ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಆಪ್ತ ಧನ್ವೀರ್ ಗೌಡ ಅವರ ವಾಮನ ಸಿನಿಮಾದ ಟ್ರೈಲರ್ ಲಾಂಚ್ ಸಮಯದಲ್ಲಿ ನಟ ದರ್ಶನ್ ಫ್ಯಾನ್ಸ್ ಗಳು ಹುಚ್ಚಾಟ ಮಾಡಿದ್ದಾರೆ.
ಧನ್ವೀರ್ ಗೌಡ ಅವರು ದರ್ಶನ್‌ಗೆ ತುಂಬಾ ಆಪ್ತರಾಗಿರುವ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಸನ್ನ ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಇಲ್ಲಿ ವಾಮನ ಚಿತ್ರದ ಟ್ರೈಲರ್ ಲಾಂಚ್ ವೇಳೆ ಚೇರ್‌ಗಳು ಹಾಗೂ ಕಿಟಕಿ ಡೋರ್ ಗಳನ್ನು ಡ್ಯಾಮೇಜ್ ಮಾಡಲಾಗಿದೆ. ಟ್ರೈಲರ್ ಲಾಂಚ್ ಗೆ ಬಂದಿದ್ದವರು ಪುಂಡಾಟ ಮೆರೆದಿರುವ ಘಟನೆ ನಡೆದಿದೆ.
ಪ್ರಸನ್ನ ಥಿಯೇಟರ್ ನ ಸೆಕೆಂಡ್ ಕ್ಲಾಸ್ನಲ್ಲಿರುವ 80 ಸೀಟ್ ಹಾಗೂ ಬಾಲ್ಕನಿಯಲ್ಲಿದ್ದ 10 ಸೀಟ್ಗಟ್ ಗಳನ್ನು ದರ್ಶನ್ ಅಭಿಮಾನಿಗಳು ಮುರಿದಿದ್ದಾರೆ. ದರ್ಶನ್ ಫ್ಯಾನ್ಸ್ ನಡೆಗೆ ಪ್ರಸನ್ನ ಥಿಯೇಟರ್ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಾಳೆ ಶುಕ್ರವಾರ ಹೊಸ ಸಿನಿಮಾ ರಿಲೀಸ್ ಇದೆ. ಸಾಕಷ್ಟು ಸೀಟ್ ಗಳು ಮುರಿದು ಹೋಗಿವೆ. ನಾಳೆ ಹೇಗೆ ಸಿನಿಮಾ ರಿಲೀಸ್ ಗೆ ಥಿಯೇಟರ್ ಕೊಡೊದು? ದರ್ಶನ್ ಫ್ಯಾನ್ಸ್ ನಡೆಗೆ ಥಿಯೇಟರ್ ಸಿಬ್ಬಂದಿ ಬೇಸರ ಹೊರಹಾಕಿದ್ದಾರೆ.