ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಋಷಿಕೇಷ್ ಸೋನಾವಾಣೆ ಭಗವಾನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಜಿಲ್ಲೆಗೆ ನೂತನ ಎಸ್ಪಿಯಾಗಿ ಅಮಾತೆ ವಿಕ್ರಮ್ ಅವರನ್ನುನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನವಾಣೆ ಭಗವಾನ್ ಅವರನ್ನು ಗುಪ್ತಚರ ವಿಭಾಗದ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು ಖಾಲಿಯಾದ ಇಲ್ಲಿನ ಹುದ್ದೆಗೆ ಗುಪ್ತಚರ ವಿಭಾಗದಲ್ಲಿದ್ದ ಅಮಾತೆ ವಿಕ್ರಮ್ ಅವರನ್ನು ನಿಯೋಜನೆ ಮಾಡಲಾಗಿದೆ.
2015ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಋಷಿಕೇಶ್ ಸೋನವಾಣೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್’ಪಿಯಾಗಿ ನೇಮಕಗೊಂಡ ಬಳಿಕ ಉತ್ತಮ ಹೆಸರುಗಳಿಸಿದ್ದರು.