ದರ್ಶನ್​ ರೆಗ್ಯುಲರ್​ ಬೇಲ್​ ಅರ್ಜಿ ವಿಚಾರಣೆ ಶುರು: ದಾಸನ ಪರ ವಾದ ಮಂಡಿಸಿದ C.V ನಾಗೇಶ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಂತರ ಜಾಮೀನಿನಲ್ಲಿ ಜೈಲಿನಿಂದ ಹೊರಬಂದಿರುವ ನಟ ದರ್ಶನ್​ ಇನ್ನೂ ಸರ್ಜರಿ ಮಾಡಿಸಿಲ್ಲ. ಇತ್ತ ಕೊಟ್ಟ 6 ವಾರಗಳ ಸಮಯ ಕಳೆಯುತ್ತಿದೆ. ಯಾವಾಗ ಬೇಕಾದ್ರೂ ಮಧ್ಯಂತರ ಬೇಲ್​ಗೆ ಕಟಂಕ ಎದುರಾಗಬಹುದು.

ದರ್ಶನ್​ಗೆ ಇನ್ನೂ ಉಳಿದಿರೋದು 16 ದಿನವಷ್ಟೇ. ಒಂದ್ಕಡೆ ಆಪರೇಷನ್​ ಆಗಿಲ್ಲ. ಮತ್ತೊಂದ್ಕಡೆ ಮಧ್ಯಂತರ ಬೇಲ್​ ಸಮಯ ಕಳೆಯುತ್ತಿದೆ. ಈ ಬೆನ್ನಲ್ಲೇ ಇವತ್ತು ಹೈಕೋರ್ಟ್‌ನಲ್ಲಿ ದರ್ಶನ್​ ರೆಗ್ಯುಲರ್​ ಬೇಲ್​ ಅರ್ಜಿ ವಿಚಾರಣೆ ಆರಂಭವಾಗಿದೆ.

ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಅವರು​ ಪ್ರಬಲವಾದ ವಾದ ಮಂಡಿಸಿದರು. ಅನಾರೋಗ್ಯ ಕಾರಣ ನೀಡಿ ಮಧ್ಯಂತರ ಬೇಲ್​ ಕೊಡಿಸುವಲ್ಲಿ ಯಶಸ್ವಿಯಾಗಿರೋ ನಾಗೇಶ್​, ಇವತ್ತು ಟೆಕ್ನಿಕಲ್ ಮಿಸ್ಟೇಕ್ ಆಧಾರದ ಮೇಲೆ ಬೇಲ್ ಪಡೆಯಲು ವಾದ ಮಂಡಿಸಿದರು. ಇನ್ನೂ ವಾದ ಆಲಿಸಿದ ನ್ಯಾ. ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠ ವಿಚಾರಣೆಯನ್ನ 28ಕ್ಕೆ ಮುಂದೂಡಿದೆ.

ದರ್ಶನ್ ಪರ ವಾದ ಮಾಡಿಸಿದ ವಕೀಲ ಸಿ.ವಿ ನಾಗೇಶ್ ಅವರು, ದೇಹದ ಮೇಲೆ 1.5-2.5 ಸೆಂಟಿ ಮೀಟರ್ ಗಾಯ ಮಾತ್ರ ಇದೆ. ದೇಹದ ಮೇಲಿನ ಉಳಿದ ಗಾಯ ರಕ್ತಗಾಯಗಳಲ್ಲ. ರೇಣುಕಾಸ್ವಾಮಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ. ಕಾನೂನಿನ ಬಗ್ಗೆಯೂ ರೇಣುಕಾಸ್ವಾಮಿಗೆ ಯಾವುದೇ ಗೌರವ ಇಲ್ಲ. ಮಹಿಳೆಯರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ರೇಣುಕಾಸ್ವಾಮಿಯ ಕೇಸ್‌ನಲ್ಲಿ ಕಿಡ್ನ್ಯಾಪ್ ಮಾಡಿದ ಆರೋಪವಿದೆ. ಆದರೆ ಸ್ವಇಚ್ಛೆಯಿಂದ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದಾನೆ. ಹಲ್ಲೆಗೆ ಬಳಸಿದ ವಸ್ತುಗಳು ಅಂತಾ ಮರದ ಕೊಂಬೆಯನ್ನ ರಿಕವರಿ ಮಾಡಲಾಗಿದೆ. ಆದರೆ ಕೊಂಬೆಯಲ್ಲಿ ರಕ್ತದ ಕಲೆ‌ ಇಲ್ಲ ಅಂತಾ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಮೂರು ದಿನ ತಡವಾಗಿ ಪೊಲೀಸರು ಹಗ್ಗ, ಮರದ ಎರಡು ಕೊಂಬೆಗಳನ್ನ ಸಾಕ್ಷ್ಯಗಳನ್ನಾಗಿ ರಿಕವರಿ ಮಾಡಿದ್ದಾರೆ. ಘಟನೆ ಬಳಿಕ ಶೆಡ್‌ಗೆ ಜೂನ್‌ 9ರಂದು ಪೊಲೀಸರು ಬೀಗ ಹಾಕಿದರು. ಬಳಿಕ ಕೀ ತಮ್ಮ ಬಳಿ ಇಟ್ಕೊಂಡು ಜೂನ್‌ 12ರಂದು ಶೆಡ್​ ಮಹಜರು ಮಾಡಿ ಸೀಜ್​ ಮಾಡಿದ್ದಾರೆ. ಆ ಸಮಯದಲ್ಲಿ ತಮಗೆ ಬೇಕಾದಂತೆ ಸಾಕ್ಷಿ ಸೃಷ್ಟಿ ಮಾಡಿದ್ದಾರೆ.

ಇನ್ನೂ, ಮೃತದೇಹ ಜೂನ್​ 9ಕ್ಕೆ ಸಿಕ್ಕಿದ್ರೂ ಅದರ ಪೋಸ್ಟ್​ ಮಾರ್ಟ್​ 11ರಂದು ನಡೆದಿದೆ. ಅಲ್ಲದೆ, ಪೋಸ್ಟ್​ ಮಾರ್ಟ್‌ ರಿಪೋರ್ಟ್ 1 ತಿಂಗಳು ತಡವಾಗಿ ಬಂದಿದೆ. ಪೊಲೀಸರು ರಿಕವರಿ ಮಾಡಿರುವುದೇ ಬೇರೆ. ದರ್ಶನ್​ ಚಪ್ಪಲಿ ಹಾಕಿದ್ದಾಗಿ ಹೇಳಿದ್ದಾರೆ. ಆದ್ರೆ, ದರ್ಶನ್ ಬಟ್ಟೆ, ಶೂ ವಶಕ್ಕೆ ಪಡೆದು ಮಹಜರು ಮಾಡಲಾಗಿದೆ.

ಇಲ್ಲಾ ಇದು ವಿಜಯಲಕ್ಷ್ಮಿ ಅವರ ಬೇರೆ ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕಿದೆ. ಆ ಶೂಗಳನ್ನ ಎಫ್ಎಸ್ಎಲ್​ಗೆ ಕಳುಹಿಸಲಾಗಿತ್ತು. ದರ್ಶನ್ ಹೇಳಿದ ಸ್ಥಳದಲ್ಲಿ ರಿಕವರಿ ಆಗಿಲ್ಲ. ರಿಕವರಿ ಆಗಿರೋದು ವಿಜಯಲಕ್ಷ್ಮಿಯವರ ಮನೆಯಲ್ಲಿ. ಇಲ್ಲಿ ಅವರ ಶೂ ಮೇಲೆ ರಕ್ತದ ಕಲೆ ಸಿಕ್ಕಿರೋದೇ ಅನುಮಾನ. ಪೊಲೀಸರು FSLಗೆ ರೇಣುಕಾಸ್ವಾಮಿ ರಕ್ತ ಕಳಿಸಿದರು. ಇಲ್ಲಿ ಅವರೇ ಶೂ ಮೇಲೆ ರಕ್ತದ ಹನಿ ಹಾಕಿ‌ ಮ್ಯಾಚ್ ಮಾಡಿರುವ ಡೌಟ್ ಇದೆ ಎಂದು ವಾದಿಸಿದರು.

ಹೀಗೆ ಕೆಲವೊಂದು ಟೆಕ್ನಿಕಲ್​ ಅಂಶಗಳನ್ನ ಉಲ್ಲೇಖಿಸಿ ದರ್ಶನ್​ ಪರ ವಕೀಲ ಸಿ.ವಿ ನಾಗೇಶ್​ ವಾದ ಮಂಡಿಸಿದರು. ಇದನ್ನ ವಾದ ಆಲಿಸಿದ ಕೋರ್ಟ್​ 28ಕ್ಕೆ ವಿಚಾರಣೆ ಮುಂದೂಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!