ದರ್ಶನ್‌ಗೆ ಹೆಣ್ಣು-ಹೆಂಡದ ನಶೆ ಹೆಚ್ಚು, ಸಂಸ್ಕಾರ ಇರಲಿಲ್ಲ: ಮೊದಲ ಗುರು ಅಡ್ಡಂಡ ಕಾರ್ಯಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ದರ್ಶನ್‌ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಫಿಟ್‌ ಆಗಿದ್ದಾರೆ. ಇದೀಗ ಇಡೀ ಚಿತ್ರರಂಗ ದರ್ಶನ್‌ ಬಗ್ಗೆ ಮಾತನಾಡಿದ್ದು, ದರ್ಶನ್‌ ಮೊದಲು ನಟನಾ ಗುರು ಅಡ್ಡಂಡ ಕಾರ್ಯಪ್ಪ ಮಾತನಾಡಿದ್ದಾರೆ.

ದರ್ಶನ್‌ಗೆ ಹೆಣ್ಣು, ಹೆಂಡದ ನಶೆ ಹೆಚ್ಚಾಗಿತ್ತು, ಪವಿತ್ರಾ ಅವನ ಪಾಲಿನ ಶನಿ, ಅವಳನ್ನು ಜೀವನಕ್ಕೆ ಬಿಟ್ಟುಕೊಂಡಮೇಲೆ ಇಂಥ ಸಮಸ್ಯೆ ತಪ್ಪಿದ್ದಲ್ಲ. ಸಿನಿಮಾದಲ್ಲಿ ಮಾಡೋದನ್ನು ನಿಜ ಜೀವನದಲ್ಲಿ ಮಾಡಿದರೆ ಹೀಗೇ ಆಗೋದು ಎಂದು ಹೇಳಿದ್ದಾರೆ.

ಆತ ನನ್ನ ಶಿಷ್ಯ. ನಾನು ಅವನ ಮೊದಲ ಗುರು. 1987ರಲ್ಲಿ ನಾನು ಆಗ ತಾನೇ ನೀನಾಸಂ ಮುಗಿಸಿ ಬಂದಿದ್ದೆ. ನಾವು ಪ್ರತಿ ವರ್ಷ ಹುಟ್ಟೂರು ಪೊನ್ನಂಪೇಟೆಯಲ್ಲಿ ಮಕ್ಕಳ ಶಿಬಿರವನ್ನು ಮಾಡುತ್ತಿದ್ದೆವು. ದರ್ಶನ್ ಅವರ ಅಜ್ಜಿ ಮನೆ ಕೂಡ ಪೊನ್ನಂಪೇಟೆ. ಅಲ್ಲಿಗೆ ದರ್ಶನ್ ಬೇಸಿಗೆ ರಜೆ ಕಳೆಯಲು ಬರುತ್ತಿದ್ದ. ಅದೇ ಸಮಯಕ್ಕೆ ನಮ್ಮ ಶಿಬಿರ ನಡೆಯುತ್ತಿತ್ತು. ನಾಟಕದಲ್ಲಿ ಸೇರಿಕೋ ಎಂದು ದರ್ಶನ್‌ಗೆ ಹೇಳಿದ್ದೆ. ದರ್ಶನ್ ಆಗ 7ನೇ ತರಗತಿಯಲ್ಲಿದ್ದ. 7ನೇ ತರಗತಿಗೆ 10ನೇ ತರಗತಿಯವರ ರೀತಿ ಕಾಣುತ್ತಿದ್ದ.

ನಮ್ಮ ನಾಟಕದಲ್ಲಿ ದರ್ಶನ್‌ಗೆ ರಾಜನ ಪಾತ್ರ ಕೊಟ್ಟಿದ್ದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದ. ನನ್ನ ಹೆಂಡತಿಯೇ ದರ್ಶನ್‌ಗೆ ಬಣ್ಣ ಹಚ್ಚಿದ್ದಳು. ಇದಾದ ಬಳಿಕ ಇವರ ಮೊದಲ ಸಿನಿಮಾ ನನಗೆ ಇಷ್ಟವಾಗಲಿಲ್ಲ. ಮತ್ತೊಮ್ಮೆ ಭೇಟಿಯಾದ ಸಂದರ್ಭ ನೀನಾಸಂಗೆ ಹೋಗುವಂತೆ ಪತ್ರ ಕೊಟ್ಟೆ. ಕಲಾವಿದನಾಗಿರುವ ನಾನು ಬೇರೊಬ್ಬ ಕಲಾವಿದನನ್ನು ಬೆಳೆಸುವುದು ನನ್ನ ಜವಾಬ್ದಾರಿ. ಮಂಡ್ಯ ರಮೇಶ್ ಕೂಡ ಒಂದು ಪತ್ರ ಕೊಟ್ಟರು. ಇದಾದ ಬಳಿಕ ದರ್ಶನ್ ಹೆಗ್ಗೋಡುನಲ್ಲಿರುವ ನೀನಾಸಂನಲ್ಲಿ ತರಬೇತಿ ಪಡೆದುಕೊಂಡ ಎಂದು ಹೇಳಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!