ದಲೇರ್ ಮೆಹಂದಿಗೆ ಜೈಲಿನಲ್ಲಿ ಜೊತೆಯಾದ ಹಳೆ ಸ್ನೇಹಿತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬಿ ಗಾಯಕ ದಲೇರ್ ಮೆಹಂದಿಯನ್ನು ಪೊಲೀಸರು ಪಟಿಯಾಲ ಜೈಲಿಗೆ ಕಳುಹಿಸಿದ್ದಾರೆ. ಇಲ್ಲಿ ಅವರಿಗೆ ಅವರ ಹಳೆಯ ಸೇಹ್ನಿತ ಜೊತೆಯಾಗಿದ್ದಾರೆ.
ದಲೇರ್ ಮೆಹಂದಿಗೆ ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಟಿಯಾಲ ಜೈಲಿನಲ್ಲಿ ಜೋಡಿಯಾಗಿದ್ದು, ಇಬ್ಬರೂ ಜೈಲಿನ ಒಂದೇ ಬ್ಯಾರಕ್​ನಲ್ಲಿದ್ದಾರೆ.
ನವಜೋತ್ ಸಿಂಗ್ ಸಿಧು ಮತ್ತು ದಲೇರ್ ಮೆಹಂದಿ ತುಂಬಾ ಹಳೆಯ ಸ್ನೇಹಿತರು. ಇಬ್ಬರೂ ಅನೇಕ ಟಿವಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಜೈಲಿನಲ್ಲೂ ಜೋಡಿಯಾಗಿದ್ದಾರೆ.

ದಲೇರ್ ಮೆಹಂದಿ ಬಂಧಿಸಲ್ಪಟ್ಟ ಪ್ರಕರಣವು 2003 ರಲ್ಲಿ ನಡೆದ ಪ್ರಕರಣವಾಗಿದೆ. 15 ವರ್ಷಗಳ ನಂತರ ಪ್ರಕರಣದ ತೀರ್ಪು ಇದೀಗ ಬಂದಿದೆ. ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ದಲೇರ್ ಮೆಹಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನವಜೋತ್ ಸಿಂಗ್ ಸಿಧು 34 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅಪರಾಧಿಯಾಗಿ ಪಟಿಯಾಲಾ ಜೈಲಿನಲ್ಲಿ ಬಂಧಿಯಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!