ಪಂಚರಾಜ್ಯಗಳ ಸಮರ: ದೇಶದ ಚಿತ್ತ ಈಗ ಎಕ್ಸಿಟ್​ ಪೋಲ್ ನತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್​, ಮಣಿಪುರ, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಪಂಚ ರಾಜ್ಯ ಚುನಾವಣೋತ್ತರ ಸಮೀಕ್ಷೆ ಗಳ ಲೆಕ್ಕಾಚಾರ ಭರ್ಜರಿಯಾಗಿ ಸದ್ದುಮಾಡುತ್ತಿದ್ದು, ಯಾರು ಈ ಬಾರಿ ಅಧಿಕಾರದ ಗದ್ದುಗೆ ಏರುತ್ತಾರೆ ಎಂಬ ಕುತೂಹಲ ಶುರುವಾಗಿದೆ.

ಪಂಚ ರಾಜ್ಯ ಚುನಾವಣೋತ್ತರ ಸಮೀಕ್ಷೆ ಗಳು ನಡೆಯುತ್ತಿದೆ. ಒಂದೊಂದಾಗಿ ಮಾಹಿತಿಗಳು ಹೊರಬೀಳಲಾರಂಭಿಸಿದ್ದು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.

ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದ್ದು, ಆಡಳಿತಾರೂಢ ಕಾಂಗ್ರೆಸ್ ಈ ಬಾರಿ ಮುಖಭಂಗ ಅನುಭವಿಸಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.

ಉತ್ತರಾಖಂಡದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ ಎಂದು ಹೇಳಲಾಗುತ್ತಿದ್ದು, . ರಿಪಬ್ಲಿಕ್ ಸಮೀಕ್ಷೆಯಲ್ಲೂ ಬಿಜೆಪಿ ಅತೀದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎನ್ನಲಾಗಿದೆ.
ಗೋವಾದಲ್ಲಿ ಬಿಜೆಪಿಗೆ ಹಾಗೂ ಇತರೆ ಪಕ್ಷಗಳ ನಡುವೆ ತ್ರೀವ ಪೈಪೋಟಿ ಇರುವುದಾಗಿ ಎಂದು ಹಲವು ಸಮೀಕ್ಷೆಗಳು ಹೇಳಿವೆ.

ಮಣಿಪುರದಲ್ಲೂ ಬಿಜೆಪಿ ಹಾಗೂ ಇತರೆ ಪಕ್ಷಗಳ ನಡುವೆ ಗೆಲುವಿನ ಏರಿಳಿತದ ಆತ ಶುರುವಾಗಿದೆ.

ಮುಖ್ಯವಾಗಿ ಎಕ್ಸಿಟ್​ ಪೋಲ್​ ಕುರಿತ ಪರಿಣತ ಏಜೆನ್ಸಿಗಳಾದ ಇಂಡಿಯಾ ಟುಡೇ ಆಯಕ್ಸಿಸ್ ಮೈ ಇಂಡಿಯಾ, ಸಿ-ವೋಟರ್, ಟುಡೇಸ್ ಚಾಣಕ್ಯ, ಜನ್ ಕೀ ಬಾತ್​ ಮುಂತಾದವು ಈಗಾಗಲೇ ಸಾಕಷ್ಟು ಅಂಕಿ ಅಂಶಗಳಿಂದ ಲೆಕ್ಕಚಾರ ಶುರು ಮಾಡಿದ್ದು , ಇನ್ನು ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಚಿತ್ರಣ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!