ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್‌ಗೆ ಚಹಾ ಮತ್ತು ಸಿಗರೇಟ್ ನೀಡಿರುವ ಫೋಟೋ ಬಹಿರಂಗಗೊಂಡಿದೆ.
ಜೈಲಿನ ನಿಯಮಗಳನ್ನು ಉಲ್ಲಂಘಟನೆ ಮಾಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದ್ದು, ಎರಡರಲ್ಲಿ ಎ1 ದರ್ಶನ್ ಆಗಿದ್ದಾರೆ. ಈ ಮೂರು ಪ್ರಕರಣದ ತನಿಖೆಗಾಗಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರು ಮೂರು ವಿಶೇಷ ತಂಡ ರಚನೆ ಮಾಡಿದ್ದಾರೆ.
ಬೇಗೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಅವರಿಂದ ಮೊದಲನೇ ಪ್ರಕರಣದ ತನಿಖೆ ನಡೆಯುತ್ತದೆ. ಜೈಲಿನ ಲಾನ್ನಲ್ಲಿ ಕುಳಿತು ಕಾಫಿ ಸಿಗರೇಟ್ ಸೇವನೆ, ರೌಡಿಶೀಟರ್ಗಳ ಜೊತೆ ದರ್ಶನ್ ಬೇರೆತಿದ್ದು ಹೇಗೆ? ಲಾನ್ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು? ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧವಿದ್ದರೂ, ಹೇಗೆ ಒಳಗೆ ಬಂತು ಅಂತ ತನಿಖೆ ನಡೆಸುತ್ತಾರೆ.
ಎರಡನೇ ಪ್ರಕರಣ: ಮೊಬೈಲ್ ಫೋನ್ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಬಗ್ಗೆ ಹುಳಿಮಾವು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ತನಿಖೆ ನಡೆಸುತ್ತಾರೆ. ಫೋಟೋ ತೆಗೆದಿದ್ದು ಹಾಗೂ ವಿಡಿಯೋ ಕರೆ ಮಾಡಿದ್ದು ಯಾರು? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ, ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ.? ಒದಗಿಸಿದವರು ಯಾರು, ನೆಟ್ ಕನೆಕ್ಷನ್ ಹೇಗೆ ಬಂತು ಎಂಬೆಲ್ಲ ತನಿಖೆ ನಡಯುತ್ತದೆ. ಹೊರಗಡೆಯಿಂದ ಜೈಲಿನೊಳಗೆ ವಿಡಿಯೋ ಕರೆ ಮಾಡಿರುವ ಬಗ್ಗೆಯೂ ತನಿಖೆ ನಡೆಯಲಿದೆ.