ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂದೆಗೆ ಪ್ರೀತಿ ವಿಚಾರ ಗೊತ್ತಾದ್ರೆ ಏನು ಮಾಡ್ತಾರೋ ಅನ್ನೋದು ಎಲ್ಲ ಮಕ್ಕಳ ಭಯ. ಒಪ್ಕೋತಾರೋ, ರಿಜೆಕ್ಟ್ ಮಾಡ್ತಾರೋ ಅಥವಾ ಎಮೋಷನಲ್ ಬ್ಲಾಕ್‌ಮೇಲ್ ಮಾಡ್ತಾರೆ ಎಂದು ಮಕ್ಕಳು ವಿಷಯ ಹೇಳೋಕೆ ಅಂಜುತ್ತಾರೆ.
ಆದರೆ ಇಲ್ಲೊಬ್ಬ ಮಗಳು ತನ್ನ ತಂದೆಯನ್ನು ಕೂರಿಸಿಕೊಂಡು ಸಮಾಧಾನದಿಂದ ತನಗೆ ಬಾಯ್‌ಫ್ರೆಂಡ್ ಇರುವ ವಿಷಯವನ್ನು ಹೇಳಿಕೊಂಡಿದ್ದಾಳೆ. ತಂದೆ ಹಾಗೂ ಮಗಳ ಮುದ್ದಾದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮಗಳು ತಂದೆಯ ಕೈ ಹಿಡಿದುಕೊಂಡು ನನಗೆ ಬಾಯ್‌ಫ್ರೆಂಡ್ ಇದ್ದಾನೆ ಪಪ್ಪ ಎಂದು ಹೇಳಿ ನಾಚಿಕೊಳ್ತಾಳೆ, ಆಕೆ ಧ್ವನಿಯಲ್ಲಿ ಭಯ, ದುಃಖವೂ ಇದೆ. ಆಗ ತಂದೆ ಇರಲಿ ಬಿಡು, ಅದರಲ್ಲೇನಿದೆ. ಎಲ್ಲರೂ ಲವ್ ಮಾಡ್ತಾರೆ, ನಾನು ಮಾಡಿದ್ದೆ, ನಿಮ್ಮಮ್ಮನೂ ಮಾಡಿದ್ರು ಎನ್ನುತ್ತಾರೆ.
ನಂತರ ಮಗಳು ಹನ್ನೊಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳಿಕೊಳ್ತಾಳೆ. ತಂದೆ ನಗುತ್ತಲೇ ಎಲ್ಲವನ್ನೂ ಕೇಳಿಸಿಕೊಂಡು ಅವನ ಫೋಟೊ ತೋರಿಸು ಎಂದು ಹೇಳಿ ನಕ್ಕಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತಂದೆ ಮಗಳ ಬಾಂಧವ್ಯಕ್ಕೆ ಮಾರುಹೋಗಿದ್ದಾರೆ.

