April 15, 2026
Wednesday, April 15, 2026
spot_img

ಜ್ಯೋತಿಷಿ ಹೇಳಿದ ಮಾತು ಕೇಳಿ ತಾಯಿಯನ್ನೇ ಕೊಂದು ಹಾರ್ಟ್‌ ಅಟ್ಯಾಕ್‌ ನಾಟಕ ಆಡಿದ ಮಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜ್ಯೋತಿಷಿಯೊಬ್ಬರ ಮಾತು ಕೇಳಿಕೊಂಡು ತಾಯಿಯನ್ನು ಮಗಳೇ ಕೊಂದಿರುವ ಭೀಕರ ಘಟನೆ ತುಮಕೂರಿನಲ್ಲಿ ನಡೆದಿದೆ.

ಕ್ಯಾತಸಂದ್ರ ಠಾಣಾ ವ್ಯಾಪ್ತಿಯ ಬಂಡೇಪಾಳ್ಯದಲ್ಲಿ ಘಟನೆ ನಡೆದಿದ್ದು, ಮೃತರನ್ನು ಪುಷ್ಪಲತಾ ಎಂದು ಗುರುತಿಸಲಾಗಿದೆ.

ಮದುವೆಯ ನಂತರವೂ ಪುಷ್ಪಲತಾ, ಆರೋಪಿ ಸುಚಿತ್ರಾ ಹಾಗೂ ಅವರ ಪತಿ ಒಂದೇ ಮನೆಯಲ್ಲಿ ವಾಸವಿದ್ದರು. ಇದ್ದಕ್ಕಿದ್ದಂತೆಯೇ ತಾಯಿಗೆ ಹೃದಯಾಘಾತವಾಗಿದೆ ಎಂದು ಮಗಳು ನೆಂಟರಿಗೆ ಕರೆ ಮಾಡಿದ್ದಾಳೆ.

ಆರೋಗ್ಯವಾಗಿದ್ದ ಪುಷ್ಪಲತಾಗೆ ಹಾರ್ಟ್‌ ಅಟ್ಯಾಕ್‌ ಅನ್ನೋದನ್ನು ನಂಬೋಕಾಗದ ನೆಂಟರು, ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ಬಾಯಿ ಬಿಡಿಸಿದಾಗ ಜ್ಯೋತಿಷಿ ಮಾತು ಕೇಳಿ ಕೊಲೆ ಮಾಡಿದೆ ಎಂದು ಸುಚಿತ್ರಾ ಒಪ್ಪಿಕೊಂಡಿದ್ದಾರೆ.

ಇನ್ನೊಂದು ಅನುಮಾನ
ಸುಚಿತ್ರಾ ತಮ್ಮ ಹಾಗೂ ನೆಂಟರ ಪ್ರಕಾರ ಇದು ಆಸ್ತಿಗಾಗಿ ನಡೆದ ಕೊಲೆಯಾಗಿದೆ. ಪುಷ್ಪಲತಾ ಪತಿ ಆಟೋ ಓಡಿಸುತ್ತಿದ್ದರು. ಇವರ ಬಳಿ ಎರಡು ಸೈಟ್‌ ಇತ್ತು. ಒಂದು ಸೈಟ್‌ನ್ನು ಮಾರಿದ್ದು, ಇನ್ನೊಂದರಲ್ಲಿ ಮನೆ ಕಟ್ಟಿದ್ದರು. ಸೈಟ್‌ ಮಾರಿದ ಹಣ ಪುಷ್ಪಲತಾ ಹೆಸರಿನಲ್ಲಿತ್ತು. ಇದನ್ನು ಕೊಡು ಎಂದು ಸುಚಿತ್ರಾ ಪೀಡಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !