ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬುಧಾಬಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಗೌರವಾರ್ಥವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಔತಣಕೂಟವನ್ನು ಏರ್ಪಡಿಸಿದರು.
ಪ್ರಧಾನಿ ಮೋದಿಯವರಿಗೆ ಯುಎಇ ಅಧ್ಯಕ್ಷರ ವೆಜ್ ಡಿನ್ನರ್‌ನಲ್ಲಿ ಡೇಟ್ ಸಲಾಡ್, ಕ್ಯಾರೆಟ್ ತಂದೂರಿ ಮೆನುವಿನಲ್ಲಿತ್ತು. ಪ್ರಧಾನಿ ಮೋದಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಮೊಟ್ಟೆಯ ಉತ್ಪನ್ನಗಳಿಲ್ಲದೆ ಸಂಪೂರ್ಣ ಸಸ್ಯಾಹಾರಿ ಊಟವನ್ನು ಬಡಿಸಲಾಗಿತ್ತು. ಖರ್ಜೂರದ ಸಲಾಡ್, ಮಸಾಲಾ ಸಾಸ್‌ನಲ್ಲಿ ಹುರಿದ ತರಕಾರಿಗಳು ಮತ್ತು ಕ್ಯಾರೆಟ್ ತಂದೂರಿಯನ್ನು ಮೋದಿಗೆ ನೀಡಲಾಯಿತು.
ಶನಿವಾರ ಅಬುಧಾಬಿಯ ಕಸ್ರ್-ಅಲ್-ವತನ್ ಅಧ್ಯಕ್ಷರ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಸ್ಥಳೀಯ ಸಾವಯವ ತರಕಾರಿಗಳಿಂದ ತಯಾರಿಸಿದ ಹಾರಿಸ್ (ಗೋಧಿ) ಮತ್ತು ಖರ್ಜೂರದ ಸಲಾಡ್ ಅನ್ನು ಬಡಿಸಿದರು. ಮುಖ್ಯ ಕೋರ್ಸ್‌ಗಾಗಿ ಗಣ್ಯರಿಗೆ ಹೂಕೋಸು, ಕ್ಯಾರೆಟ್ ತಂದೂರಿ ಜೊತೆಗೆ ಕಪ್ಪು ಮಸೂರ(ದಾಲ್) ಮತ್ತು ಸ್ಥಳೀಯ ಹಾರಿಸ್ ನೀಡಲಾಯಿತು.
ಜೊತೆಗೆ ಸ್ಥಳೀಯ ಹಣ್ಣುಗಳನ್ನು ನೀಡಲಾಯಿತು. ಮೋದಿಗೆ ಬಡಿಸಿದ ಎಲ್ಲಾ ಮೇಲೋಗರಗಳನ್ನು ಸಸ್ಯಜನ್ಯ ಎಣ್ಣೆಯಿಂದ ಮಾಡಲಾಗಿತ್ತು. ಯುಎಇ ಅಧ್ಯಕ್ಷರು ಅಬುಧಾಬಿಯಲ್ಲಿ ಪ್ರಧಾನಿ ಮೋದಿ ಅವರಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳನ್ನು ಬಡಿಸಿದರು. ಶನಿವಾರ ರಾತ್ರಿ ಊಟದ ಬಳಿಕ ಮೋದಿ ಯುಎಇ ಪ್ರವಾಸ ಮುಗಿಸಿ ದೆಹಲಿಗೆ ವಾಪಸಾದರು.