ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುದ್ದಿನ ತಾತನಿಂದಲೇ ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ನಡೆದಿದೆ, ಸಾಲದಕ್ಕೆ ಈ ಬಗ್ಗೆ ಠಾಣೆಯಲ್ಲಿ ದೂರು ನೀಡದೆ ಕ್ರೌರ್ಯವನ್ನು ಮುಚ್ಚಿಹಾಕಲು ಮಗುವಿನ ತಂದೆಯೇ ಮುಂದಾಗಿದ್ದಾರೆ.
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲಕ ಕುಟುಂಬ ಇದಾಗಿದ್ದು, ಮನೆಯಲ್ಲಿ ಗಂಡ, ಹೆಂಡತಿ, ಮಗು ಹಾಗೂ ಗಂಡನ ತಂದೆ ವಾಸವಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರು ವರ್ಷದ ಬಾಲಕಿ ಮೇಲೆ ತಾತನೇ ಅತ್ಯಾಚಾರ ಮಾಡಿದ್ದಾನೆ. ಈ ಘಟನೆಯನ್ನು ಮುಚ್ಚಿಹಾಕಲು ಕಾಮುಕ ತಾತನ ಮಗ ಅಂದರೆ ಬಾಲಕಿಯ ತಂದೆ ಪ್ರಯತ್ನಿಸಿದ್ದಾರೆ.
ತಾಯಿ ಕೆಲಸದಿಂದ ಹಿಂದಿರುಗಿದ ನಂತರ, ಬಾಲಕಿಯ ಅತ್ಯಾಚಾರದ ಬಗ್ಗೆ ತಿಳಿದು ಬಂದಿದೆ ಈ ವೇಳೆ ಆಕೆ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದರು. ಆದರೆ, ಬಾಲಕಿಯ ತಾತ ಪೊಲೀಸರ ಬಳಿ ಹೋಗಬೇಡಿ, ನನ್ನ ಬಳಿ ಇರುವ ಬಂಗಾರ ನೀಡುತ್ತೇನೆ, ಆಸ್ತಿ ನಿಮಗೇ ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ಇದಕ್ಕೆ ಬಾಲಕಿಯ ತಾಯಿ ನಿರಾಕರಿಸಿದ್ದಾರೆ. ನಂತರ ಆಕೆಯ ಗಂಡನೇ ವಿಷಯ ದೊಡ್ಡದು ಮಾಡದಂತೆ ಒತ್ತಾಯ ಮಾಡಿದ್ದಾನೆ. ಜೊತೆಗೆ ಬೆದರಿಕೆ ಕೂಡ ಹಾಕಿದ್ದಾನೆ.
ಮಗುವಿನ ತಾಯಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಠಾಣೆಗೆ ದೂರು ನೀಡುವುದಿಲ್ಲ ಎಂದು ಸುಳ್ಳು ಹೇಳಿ ಬಚಾವ್ ಆಗಿದ್ದಾರೆ. ಮಹಿಳೆಯರು ಹೇಗೋ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯಿಂದ ಹೊರಬಂದು ಅಕ್ಕಪಕ್ಕದವರ ಸಹಾಯ ಪಡೆದು ಚಿಕಿತ್ಸೆಗಾಗಿ ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದು ಮೆಡಿಕೋ-ಲೀಗಲ್ ಪ್ರಕರಣವಾದ್ದರಿಂದ, ಪೊಲೀಸರಿಗೆ ತಿಳಿಸುವಂತೆ ಆಸ್ಪತ್ರೆಯವರು ಮಹಿಳೆಗೆ ಸೂಚಿಸಿದ್ದಾರೆ. ಬುಧವಾರ ರಾತ್ರಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ಸಂತ್ರಸ್ತೆ ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಳಿಮಾವು ಪೊಲೀಸರು ಆರೋಪಿ, ಆತನ ಪತ್ನಿ ಮತ್ತು ಇತರ ಇಬ್ಬರು ಪುತ್ರರ ಪತ್ತೆಗೆ ಮುಂದಾಗಿದ್ದು, ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.