ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಗ್ಗೆ ನಟ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅವರು ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂಬುದನ್ನು ಮರೆಯದಿರಿ ಎಂದು ಪ್ರೇಮ್ ಹೇಳಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದ ಕುರಿತು ಮಾಧ್ಯಮಗಳಿಗೆ ಉತ್ತರಿಸಿದ ಅವರು, ದರ್ಶನ್ ಶೀಘ್ರದಲ್ಲೇ ಆಚೆ ಬರಲಿ ಎಂದಿದ್ದಾರೆ. ಚಿತ್ರರಂಗಕ್ಕೆ ದರ್ಶನ್ ಕೊಡುಗೆ ಅಪಾರ. ಅವರ ಮೇಲೆ ನಿರ್ಮಾಪಕರು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದಾರೆ.. ಸಿನಿಮಾಗೆ ದರ್ಶನ ಬೇಕು. ಇದು ಯಾವ ಪ್ರಕರಣ ಎಂದು ನನಗೆ ತಿಳಿದಿಲ್ಲ. ಏನೇ ಆಗಲಿ ಅವರು ನಿರಪರಾಧಿಯಾಗಿ ಹೊರಬರಲಿ. ಬೇಗ ಬೇಲ್ ಸಿಗುವ ಭರವಸೆ ಇದೆ ಎಂದರು.
ಈ ಫೋಟೋಗಳ ಬಗ್ಗೆ ನಮಗೂ ಏನೂ ಗೊತ್ತಿಲ್ಲ. ಪ್ರಸ್ತುತ, ಈ ಪ್ರಕರಣವು ಕಾನೂನಿನ ಮಿತಿಯಲ್ಲಿದೆ. ರೇಣುಕಾಸ್ವಾಮಿ ಕುಟುಂಬದ ಬಗ್ಗೆ ನಮಗೂ ಅನುಕಂಪವಿದೆ. ಆದರೆ ರೇಣುಕಾಸ್ವಾಮಿ ಮಾಡಿದ್ದು ಒಳ್ಳೆಯದಲ್ಲ. ಅವರು ಮಾಡಿರುವ ಮೆಸೇಜ್ಗಳು ಸರಿ ಇದೆಯಾ ಎಂದು ಪ್ರೇಮ್ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ದರ್ಶನ್ ಪರ ಪ್ರೇಮ್ ಬ್ಯಾಟಿಂಗ್ ಮಾಡಿದ್ದಾರೆ.