ಹೊಸ ದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ (ಫೆ.2) 412 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ವೇಳೆ 839 ಮಂದಿ ಬುಧವಾರ ಸೋಂಕು ಮುಕ್ತರಾಗಿದ್ದಾರೆ. 11 ಸಾವು ಸಂಭವಿಸಿದೆ. ಇವರಲ್ಲಿ ಮೂವರು ಹೊರ ಜಿಲ್ಲೆಯವರು ಎಂದು ಆರೋಗ್ಯ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ 3,100 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ.5.37 ಆಗಿದೆ. ಜಿಲ್ಲೆಯಲ್ಲಿ ಈ ತನಕ 94,814 ಮಾಸ್ಕ್ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಒಟ್ಟು ರೂ.1,14,64,980 ದಂಡ ವಸೂಲು ಮಾಡಲಾಗಿದೆ.