ದಿನಭವಿಷ್ಯ : ಉದ್ಯಮಿಗಳಿಗೆ ಅಧಿಕ ಲಾಭ, ಸಣ್ಣ ಪ್ರಯಾಣದ ಸಾಧ್ಯತೆ

ಮೇಷ
ಮನೆಯಲ್ಲಿ, ಕೆಲಸದ ಜಾಗದಲ್ಲಿ ಎಲ್ಲರ ಜತೆ ಉತ್ತಮ ಹೊಂದಾಣಿಕೆ ಸಾಸುವಿರಿ.ಇದರಿಂದ ಎಲ್ಲ ಕಾರ್ಯಗಳು ಸುಲಲಿತ. ಬಂಧುಗಳ ಸಹಕಾರ.

ವೃಷಭ
ಕೆಲವು ಬೆಳವಣಿಗೆ ನಿಮಗೆ ಹೊಸ ಪಾಠ ಹೇಳಿಕೊಡಲಿದೆ. ನಿಮ್ಮ ಸಾಮರ್ಥ್ಯವನ್ನು ಸದುಪಯೋಗ ಮಾಡಿಕೊಳ್ಳಿ. ಕೌಟುಂಬಿಕ ಭಿನ್ನಮತ.

ಮಿಥುನ
ಅಸಾಧ್ಯವೆನಿಸಿದ ಕೆಲಸವೂ ಇಂದು ಸಾಧ್ಯವಾಗುವುದು. ಖಾಸಗಿ ಬದುಕಿನಲ್ಲಿ ಅನಿರೀಕ್ಷಿತ ಬೆಳವಣಿಗೆ ಉಂಟಾದೀತು.
ಬಂಧುತ್ವ ಹೆಚ್ಚಳ.

ಕಟಕ
ನೀವಿಂದು ನಾಯಕತ್ವದ ಗುಣ ಪ್ರದರ್ಶಿಸಬೇಕು. ಆ ಮೂಲಕ ನಿಮ್ಮ ಹಾಗೂ ಇತರರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.
ಧನ ಲಾಭ.

ಸಿಂಹ
ವೈಯಕ್ತಿಕ ಹಿತಾಸಕ್ತಿ ಆದ್ಯತೆ ಪಡೆಯುತ್ತದೆ. ಇದರಿಂದಾಗಿ ನೀವು ಸ್ವಾರ್ಥಿ ಎಂಬ
ಭಾವನೆ ಕೆಲವರಲ್ಲಿ ಉಂಟಾಗಲೂ ಬಹುದು.

ಕನ್ಯಾ
ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾದೀತು.ಅದನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು. ಪರಿಸ್ಥಿತಿ ಉದ್ವಿಗ್ನವಾಗಲು ಅವಕಾಶ ಕೊಡದಿರಿ.

ತುಲಾ
ವೃತ್ತಿಯಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು.ಆದರೆ ಕೌಟುಂಬಿಕ ವಿಚಾರಗಳಲ್ಲಿ ಹಿನ್ನಡೆ ಅನುಭವಿಸುವಿರಿ. ವಾಗ್ವಾದ ನಡೆದೀತು.

ವೃಶ್ಚಿಕ
ಬಿಡುವಿಲ್ಲದ ಕೆಲಸ. ಕಾರ್ಯದಲ್ಲಿ ಸಫಲತೆ. ಇದರ ನಡುವೆಯೂ ಕುಟುಂಬಕ್ಕೆ ಸಮಯ ಮೀಸಲಿಡಿ.ಅವರ ಬೇಕುಬೇಡಗಳನ್ನು ವಿಚಾರಿಸಿರಿ.

ಧನು
ಕುಟುಂಬಸ್ಥರ ಅಥವಾ ಪ್ರೀತಿಪಾತ್ರರ ಜತೆ ಸೇರಿಕೊಂಡು ಮಹತ್ವದ್ದನ್ನು ಸಾಸುವಿರಿ. ಹಳೆಯ ನೆನಪು ಕೆದಕುವ ವ್ಯಕ್ತಿಗಳ ಭೇಟಿ ಸಂಭವ.

ಮಕರ
ನಿಮ್ಮ ಸಂಗಾತಿಯ ಅಭಿಪ್ರಾಯ ಕಡೆಗಣಿಸಬೇಡಿ. ಕೆಲವು ವಿಚಾರಗಳಲ್ಲಿ ಅವರ ಅಭಿಮತವೂ ಮುಖ್ಯವಾಗುವುದು.ಆರ್ಥಿಕ ಒತ್ತಡ.

ಕುಂಭ
ವೃತ್ತಿಯಲ್ಲಿನ ಕೆಲವು ಬೆಳವಣಿಗೆ, ಕೆಲವರ ವರ್ತನೆ ಅಸಹನೆ ಮೂಡಿಸುವುದು. ಆದರೆ ಏನೂ ಮಾಡಲಾಗದ ಹತಾಶೆಯಿಂದ ತೊಳಲಾಡುವಿರಿ.

ಮೀನ
ಯಾರ ಜತೆಗಾದರೂ ಸಮಸ್ಯೆ ಉಂಟಾದರೆ ಅದನ್ನು ಕೂಡಲೇ ಬಗೆಹರಿಸಿ. ಅದು ದ್ವೇಷಾಸೂಯೆಗೆ ತಿರುಗದಂತೆ ಎಚ್ಚರ ವಹಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!