ದಂಗಲ್ ಚಿತ್ರದಲ್ಲಿ ನಟಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಮೀರ್ ಖಾನ್ ಜೊತೆಯಾಗಿ ನಟಿಸಿದ್ದ ‘ದಂಗಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟಿ ಸುಹಾನಿ ಭಟ್ನಾಗರ್ (19) ವಿಧಿವಶರಾಗಿದ್ದಾರೆ.

2016 ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ ದಂಗಲ್ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟಿ ಸುಹಾನಿ ಭಟ್ನಾಗರ್ ಇದೀಗ ಸಾವನ್ನಪ್ಪಿದ್ದಾರೆ.

ನಟಿ ಸುಹಾನಿ ಭಟ್ನಾಗರ್ ಅವರು ಅಮೀರ್ ಖಾನ್ ಅವರ ದಂಗಲ್ ಚಿತ್ರದಲ್ಲಿ ಅಮೀರ್ ಅವರ ಕಿರಿಯ ಮಗಳು ಬಬಿತಾ ಪಾತ್ರವನ್ನು ನಿರ್ವಹಿಸಿದ್ದರು.

ನಟನೆಯ ಹೊರತಾಗಿ ಫ್ಯಾಷನ್‌ನಲ್ಲಿಯೂ ಆಸಕ್ತಿ ಹೊಂದಿದ್ದ ಸುಹಾನಿ ನೂರಾರು ಕನಸುಗಳನ್ನು ಕಂಡಿದ್ದರು. ಇದೀಗ ಮಗಳನ್ನು ಕಳೆದುಕೊಂಡ ನೋವಿನಿಂದ ಇಡೀ ಕುಟುಂಬ ಕಣ್ಣೀರಿಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!