (ಸಂಗೀತ), ಲೀಲಾಧರ (ಕಲೆ), ಅಬ್ದುಲ್ಲ ಮೊಯ್ದೀನ್ (ಸಮಾಜಸೇವೆ), ಗಂಗಾಧರ ದೇವಾಡಿಗ (ಕಲೆ), ಪುಷ್ಪರಾಜ್ ಬಿ.ಎನ್. (ಪತ್ರಿಕೋದ್ಯಮ), ಸುಖ್‌ಪಾಲ್ ಪೊಳಲಿ(ಪತ್ರಿಕೋದ್ಯಮ), ರೊನಾಲ್ಡ್ ಮಾರ್ಟಿಸ್ (ಸಮಾಜಸೇವೆ), ರಾಜೇಂದ್ರ ಶೇರಿಗಾರ್ (ಕಲೆ), ಬಾಬು ಪಿಲಾರ್ (ಸಮಾಜಸೇವೆ), ಚಂದ್ರಹಾಸ ಶೆಟ್ಟಿ ಮೋರ್ಲ (ಕೃಷಿ, ಸಾಮಾಜಿಕ ಕ್ಷೇತ್ರ), ಕೆ.ಹುಸೈನ್ (ಸಮಾಜಸೇವೆ), ರೊನಾಲ್ಡ್ ಫರ್ನಾಂಡಿಸ್ (ಕೃಷಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಯಕ್ಷಗಾನ), ರಶ್ಮಿತಾ ಜೈನ್ (ಶಿಕ್ಷಣ), ನಾರಾಯಣ ಪರವ (ಕಲೆ), ಪ್ರಕಾಶ್ ಆಚಾರ್ಯ (ಸಂಗೀತ), ಪದ್ಮನಾಭ ಶೆಟ್ಟಿಗಾರ್ (ಯಕ್ಷಗಾನ), ಉದಯ ಕುಮಾರ್ ಲಾಯಿಲ (ಸುಗಮ ಸಂಗೀತ, ಜಾನಪದ, ಕಲೆ), ವಸಂತಿ ಟಿ. ನಿಡ್ಲೆ (ಲೇಖಕಿ, ಯಕ್ಷಗಾನ), ಜಯಾನಂದ (ಸಮಾಜಸೇವೆ), ಮಹಮ್ಮದ್ ಹಾಜಿ ಕುಕ್ಕುವಳ್ಳಿ (ಸಮಾಜಸೇವೆ), ಜ್ಞಾನ ರೈ (ಬಹುಮುಖ ಪ್ರತಿಭೆ), ಎಂ. ಮಹಮ್ಮದ್ ಬಡಗನ್ನೂರು (ಸಮಾಜಸೇವೆ), ಎಂ.ವೇಣುಗೋಪಾಲ್ ಪುತ್ತೂರು (ಕಲೆ), ಕೇಶವ ಮಚ್ಚಿಮಲೆ (ಕಲೆ), ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ (ಸಮಾಜಸೇವೆ), ಬಿ. ಶೇಖರ ಭಂಡಾರಿ ಬನ್ನೂರು (ಕಲೆ), ದಯಾನಂದ ರೈ ಕೋರ್ಮಂಡ (ಕಲೆ), ಜೋನ್ ಸಿರಿಲ್ ಡಿಸೋಜ (ಕಂಬಳ), ಶೇಖರ ಪರವ (ದೈವಾರಾಧನೆ), ಸಂಜೀವ ಪೂಜಾರಿ (ಸಹಕಾರಿ ಕ್ಷೇತ್ರ, ಸಮಾಜಸೇವೆ), ಕೆ.ಎನ್. ಗಂಗಾಧರ ಆಳ್ವ (ಶಿಕ್ಷಣ), ಮೊಹಮ್ಮದ್ ಯಾಸೀರ್ ಕಲ್ಲಡ್ಕ (ಪುರಾತನ ವಸ್ತು ಸಂಗ್ರಹಾಲಯ), ಗೋಪಾಲ ಜೋಗಿ (ನಾಗಸ್ವರ ವಾದನ), ಮಹಮ್ಮದ್ ಹನೀಫ್ (ಸಾಮಾಜಿಕ), ಸದಾಶಿವ ಡಿ.ತುಂಬೆ (ಸಾಂಸ್ಕೃತಿಕ, ಕಲಾ ಸೇವೆ), ಕಡಬ ಶ್ರೀನಿವಾಸ ರೈ (ಕಲಾ), ಕುತ್ತಿಕಾರು ಕಿಂಞಣ್ಣ ಶೆಟ್ಟಿ (ಸಮಾಜಸೇವೆ). ಇವರು ಪ್ರಶಸ್ತಿಗೆ ಆಯ್ಕೆಯಾದ ಸಾಧಕರು.
ಪ್ರಶಸ್ತಿಗೆ ಆಯ್ಕೆಯಾದ ಸಂಘ ಸಂಸ್ಥೆಗಳು
ಕ್ರೀಡೆ, ಶಿಕ್ಷಣ ಕ್ಷೇತ್ರ ಮತ್ತು ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ತೋರಿರುವ ಒಟ್ಟು 20 ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಂಟರ ಸಂಘ ಬಜಪೆ ವಲಯ, ಒಲವಿನ ಹಳ್ಳಿ ಪುನರ್ವಸತಿ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರ,ಯುನೈಟೆಡ್ ಫ್ರೆಂಡ್ಸ್ ಬಿಜೈ, ದ ವಾಯ್ಸ್ ಆಫ್ ಬ್ಲಡ್ ಡೋನರ್‍ಸ್, ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು, ಶ್ರೀ ಜಯಲಕ್ಷ್ಮೀ ಫ್ರೆಂಡ್ಸ್ ಸರ್ಕಲ್, ಕರ್ನಾಟಕ ಸೇವಾ ವೃಂದ ಸುರತ್ಕಲ್, ಬಿಲ್ಲವ ಸಂಘ ಉರ್ವ ಅಶೋಕನಗರ, ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ಯುವಕ ಮಂಡಲ ದೇವಿಪುರ ತಲಪಾಡಿ, ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ, ನವೋದಯ ಫ್ರೆಂಡ್ಸ್ ಸರ್ಕಲ್, ಸಫರ್ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಮಂಚಿಲ, ಮುನ್ನೂರು ಯುವಕ ಮಂಡಲ, ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ, ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್, ದಯಾ ವಿಶೇಷ ಶಾಲೆ ಲಾಯಿಲ ಕೊಯ್ಯೂರು ಕ್ರಾಸ್ ಬೆಳ್ತಂಗಡಿ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಮಿತಿ ಬಳಂಜ, ಯುವಕ ಮಂಡಲ ನರಿಂಗಾನ, ತೌಡುಗೋಳಿ, ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು, ಶ್ರೀ ವಿದ್ಯಾ ಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇವು ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳು.

 

 

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!