ದಿನಭವಿಷ್ಯ: ಇಂದಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಒತ್ತಡ ಕಡಿಮೆಯಾಗಲಿದೆ

ಮೇಷ
ನಿಮಗಿಂದು ಮಹತ್ವದ ದಿನ. ಕೌಟುಂಬಿಕ ವಿಚಾರಗಳಿಗೆ  ಇಂದು ಪ್ರಾಮುಖ್ಯತೆ . ಯಾವುದೇ ವಿಷಯ ಕಿರಿಕಿರಿ ತಾರದಂತೆ ನೋಡಿಕೊಳ್ಳಿ.

ವೃಷಭ
ನಿಮ್ಮ ನಡೆನುಡಿ ಇಂದು ಕೆಲವರಿಗೆ ಅಚ್ಚರಿ ತರಬಹುದು. ಯಾರ ವಿರೋಧವನ್ನೂ ಕಟ್ಟಿಕೊಳ್ಳದಂತೆ ನಾಜೂಕಾಗಿ ವ್ಯವಹರಿಸಿರಿ.

ಮಿಥುನ
ಪ್ರೀತಿಪಾತ್ರರು ಹಣದ ಸಮಸ್ಯೆ ಹೊಂದಿದ್ದರೆ ಅವರ ನೆರವಿಗೆ ಧಾವಿಸುವುದು ನಿಮ್ಮ ಕರ್ತವ್ಯ. ಕೌಟುಂಬಿಕ ಕಟ್ಟುಪಾಡುಗಳನ್ನು ಪಾಲಿಸಿರಿ.

ಕಟಕ
ಅಶಾಂತ ಮನಸ್ಸು. ಕೆಲವು ವಿಷಯಗಳು ಅಸಹನೆ ಸೃಷ್ಟಿಸುತ್ತವೆ. ಅಭದ್ರತೆ ಕಾಡುವುದು. ನಿಜವಾಗಿ ನಿಮ್ಮ ಚಿಂತೆ ನಿರಾಧಾರಿತ. ನಿರಾಳವಾಗಿರಿ.

ಸಿಂಹ
ಗ್ರಹಗತಿ ನಿಮಗೆ ಪೂರಕವಾಗಿದೆ. ನಿಮ್ಮ ಕನಸು ಈಡೇರುವ ಸಂಕೇತ ತೋರುತ್ತಿದೆ. ಸ್ನೇಹವು ಪ್ರೀತಿಯಾಗಿ ಮಾರ್ಪಡಬಹುದು. ಉಲ್ಲಾಸ, ಸಮಾಧಾನ.

ಕನ್ಯಾ
ಆಮಿಷಕ್ಕೆ ಬಲಿಯಾಗಿ ತಪ್ಪು ನಿರ್ಧಾರ ತಾಳದಿರಿ. ಬೆಟ್ ಕಟ್ಟುವ ತುಡಿತ ನಿಯಂತ್ರಿಸಿ. ಮನೋನಿಗ್ರಹ ಅವಶ್ಯ.  ಕೌಟುಂಬಿಕ ಬದ್ಧತೆ ಈಡೇರಿಸಿರಿ.

ತುಲಾ
ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಕೆಲವರ ಯತ್ನ. ನೀವು ಇದನ್ನು ನಾಜೂಕಾಗಿ ನಿಭಾಯಿಸಿ. ಅವಸರದ ನಿರ್ಧಾರ ತಾಳದಿರಿ. ಸಹನೆಯಿರಲಿ.

ವೃಶ್ಚಿಕ
ಕೆಲವು ವಿಷಯದಲ್ಲಿ ಒಳಗೊಳ್ಳುವುದು ನಿಮಗಿಷ್ಟವಿಲ್ಲ. ಆದರೂ ನೀವು ಅನಿವಾರ್ಯವಾಗಿ ಅದರಲ್ಲಿ ಒಳಗೊಳ್ಳುವಿರಿ. ಇದರಿಂದ ಮನಸ್ಸಿಗೆ ಅಶಾಂತಿ, ಅಸಹನೆ.

ಧನು
ದೊಡ್ಡ ಸಮಸ್ಯೆ ಬೆನ್ನ ಮೇಲೇರಿದೆ ಎಂಬಂತೆ ವರ್ತಿಸುವಿರಿ. ಸರಿಯಾಗಿ ನೋಡಿದರೆ ಅದು ಸಮಸ್ಯೆಯೇ ಅಲ್ಲ. ನೀವೇ ಅದನ್ನು ದೊಡ್ಡದಾಗಿಸಿದ್ದೀರಿ.

ಮಕರ
ಯಾವುದಾದರೂ ವಿಷಯದಲ್ಲಿ ಗೊಂದಲ ಇದ್ದರೆ ಅದನ್ನು ಸಂಪೂರ್ಣ ನಿವಾರಿಸಿ. ದೃಢ ನಿರ್ಧಾರ ತಾಳಲು ಸೂಕ್ತ ಸಮಯ. ಉದ್ಯೋಗದ ಒತ್ತಡ.

ಕುಂಭ
ಮುಖ್ಯ ವಿಷಯದಲ್ಲಿ ಮಹತ್ವದ ನಿರ್ಧಾರ ತಾಳಬೇಕಾದ ಪ್ರಸಂಗ. ಆದರೆ ನೀವು ಅದಕ್ಕೆ ಸಿದ್ಧರಾಗಿದ್ದೀರಾ ನೋಡಿಕೊಳ್ಳಿ. ಅವಕಾಶ ಕಳಕೊಳ್ಳದಿರಿ.

ಮೀನ
ಜೀವನದ ಸಣ್ಣ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಾ ಮಹತ್ವದ ವಿಚಾರ ಕಡೆಗಣಿಸುತ್ತಿದ್ದೀರಿ. ನಿಲುವು ಬದಲಿಸುವ ಬೆಳವಣಿಗೆ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!