ಹೊಸದಿಗಂತ ವರದಿ, ಶಿವಮೊಗ್ಗ :
ನಗರದ ಕುವೆಂಪು ರಂಗಮಂದಿರದ ಮುಂಭಾಗ ನಿಲ್ಲಿಸಿರುವ ಕುವೆಂಪು ಪ್ರತಿಮೆಯ ಅಡಿಪಾಯದ ಕಟ್ಟೆಯಲ್ಲಿ ಅಳವಡಿಸಿದ್ದ ನುಡಿಮುತ್ತುಗಳ ಫಲಕ ಹಾನಿಗೀಡಾಗಿದ್ದು, ಇಡೀ ಫಲಕ ಚೂರಾಗಿ ಬಿದ್ದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಎದುರಿಗೆ ಇದ್ದರೂ ಇಲ್ಲಿನ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಗಮನಿಸಿಲ್ಲ. ಇದುವರೆಗೆ ಚನ್ನಾಗಿದ್ದ ಈ ಫಲಕ ತಾನಾಗಿಯೇ ಕಳಚಿ ಬಿದ್ದಿದೆಯೋ ಅಥವಾ ಯಾರಾದರೂ ಕಿಡಿಗೇಡಿಗಳು ಕೈಚಳಕ ತೋರಿದ್ದಾರೆಯೋ ಎಂಬುದು ಗೊತ್ತಿಲ್ಲ. ಇದು ಸಿಬ್ಬಂದಿಗಳ ಗಮನಕ್ಕೂ ಬಂದಂತಿಲ್ಲ.