ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಬರೋಬ್ಬರಿ 20 ವರ್ಷಗಳ ನಟ ದರ್ಶನ್ ಅಭಿನಯದ ‘ಕರಿಯ’ ಚಿತ್ರ ರೀ-ರಿಲೀಸ್ ಆಗಿದೆ.
ಆದ್ರೆ ಮಾರ್ನಿಂಗ್ ಶೋ ಸೇರಿದಂತೆ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದ್ದು, ನಟ ದರ್ಶನ್ ಅಭಿಮಾನಿಗಳು ಜಾತ್ರೆಯಂತೆ ಅಲ್ಲಿ ಸೇರಿದ್ದರು. ಆದ್ರೆ ಅಭಿಮಾನಿಗಳು ಅತಿರೇಕದ ವರ್ತನೆಯಿಂದ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ.
ಕರಿಯ ಚಿತ್ರದ ರಾತ್ರಿ ಪ್ರದರ್ಶನಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಕಾರಣ, ನಟ ದರ್ಶನ್ ಅಭಿಮಾನಿಗಳು ಸಿಕ್ಕಾಪಟ್ಟೆ ಕ್ರೇಜ್ ಆಗಿದ್ದು, ಪ್ರಸನ್ನ ಥಿಯೇಟರ್ ಬಳಿ ನೂಕುನುಗ್ಗಲು ಸೃಷ್ಟಿಯಾಗಿದೆ. ಜೊತೆಗೆ, ತಮ್ಮ ನೆಚ್ಚಿನ ನಟ ‘ಡಿ ಬಾಸ್’ ಪರ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಸಾಲದು ಎಂಬಂತೆ, ಕೆಲವರು ಪುಂಡಾಟ ಮಾಡಿ ಪೊಲೀಸರ ಲಾಠಿ ಚಾರ್ಜ್ ಬಿಸಿಯನ್ನೂ ಅನುಭವಿಸಿದ್ದಾರೆ.
ರಾತ್ರಿ 10:30 ಕ್ಕೆ ಇದ್ದ ಕರಿಯ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಅಭಿಮಾನದ ನೆಪದಲ್ಲಿ ದರ್ಶನ್ ಫ್ಯಾನ್ಸ್‌ಗಳ ಪುಂಡಾಟಿಕೆ ಮಿತಿಮೀರಿದೆ ಎನ್ನಲಾಗಿದೆ. ಹೀಗಾಗಿ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಇರುವ ಪೊಲೀಸರು ರಾತ್ರಿ ಪ್ರದರ್ಶನ ರದ್ದು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರ ಬಳಿ ಪೊಲೀಸರು ಬೀಡು ಬಿಟ್ಟಿದ್ದಾರೆ.