ಹೊಸದಿಗಂತ ವರದಿ ಬೆಳಗಾವಿ :
ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದ ಬಿಲಕಾರ ತೋಟದಲ್ಲಿ ಆಸ್ತಿ ವಿಚಾರವಾಗಿ ದಲಿತ ಕುಟುಂಬದ ಸದಸ್ಯರ ಮೇಲೆ ಮಚ್ಚು, ಬಡಿಗೆ ಹಾಗೂ ಕಲ್ಲುಗಳಿಂದ ಭೀಕರ ಹಲ್ಲೆ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ನಿಪನಾಳ ಗ್ರಾಮದ ನೀವಾಸಿ ಸತ್ತೇಪ್ಪ ಲಕ್ಷ್ಮಣ ಬಿಲಕಾರ ಅವರಿಗೆ ಸೇರಿದ ಜಮೀನಿನಲ್ಲಿ ಭರಮಪ್ಪ ಹನಮಂತ ಹರಿಜನ ಹಾಗೂ ಲಕ್ಷೀಬಾಯಿ ಭರಮಪ್ಪ ಹರಿಜನ ಅವರು ಅರಿಶಿನ ಬೀಜ ಬಿತ್ತನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಸ್ಥಳಕ್ಕೆ ದಾವಿಸಿದ ಆರೋಪಿಗಳು ಜಮೀನಿನ ವಿಚಾರವಾಗಿ ಜಗಳ ಪ್ರಾರಂಭಿಸಿದ್ದು, ನೀವು ಇಲ್ಲಿ ಹೊಲ ಬಿಟ್ಟು ಹೋಗದಿದ್ದರೆ ಮಚ್ಚು, ಬಡಿಗೆ ಮತ್ತು ಕಲ್ಲುಗಳಿಂದ ಕೊಚ್ಚಿ ಸಾಯಿಸುವುದಾಗಿ ಬೆದರಿಕೆ ನೀಡಲಾಗಿದೆ. ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದಲ್ಲದೆ ಏಕಾಏಕಿ ದಲಿತ ಕುಟುಂಬದವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಗೆ ಗೋಳದವರು ಆಸ್ಪತ್ರೆಗೆ ದಾಖಲು, ಸತ್ತೇಪ್ಪ ಲಕ್ಷ್ಮಣ ಬಿಲಕಾರ ಹಲ್ಲೆಗೋಳಗಾದ ಕುಟುಂಬಸ್ಥರನ್ನು, ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭೀಕರ ಕೃತ್ಯವನ್ನು ಮರ್ದಿ ಹಾಗೂ ಗದಾಡಿ ಕುಟುಂಬದವರು ಮಾಡಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ಮಾಡಿರುವ ಆರೋಪಿಗಳ ವಿರುದ್ದ ಜಾತಿ ನಿಂದನೆ ಹಾಗೂ ಕೊಲೆಗೆ ಪ್ರಯತ್ನ ಮಾಡಿರುವುದಾಗಿ ದೂರು ದಾಖಲಿಸಿಕೊಂಡರು ರಾಯಭಾಗ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



