ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ 13 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಒಂದು ದಿನ ಜೈಲಿನಲ್ಲೇ ಕಳೆದಿದ್ದಾರೆ. ಆದರೆ ಇದೀಗ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮಾತನಾಡಿ ಬಿಗ್ ಅಪ್‌ಡೇಟ್ ಕೊಟ್ಟಿದ್ದಾರೆ.
ನಟ ದರ್ಶನ್ ಅವರಿಗೆ ಒಂಚೂರು ಏನೆಂದು ಗೊತ್ತಿಲ್ಲ, ಈ ಕೇಸ್ನಲ್ಲಿ ಅವರು ಇನೋಸೆಂಟ್. ಹತ್ಯೆಯಲ್ಲಿ ನಿನ್ನೆವರೆಗೂ ನನಗೂ ಕೆಲವು ಕನ್ಫ್ಯೂಷನ್ ಹಾಗೂ ಅನುಮಾನಗಳು ಇತ್ತು. ಆದರೆ ಈ ಬಗ್ಗೆ ದರ್ಶನ್ ಬಳಿ ಮಾತನಾಡಿದ ಮೇಲೆ ಸತ್ಯ ಗೊತ್ತಾಗಿದೆ. ಅವರ ತಪ್ಪಿಲ್ಲ. ಮರ್ಡರ್ ಆಗಿದೆ ಅನ್ನೋದು ಕೂಡ ಅವರಿಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ.