ಪ್ರೀತಿಸಿ ಮದುವೆಯಾದ ಸಚಿವರ ಪುತ್ರಿ: ತಂದೆಯಿಂದ ರಕ್ಷಣೆಗೆ ಕೋರಿ ಬೆಂಗಳೂರು ಪೊಲೀಸ್ ಬಳಿ ಬಂದ ಜಯ ಕಲ್ಯಾಣಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಸಚಿವ ಶೇಖರ್ ಬಾಬು ಅವರ ಮಗಳು ಜಯ ಕಲ್ಯಾಣಿ ಸತೀಶ್ ಕುಮಾರ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದು, ಇದೀಗ ತಮ್ಮ ಮದುವೆಗೆ ತಂದೆ ವಿರೋಧಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರ‌ ಕಚೇರಿಗೆ ಭೇಟಿ ನೀಡಿ ರಕ್ಷಣೆ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಸಂಪುಟದಲ್ಲಿ ಮುಜರಾಯಿ ಖಾತೆ ಸಚಿವರಾದ ಶೇಖರ್ ಬಾಬು‌ ಪುತ್ರಿ ಜಯಕಲ್ಯಾಣಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಯುವಕನನ್ನು ಪ್ರೀತಿಸಿ, ಮದುವೆಯಾಗಿ, ತನ್ನ ತಂದೆಯಿಂದ ತನಗೆ ರಕ್ಷಣೆ ಕೊಡಿಸಬೇಕೆಂದು ಬೆಂಗಳೂರು ಕಮಿಷನರ್​ ಕಚೇರಿಗೆ ಭೇಟಿ ನೀಡಿದ್ದಾರೆ.
ಹಲವು ವರ್ಷಗಳಿಂದ ಸತೀಶ್ ಅವರನ್ನು ಪ್ರೀತಿಸುತ್ತಿದ್ದೇನೆ. ನಮ್ಮ ಪ್ರೀತಿಗೆ ನನ್ನ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ‌.‌ ಕೆಲ ತಿಂಗಳ ಹಿಂದೆ ಮದುವೆ ಮಾಡಿಕೊಳ್ಳಲು ಮುಂದಾದಾಗ ಸತೀಶ್‌ ಅವರನ್ನು ಅಕ್ರಮವಾಗಿ ಎರಡು ತಿಂಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದರ ಹಿಂದೆ ನಮ್ಮ ತಂದೆಯವರ ಕೈವಾಡವಿದೆ. ನಾನು ಮೇಜರ್ ಆಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ‌. ತಮಿಳುನಾಡಿಗೆ ಹೋದರೆ ನಮ್ಮನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮಗೆ ರಕ್ಷಣೆ ನೀಡಬೇಕೆಂದು ಕರ್ನಾಟಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್​ ಬಾಬು ಅವರ ಮಗಳು ಜಯಕಲ್ಯಾಣಿ ಹಾಗೂ ಸತೀಶ್ ಕುಮಾರ್ ಕಳೆದ 6 ವರ್ಷದಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಮನೆಯವರು ಒಪ್ಪದ ಕಾರಣ 6 ತಿಂಗಳ ಹಿಂದೆ ಅವರಿಬ್ಬರೂ ಓಡಿಹೋಗಲು ನಿರ್ಧರಿಸಿದ್ದರು.2021ರ ಸೆಪ್ಟೆಂಬರ್​ನಲ್ಲಿ ಚೆನ್ನೈನಿಂದ ನಾಪತ್ತೆಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!