ಕಾಂಗ್ರೆಸ್‌ ಆರೋಪಗಳೆಲ್ಲಾ ಸುಳ್ಳೆಂದು ಅರಿತ ದಲಿತ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಂತಿದೆ: ಛಲವಾದಿ ನಾರಾಯಣ ಸ್ವಾಮಿ

ಹೊಸದಿಗಂತ ವರದಿ, ಮೈಸೂರು:
ಬಿಜೆಪಿ ದಲಿತ, ಅಂಬೇಡ್ಕರ್, ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ಮಾಡುತ್ತಿದ್ದ ಅಪಪ್ರಚಾರವೆಲ್ಲಾ ಸುಳ್ಳು ಎಂದು ದಲಿತ ಸಮುದಾಯಕ್ಕೆ ಸ್ಪಷ್ಟವಾಗಿ ಅರಿವಾಗಿದೆ. ಹಾಗಾಗಿ ಬಿಜೆಪಿ ಬಗ್ಗೆ ದಲಿತರಿಗೆ ಇದ್ದ, ಭಯ, ಆತಂಕವೆಲ್ಲಾ ನಿವಾರಣೆ ಯಾಗಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೊರ್ಚಾದ ಅಧ್ಯಕ್ಷರಾದ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಸೋಮವಾರ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯವರು ಸಂವಿಧಾನ ಬದಲಾಯಿಸುತ್ತಾರೆ, ಮೀಸಲಾತಿ ತೆಗೆಯುತ್ತಾರೆ, ಅವರು ಅಂಬೇಡ್ಕರ್ ವಿರೋಧಿ ಎಂದು ಕಾಂಗ್ರೆಸ್ ನವರು ಅಪಪ್ರಚಾರ ನಡೆಸುತ್ತಿದ್ದರು. ಇದರಿಂದಾಗಿ ದಲಿತ ಸಮುದಾಯ ಆತಂಕಗೊಂಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಪ್ರಧಾನಿಯಾಗಿದ್ದೇ ಅಂಬೇಡ್ಕರ್ ಅವರ ಸಂವಿಧಾನದಿಂದ ಎಂದು ಸ್ಪಷ್ಟವಾಗಿ ಹೇಳಿದರಲ್ಲದೆ, ಸಂವಿಧಾನದ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೇ ಅಂಬೇಡ್ಕರ್ ರ ಪಂಚಶೀಲ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ರಾಜ್ಯದಲ್ಲಿ ಅಂಬೇಡ್ಕರ್ ಪಾದಸ್ಪರ್ಶ ಮಾಡಿದ ಏಳು ಜಿಲ್ಲೆಗಳಲ್ಲಿ ನ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ದಲಿತ ಸಮುದಾಯವನ್ನು ಅಭಿವೃದ್ಧಿ ಯ ಪಥದತ್ತ ತರಲು ಅನೇಕ ಯೋಜನೆ ಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ದಲಿತರಿಗೆ ಸಿಎಂ ಸ್ಥಾನ ಸಿಗುವುದಿಲ್ಲ ಎಂಬುದು ದಲಿತರಿಗೆ ಖಚಿತವಾಗಿದೆ. ಸಿದ್ದರಾಮಯ್ಯ ರಷ್ಟು ದಲಿತ ವಿರೋಧಿ ಬೇರೆ ಯಾರೂ ಇಲ್ಲ ಎಂದು ಮನವರಿಕೆಯಾಗಿದೆ. ಹಾಗಾಗಿ ಸಮುದಾಯದ ಸಂಘಟನೆಗಳು ಬಿಜೆಪಿ ಗೆ ಬೆಂಬಲ ನೀಡುತ್ತಿವೆ. ಮತ್ತಷ್ಟು ಸಂಘಟನೆಗಳು ಬೆಂಬಲ ನೀಡುತ್ತಿವೆ. ಹಾಗಾಗಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಪಕ್ಷದ ಅಭ್ಯರ್ಥಿಯಾದ ಮೈ.ವಿ.ರವಿಶಂಕರ್ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜಿ.ಎನ್.ನಂಜುಂಡ ಸ್ವಾಮಿ, ಎಂ.ಎಸ್.ಪರಮಾನಂದ, ಎಸ್.ಮಹದೇವಯ್ಯ, ಟಿ.ಎಸ್.ಶ್ರೀವತ್ಸ, ಸೋಮಸುಂದರ್, ಎಂ.ಎ.ಮೋಹನ್, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಪ್ರದೀಪ್ ಕುಮಾರ್, ಜೋಗಿ ಮಂಜು, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!