August 31, 2026
Monday, August 31, 2026
spot_img

ಡೇಟಿಂಗ್ ಓಕೆ, ಬಟ್ ಬಿಲ್ ಕಟ್ಟೋದು ಯಾರು? ರಿಲೇಷನ್​ಶಿಪ್ ನಲ್ಲಿ ‘ಮನಿ’ ಮ್ಯಾಟರ್ ಆಗುತ್ತಾ?

‘ಫಸ್ಟ್ ಡೇಟ್’ ಅಂದ ತಕ್ಷಣ ಎಲ್ರಿಗೂ ಹೊಟ್ಟೇಲಿ ಚಿಟ್ಟೆ ಹಾರೋಕೆ ಶುರುವಾಗುತ್ತೆ. ಯಾವ ಡ್ರೆಸ್ ಹಾಕ್ಬೇಕು, ಹೆಂಗ್ ಮಾತಾಡ್ಬೇಕು, ಎಲ್ಲಿಗೆ ಹೋಗ್ಬೇಕು ಅಂತ ಲೆಕ್ಕಾಚಾರ ನಡೀತಿರುತ್ತೆ. ಎಲ್ಲ ಓಕೆ, ರೆಸ್ಟೋರೆಂಟ್‌ನಲ್ಲಿ ಚೆನ್ನಾಗಿ ತಿಂದು-ಕುಡಿದು ಆದ್ಮೇಲೆ ವೇಟರ್ ಆ ‘ಬಿಲ್’ ತಂದು ಟೇಬಲ್ ಮೇಲೆ ಇಡ್ತಾನಲ್ಲ.. ಆವಾಗ ಶುರುವಾಗುತ್ತೆ ನಿಜವಾದ ಡ್ರಾಮಾ.

ಇಬ್ಬರೂ ಒಬ್ಬರನ್ನೊಬ್ಬರು ನೋಡ್ಕೊಳ್ಳೋದು, ಅಯ್ಯೋ ನಾನ್ ಕೊಡ್ಲಾ?, ಇಲ್ಲ ಇಲ್ಲ, ನಾನೇ ಕೊಡ್ತೀನಿ ಅಂತ ನಾಟಕ ಮಾಡೋದು ಸಿಕ್ಕಾಪಟ್ಟೆ ಕಾಮನ್. ಇನ್ನು ಕೆಲವರಂತೂ ಬಿಲ್ ಬಂದ ತಕ್ಷಣ ವಾಶ್‌ರೂಮ್ ಕಡೆ ಓಡಿಬಿಡ್ತಾರೆ. ಹಾಗಾದ್ರೆ ನಿಜವಾಗ್ಲೂ ಈ ಫಸ್ಟ್ ಡೇಟ್‌ನಲ್ಲಿ ಬಿಲ್ ಯಾರು ಕಟ್ಟಬೇಕು?

ಕಾಮನ್ ಸೆನ್ಸ್ ಏನಪ್ಪಾ ಅಂದ್ರೆ, ‘ಬನ್ನಿ ಒಂದು ಕಾಫಿ ಕುಡಿಯೋಣ’ ಅಂತ ಯಾರು ಮೊದಲು ಆಫರ್ ಕೊಡ್ತಾರೋ, ಅವರಿಗೆ ಬಿಲ್ ಕಟ್ಟೋ ಜವಾಬ್ದಾರಿ ಸ್ವಲ್ಪ ಜಾಸ್ತಿ ಇರುತ್ತೆ. ಅದು ಹುಡುಗ ಇರಲಿ ಅಥವಾ ಹುಡುಗಿ ಇರಲಿ. ಇನ್ವೈಟ್ ಮಾಡಿದವರು ಪೇ ಮಾಡ್ತೀನಿ ಅನ್ನೋದು ಒಂದು ಸಭ್ಯತೆ.

ಹುಡುಗನೇ ಬಿಲ್ ಕಟ್ಟಲಿ ಅಥವಾ ಹುಡುಗಿನೇ ಕಟ್ಟಲಿ, ಇನ್ನೊಬ್ಬರು ಸುಮ್ಮನೆ ಕೂರಬಾರದು. ನಾನೂ ಅರ್ಧ ಬಿಲ್ ಕೊಡ್ತೀನಿ ಅಂತ ವ್ಯಾಲೆಟ್ ತೆಗೆಯೋದು ಸಾಫ್ಟ್ ಗೆಸ್ಚರ್. ಎದುರುಗಡೆ ಇರೋರು ಅಯ್ಯೋ ಪರವಾಗಿಲ್ಲ, ಬಿಡಿ ಅಂದರೂ, ಆ ಹೆಲ್ಪಿಂಗ್ ನೇಚರ್ ಇದೆಯಲ್ಲ, ಅದು ನಿಮ್ಮ ಇಮೇಜ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ತಗೊಂಡು ಹೋಗುತ್ತೆ.

ಇತ್ತೀಚಿನ ಯೂತ್ಸ್‌ಗೆ ಈ “50-50” ಫಾರ್ಮುಲಾ ಫೇವರೆಟ್. ಇಬ್ಬರೂ ಕೆಲಸ ಮಾಡ್ತಿದ್ದೀರಾ, ಇಬ್ಬರ ಹತ್ತಿರನೂ ದುಡ್ಡಿದೆ ಅಂದಮೇಲೆ ಅರ್ಧ ಅರ್ಧ ಹಂಚಿಕೊಳ್ಳೋದು ಬೆಸ್ಟ್. ಇದರಿಂದ ನನ್ನ ದುಡ್ಡಲ್ಲಿ ತಿಂದ್ರು ಅನ್ನೋ ಮಾತು ಕೇಳಿ ಬರಲ್ಲ. ಇಬ್ಬರಿಗೂ ಈಕ್ವಲ್ ರೆಸ್ಪೆಕ್ಟ್ ಸಿಗುತ್ತೆ.

ಕೆಲವರು ಬಿಲ್ ಬಂದ ತಕ್ಷಣ ಫೋನ್ ನೋಡೋ ಥರ, ಜೇಬಿನಲ್ಲಿ ಪರ್ಸ್ ಹುಡುಕೋ ಥರ ನಾಟಕ ಮಾಡ್ತಾರೆ. ಇದು ಸಕತ್ ಆಕ್ವರ್ಡ್ ಆಗಿರುತ್ತೆ. ಬಿಲ್ ಬಂದಾಗ ನೀವಾಗಿಯೇ ನಾನು ಪೇ ಮಾಡಲಾ?”ಅಂತ ಒಮ್ಮೆ ಪ್ರೀತಿಯಿಂದ ಕೇಳಿ. ಎದುರಿನವರು ಇರ್ಲಿ ಬಿಡಿ, ನಾನೇ ಕೊಡ್ತೀನಿ ಅಂದರೆ, ಒತ್ತಾಯ ಮಾಡದೆ ಥ್ಯಾಂಕ್ಯೂ, ನೆಕ್ಸ್ಟ್ ಟೈಮ್ ನಂದೇ ಟ್ರೀಟ್, ಅಂತ ಹೇಳಿ ಮುಗಿಸಿ.

ಹಳೆ ಕಾಲದಲ್ಲಾದ್ರೆ ಹುಡ್ಗನೇ ಬಿಲ್ ಪೇ ಮಾಡಬೇಕು, ಅದೇ ಮ್ಯಾನರಿಸಂ ಅಂತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಇವತ್ತಿನ ದಿನಗಳಲ್ಲಿ ಹುಡ್ಗಿಯರು ಕೂಡ ಫೈನಾನ್ಷಿಯಲಿ ಇಂಡಿಪೆಂಡೆಂಟ್. ಹಾಗಾಗಿ ಹುಡುಗರೇ ಕಟ್ಟಲಿ ಅಂತ ವೇಟ್ ಮಾಡೋ ಬದಲು, ನಾನೂ ಶೇರ್ ಮಾಡ್ತೀನಿ ಅಂತ ಹೇಳೋ ಹುಡ್ಗಿಯರನ್ನ ಎಲ್ರೂ ಇಷ್ಟಪಡ್ತಾರೆ. ಹುಡುಗರು ಕೂಡ ಇಲ್ಲ ಇಲ್ಲ, ನಾನೇ ಕಡ್ತೀನಿ ಅಂತ ಸುಮ್ನೆ ಶೋ ಆಫ್ ಮಾಡೋ ಬದಲು, ಹುಡ್ಗಿ ಶೇರ್ ಮಾಡ್ತೀನಿ ಅಂದಾಗ ಖುಷಿಯಿಂದ ಒಪ್ಕೊಳ್ಳೋದು ಮೆಚ್ಯೂರಿಟಿ.

ಇನ್ನೂ ಬಿಲ್ ಯಾರು ಕೊಡ್ತಾರೆ ಅಂತ ಡಿಸೈಡ್ ಆಗಿರಲ್ಲ. ಅಂದಮೇಲೆ ಮೊದಲ ಡೇಟ್‌ನಲ್ಲೇ ಮೆನುವಿನಲ್ಲಿರೋ ಕಾಸ್ಟ್ಲಿ ಐಟಂ ಆರ್ಡರ್ ಮಾಡೋಕೆ ಹೋಗಬೇಡಿ. ಸಿಂಪಲ್ ಆಗಿ ಕಾಫಿ, ಸ್ನಾಕ್ಸ್ ಅಥವಾ ಸಾಧಾರಣ ಮೀಲ್ಸ್ ಓಕೆ. ಬಿಲ್ ಮೊತ್ತ ಚಿಕ್ಕದಾಗಿದ್ದರೆ ಇಬ್ಬರಲ್ಲಿ ಯಾರಾದರೂ ಒಬ್ಬರು ಕಟ್ಟೋಕೆ ಪ್ರಾಬ್ಲಮ್ ಆಗಲ್ಲ.

ಫಸ್ಟ್ ಡೇಟ್ ಅನ್ನೋದು ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಳ್ಳೋಕೆ ಇರೋ ಚಾನ್ಸ್. ಅಲ್ಲಿ ಬಿಲ್ ಯಾರ್ ಕೊಟ್ರು ಅನ್ನೋದಕ್ಕಿಂತ, ಒಬ್ಬರಿಗೊಬ್ಬರು ಎಷ್ಟರಮಟ್ಟಿಗೆ ಗೌರವ ಕೊಟ್ರಿ ಅನ್ನೋದು ಮುಖ್ಯ. ಜೇಬು ಖಾಲಿ ಆದ್ರೂ ಪರವಾಗಿಲ್ಲ, ಮನಸ್ಸು ಗೆಲ್ಲೋದು ಮುಖ್ಯ. ಆದ್ರೂ ಸೇಫ್ ಸೈಡ್‌ಗೆ, ಫಸ್ಟ್ ಡೇಟ್‌ಗೆ ಹೋಗುವಾಗ ಪಾಕೆಟ್‌ನಲ್ಲಿ ಸ್ವಲ್ಪ ಎಕ್ಸ್‌ಟ್ರಾ ದುಡ್ಡು ಇಟ್ಕೊಂಡು ಹೋಗೋದು ಯಾವತ್ತಿದ್ರೂ ಬುದ್ಧಿವಂತಿಕೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !