ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದನವನದಲ್ಲಿ ನಟ ದರ್ಶನ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
ಅಂತೆಯೇ ಅಭಿಮಾನಿಗಳೇ ದೇವರು ಎನ್ನುವಂತೆ ನನ್ನ ಸೆಲೆಬ್ರಿಟೀಸ್ ಎನ್ನುವಂಥ ಟ್ಯಾಟೂವನ್ನು ದರ್ಶನ್ ಹಾಕಿಸಿದ್ದು, ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದರು.
ನಾವು ದರ್ಶನ್ರನ್ನು ಸೆಲೆಬ್ರಿಟಿ ಎಂದರೆ ಅವರು ನಮ್ಮನ್ನೇ ಸೆಲೆಬ್ರಿಟಿ ಎನ್ನುತ್ತಾರೆ ಎಂದು ಅಭಿಮಾನಿಗಳು ದರ್ಶನ್ ಬಗ್ಗೆ ತಮ್ಮ ಗೌರವವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದರು. ಆದರೆ ಇದೀಗ ಈ ಟ್ಯಾಟೂ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.
ಇತ್ತೀಗೆಷ್ಟೇ ದರ್ಶನ್ ವರ್ಕೌಟ್ನ ವಿಡಿಯೋವೊಂದು ಶೇರ್ ಮಾಡಿದ್ದು, ಅದರಲ್ಲಿ ದರ್ಶನ್ ಎದೆಯ ಮೇಲಿದ್ದ ಟ್ಯಾಟೂ ಕಾಣೆಯಾಗಿದೆ. ಅಭಿಮಾನಿಗಳನ್ನು ಚೆನ್ನಾಗಿ ಯಾಮಾರಿಸಿದ್ದಾರೆ, ಸಿಂಪಥಿ ಗಳಿಸಿದ್ದಾರೆ ಎಂದು ಒಂದು ವರ್ಗದ ಅಭಿಮಾನಿ ಬಳಗ ಅವರನ್ನು ದೂಷಿಸಿದೆ.
Have anyone observed?where's th tattoo #DarshanThoogudeepa got tattoed as'Nanna Celebrities'few days back bt yday his team shared workout video bt tattoo isn't there, now actual face is revealed,fooled his uneducateds&gained sympathy🤕
Drama Asli Face💔 pic.twitter.com/1RDxePuEYU
— Aadi | ಆದಿ (@TheAadiTweets) May 1, 2023