ದಿನಭವಿಷ್ಯ: ಹೊಸವರುಷದ ಮೊದಲ ದಿನ ಹೇಗಿದೆ ಭವಿಷ್ಯ?

ಮೇಷ
ಕೆಲವು ಸಮಸ್ಯೆಗಳಿಗೆ ನಿಮ್ಮಲ್ಲಿ ಪರಿಹಾರವಿಲ್ಲ. ಹಾಗೆಂದು ಹತಾಶೆ ಬೇಡ. ಅದನ್ನು ಮೀರಿ ಬೆಳೆಯುವ ತಾಕತ್ತು ನಿಮ್ಮಲ್ಲಿದೆ. ಸ್ಥೈರ್ಯ ಕುಂದದಿರಲಿ.

ವೃಷಭ
ಮನೆ, ಕುಟುಂಬ ಮತ್ತು ಆಸ್ತಿಪಾಸ್ತಿಯಂತಹ ಆಂತರಿಕ ವಿಷಯದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಎಲ್ಲವನ್ನು ಸಮಾಧಾನದಿಂದ ನಿಭಾಯಿಸಿ.

ಮಿಥುನ
ನಿಮ್ಮ ಆಪ್ತರಂತೆ ನಟಿಸುತ್ತಿರುವ ವಿರೋಧಿಗಳ ಕುರಿತು ಎಚ್ಚರವಿರಲಿ. ಅವರ ಕಾರ್ಯದತ್ತ ಒಂದು ಕಣ್ಣಿಡಿ. ಕೌಟುಂಬಿಕ ಸಹಕಾರ ಪಡೆಯಿರಿ.

ಕಟಕ
ನಿರಂತರ ಕಾರ್ಯದಿಂದ ಬಿಡುವು ಪಡೆಯಲು ಬಯಸುವಿರಿ. ಹೆಚ್ಚು ಹೊಣೆಗಾರಿಕೆ ನಿಮ್ಮ  ನೆಮ್ಮದಿ ಕೆಡಿಸುವುದು. ಅಪೇಕ್ಷಿತರ ನೆರವು ದೊರಕಲಾರದು.

ಸಿಂಹ
ಕೆಲವು ವಿಚಾರಗಳಲ್ಲಿ ಗೊಂದಲ ಕಾಡುವುದು. ಅದನ್ನು ಪರಿಹರಿಸಿ ಮುಂದಿನ ಹೆಜ್ಜೆಯಿಡಿ. ಕುರುಡಾಗಿ ವ್ಯವಹಾರ ನಡೆಸುವುದು ಪ್ರತಿಕೂಲವಾದೀತು.

ಕನ್ಯಾ
ಇತರರ ದೌರ್ಬಲ್ಯ ನಿಮಗೆ ತಿಳಿದಿದೆ. ಅದನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಲೂ ತಿಳಿದಿದೆ. ಆಪ್ತರ ಹಣಕಾಸು ಸಮಸ್ಯೆ ನೀಗಲು ನೆರವಾಗಿ.

ತುಲಾ
ಕೆಲವು ವಿಷಯ ನಿಮಗೆ ಕಿರಿಕಿರಿ ತಂದೀತು. ಆದರೆ ಅದನ್ನು ನಿಭಾಯಿಸುವ ಹೊಣೆಗಾರಿಕೆ ನಿಮ್ಮದು.  ನಿಮ್ಮ ಗುರಿಯೆಡೆಗೆ ಹೆಜ್ಜೆಹೆಜ್ಜೆಯಾಗಿ ಮುಂದುವರಿಯಿರಿ.

ವೃಶ್ಚಿಕ
ವ್ಯವಹಾರದಲ್ಲಿ ಕೆಲವರು ಒಡ್ಡುವ ಆಮಿಷಕ್ಕೆ ಬಲಿಯಾಗದಿರಿ. ಅದರ ಹಿಂದೆ ಮೋಸವೂ ಇರಬಹುದು. ಪ್ರಾಮಾಣಿಕ ಹಾದಿಯೇ ನಿಮಗೊಳಿತು.

ಧನು
ಸಂಬಂಧದಲ್ಲಿ ಸಂಘರ್ಷ ಮೂಡಲು ಅವಕಾಶ ಕೊಡದಿರಿ. ಸಣ್ಣ ಮಾತಿಗೆ ರೇಗದಿರಿ. ಎಲ್ಲವನ್ನು ಸಹನೆಯಿಂದ ಸ್ವೀಕರಿಸಿ. ಹಣದ ವಿಷಯದಲ್ಲಿ ಚಿಂತೆ ಹೆಚ್ಚಳ.

ಮಕರ
ದೈನಂದಿನ ಆಗುಹೋಗು ನಿಮ್ಮನ್ನು ಇಂದು ಹೆಚ್ಚು ಬಾಧಿಸದು. ಅದಕ್ಕಿಂತ ಮಿಗಿಲಾದ ವಿಷಯ ನಿಮ್ಮ ತಲೆಯಲ್ಲಿದೆ. ದೊಡ್ಡ ಸಾಧನೆಯ ಗುರಿ ನಿಮ್ಮ ಮುಂದಿದೆ.

ಕುಂಭ
ನಿಮ್ಮ ಆಪ್ತರೆನಿಸಿದವರು ಇಂದು ಅಸಹಜ ವರ್ತನೆ ತೋರಬಹುದು. ಅದಕ್ಕೆ ಗ್ರಹಗತಿ ಕಾರಣ. ಅವರನ್ನು ಸಹನೆಯಿಂದ ನಿಭಾಯಿಸಿ. ಎಲ್ಲ ಸರಿಯಾಗುವುದು.

ಮೀನ
ನಿಮಗಿಂದು ಪೂರಕ ದಿನ. ಮನದಿಚ್ಛೆ ಪೂರೈಸುವುದು. ಸ್ನೇಹವು ಪ್ರೀತಿಯಾಗಿ ಮಾರ್ಪಡಬಹುದು. ವೃತ್ತಿಯಲ್ಲಿ  ಗೌರವ ಹೆಚ್ಚುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!