ದರ್ಶನ್‌ ಫಾರ್ಮ್ ಹೌಸ್‌ ಮ್ಯಾನೇಜರ್‌ ಆತ್ಮಹತ್ಯೆಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದರ್ಶನ್‌ಗೆ ಸೇರಿದ ಫಾರ್ಮ್ ಹೌಸ್‌ ಅನ್ನು ನೋಡುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆಗೆ (Suicide) ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್‌ನೋಟ್‌ ಬರೆದಿಟ್ಟು ಶ್ರೀಧರ್‌ ಅವರು ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ ಏಪ್ರಿಲ್‌ 16 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಕಲ್ಲು ಬಂಡೆ ಮೇಲೆ ಅನಾಥವಾಗಿ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು.

ಸುಮಾರು 10 ಎಕರೆ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್‌ನಲ್ಲಿ ಸುಮಾರು 1 ವರ್ಷ ಕಾಲ ಶ್ರೀಧರ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರು. ವಿಷ ಸೇವಿಸಿದ ಪರಿಣಾಮ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದರು. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಡೆತ್‌ನೋಟ್‌ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದರು.

ಆತ್ಮಹತ್ಯೆ ಪತ್ರದಲ್ಲಿ ಏನಿತ್ತು?
ಪೊಲೀಸ್ ಸರ್ ನನ್ನ ಸಾವಿಗೆ ನಾನೇ ಕಾರಣ ನನ್ನ ಸಾವಿನ ಬಗ್ಗೆ ಯಾರೂ ಕಾರಣ ಅಲ್ಲ.. ನನ್ನ ಸಾವಿಗೆ ನಾನೇ ಕಾರಣ

ನನ್ನ ಒಂಟಿತನ ನನಗೆ ತುಂಬಾ ಜಾಸ್ತಿ ಕಾಡುತ್ತಾ ಇತ್ತು. ಎಷ್ಟೇ ಪ್ರಯತ್ನ ಪಟ್ಟರೂ ನನ್ನಿಂದ ಆಗಲಿಲ್ಲ.ಅದಕ್ಕೆಚೆನ್ನಾಗಿ ಯೋಚನೆ ಮಾಡಿ ನನ್ನ ಸಾವಿನ ನಿರ್ಧಾರ ನಾನೇ ಮಾಡಿ ಸಾಯುತ್ತಾ ಇದ್ದೇನೆ.

ನನ್ನ ಅಮ್ಮ, ಅಪ್ಪ, ಅಕ್ಕಂದಿರು ಮತ್ತು ನನ್ನ ಫ್ರೆಂಡ್ಸ್ ಯಾರಾದ್ರೂ ನನ್ನ ಸಾವಿನ ಬಗ್ಗೆ ಅನುಮಾನ ಇದೆ ಅಂತಾ ಹೇಳಿ ದೂರು ಕೊಟ್ಟರೆ ಅದನ್ನು ತಗೊಬೇಡಿ ಸರ್.

ಯಾಕಂದ್ರೆ ನನ್ನ ಸಾವು ನನ್ನ ನಿರ್ಧಾರ. ನಾನು ಚೆನ್ನಾಗಿ ಯೋಚನೆ ಮಾಡಿ, ನನ್ನ ನಾನೇ ಕಳೆದು ಕೊಳ್ತಾ ಇದ್ದೇನೆ. ದಯವಿಟ್ಟು ನನ್ನ ಬಗ್ಗೆ ಯಾರೂ ಕೆಟ್ಟದಾಗಿ ತಿಳ್ಕೊಬೇಡಿ. ಪೊಲೀಸ್ ಸರ್ ನನ್ನ ಸಾವಿಗೆ ನಾನೇ ಕಾರಣ. ದಯವಿಟ್ಟು ಸರ್ ಯಾರಿಗೂ ತೊಂದರೆ ಕೊಡಬೇಡಿ.

ಪ್ಲೀಸ್ ಸರ್. ನನ್ನ ಸಾವಿಗೆ ನಾನೇ ಕಾರಣ ಬದುಕಿದ್ದು ಮನೆ ಕಟ್ಟಬೇಕು ಅಂತಾ ತುಂಬಾ ಆಸೆ ಇತ್ತು. ಆಗ್ತಿಲ್ಲ. ನಾನು ಸತ್ತಮೇಲೆ ನನ್ನ ಗೋರಿ ಆದ್ರು ಕಟ್ಟಿ ಖುಷಿಯಾಗಿ ಇರಿ.. ಎಂದು ಬರೆದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!