February 2, 2026
Monday, February 2, 2026
spot_img

ನೊಬೆಲ್ ಬೆನ್ನಲ್ಲೇ ‘ಗ್ರ್ಯಾಮಿ’ ಮುಡಿಗೇರಿಸಿಕೊಂಡ ದಲೈ ಲಾಮಾ: ಅನುಯಾಯಿಗಳಲ್ಲಿ ಹರ್ಷ!

ಹೊಸದಿಗಂತ ಮುಂಡಗೋಡ:

ವಿಶ್ವದ ಅತ್ಯುನ್ನತ ಸಂಗೀತ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟಿರುವ ‘ಗ್ರ್ಯಾಮಿ’ ಪ್ರಶಸ್ತಿಗೆ ಟಿಬೆಟಿಯನ್ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಲೈ ಲಾಮಾ ಅವರು ಭಾಜನರಾಗಿದ್ದಾರೆ. 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಅವರ ‘ಮೆಡಿಟೇಷನ್ಸ್: ದಿ ರಿಫ್ಲೆಕ್ಷನ್ಸ್ ಆಫ್ ಹಿಸ್ ಹೋಲಿನೆಸ್ ದಿ ದಲೈ ಲಾಮಾ’ ಎಂಬ ಆಡಿಯೊ ಬುಕ್‌ಗೆ ‘ಅತ್ಯುತ್ತಮ ಆಡಿಯೊ ಬುಕ್ ಪ್ರಸ್ತುತಿ’ ಪ್ರಶಸ್ತಿ ಲಭಿಸಿದೆ.

ಈ ಮಹತ್ವದ ಮನ್ನಣೆಯ ಬಗ್ಗೆ ಪ್ರತಿಕ್ರಿಯಿಸಿರುವ ದಲೈ ಲಾಮಾ ಅವರು, “ನಾನು ಈ ಗೌರವವನ್ನು ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಇದನ್ನು ಕೇವಲ ವೈಯಕ್ತಿಕ ಸಾಧನೆಯಾಗಿ ನಾನು ನೋಡುವುದಿಲ್ಲ. ಬದಲಿಗೆ, ಶಾಂತಿ, ಕರುಣೆ, ಪರಿಸರದ ಮೇಲಿನ ಕಾಳಜಿ ಮತ್ತು ಮಾನವೀಯತೆಯ ಏಕತೆಯೇ ಎಂಟು ಶತಕೋಟಿ ಮಾನವರ ಸಾಮೂಹಿಕ ಯೋಗಕ್ಷೇಮಕ್ಕೆ ದಾರಿದೀಪ ಎಂದು ನಾನು ನಂಬುತ್ತೇನೆ. ಈ ಪ್ರಶಸ್ತಿಯು ನನ್ನ ಈ ಸಂದೇಶಗಳನ್ನು ವಿಶ್ವದಾದ್ಯಂತ ಮತ್ತಷ್ಟು ವೇಗವಾಗಿ ಹರಡಲು ಸಹಾಯ ಮಾಡಲಿದೆ ಎಂಬ ಭರವಸೆ ನನಗಿದೆ,” ಎಂದು ತಿಳಿಸಿದ್ದಾರೆ.

ಟಿಬೆಟಿಯನ್ ಧರ್ಮಗುರುಗಳಿಗೆ ಸಂದ ಈ ಅಭೂತಪೂರ್ವ ಗೌರವದಿಂದಾಗಿ, ಅವರ ದಕ್ಷಿಣ ಕಾಶಿಯಂತಿರುವ ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ನಿವಾಸಿಗಳು ಹಾಗೂ ಅವರ ಅಸಂಖ್ಯಾತ ಅನುಯಾಯಿಗಳಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !