ದಿನ ಭವಿಷ್ಯ : ಇಂದು ಈ ರಾಶಿಯವರಿಗೆ ಸುವರ್ಣ ದಿನ!

ಮೇಷ
ನಿಮಗಿಂದು ಹಲವು ಸಮಸ್ಯೆ. ಸುಲಭ ಪರಿಹಾರ ಸಿಗದು. ಸಹನೆಯಿಂದ ವರ್ತಿಸಿ. ಯಾವುದೇ ಕೆಲಸ ಬಾಕಿ ಉಳಿಸಬೇಡಿ. ವಾಗ್ವಾದಕ್ಕೆ ಇಳಿಯದಿರಿ

ವೃಷಭ
ಅಧಿಕ ಕಾರ್ಯದೊತ್ತಡ. ತಪ್ಪೆಸಗದ ರೀತಿ ಕಾರ್ಯ ನಿರ್ವಹಿಸಬೇಕಾಗಿದೆ. ಸಂಬಂಧದಲ್ಲಿ ತೊಡಕು ಉಂಟಾದೀತು. ಸರಿಯಾಗಿ ನಿಭಾಯಿಸಿ. ಆರ್ಥಿಕ ಸಂಕಷ್ಟ .

ಮಿಥುನ
ಮನಸ್ಸಿನಲ್ಲಿ ಕೆಲವು ಗೊಂದಲ. ಇದರಿಂದ ಅಭದ್ರತೆಯ ಭಾವನೆ ಕಾಡಬಹುದು.  ಮನೆಯಲ್ಲಿ ವಾಗ್ವಾz ನಡೆದೀತು. ಸಂಯಮ ಕಳಕೊಳ್ಳದಿರಿ.

ಕಟಕ
ಕೆಲಸದಲ್ಲಿ ವಿಳಂಬ. ಇದು ನಿಮ್ಮ ಚಿಂತೆಗೆ ಕಾರಣವಾದೀತು.ಮನೆಯಲ್ಲಿ ಅಭಿಪ್ರಾಯ ಭೇದ.ಅನಿರೀಕ್ಷಿತ ಖರ್ಚು. ಬಂಧುಗಳಿಂದ ಕಿರಿಕಿರಿ.

ಸಿಂಹ
ನಿಮ್ಮ ತಾಳ್ಮೆಯ ವರ್ತನೆ ಸಮಸ್ಯೆ ಎದುರಿಸಲು ನೆರವು ನೀಡುವುದು. ದಿನದಂತ್ಯಕ್ಕೆ ನಿಮ್ಮ ನಿರ್ವಹಣೆಗೆ ನೀವೇ ತೃಪ್ತಿ ಪಟ್ಟುಕೊಳ್ಳುವಿರಿ. ಕೌಟುಂಬಿಕ ಶಾಂತಿ.

ಕನ್ಯಾ
ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ಮನಸ್ಸಿನ ಗೊಂದಲ ನಿಮ್ಮ ಕಾರ್ಯದಲ್ಲಿ ಪ್ರತಿಫಲಿಸಬಹುದು. ಇದರಿಂದ ಎಡವಟ್ಟು ಸಂಭವಿಸಬಹುದು.

ತುಲಾ
ಉತ್ತಮ ನಿರ್ವಹಣೆ ತೋರುವಿರಿ. ಮೇಲಧಿಕಾರಿಗಳ ಮೆಚ್ಚುಗೆ ಸಂಪಾದಿಸುವಿರಿ. ಕೌಟುಂಬಿಕವಾಗಿ ಉತ್ತಮ ಹೊಂದಾಣಿಕೆ. ಆರೋಗ್ಯ ಸ್ಥಿರ.

ವೃಶ್ಚಿಕ
ನೀವಿಂದು ಎಲ್ಲರ ಗಮನಕ್ಕೆ ಬರುವ ಸಾಧನೆ ಮಾಡುವಿರಿ. ನಿಮ್ಮ ನಿಲುವಿಗೆ ಮನ್ನಣೆ ದೊರಕುವುದು. ವಿವಾಹಿತರಿಗೆ ಶುಭ ಬೆಳವಣಿಗೆ.

ಧನು
ಇಂದು ನಿಮ್ಮ ಕಾರ್ಯಕ್ಕೆ ಉತ್ತಮ ಫಲಿತಾಂಶ ದೊರಕು ವುದಿಲ್ಲ.ಹಾಗೆಂದು ನಿರಾಶ ರಾಗಬೇಕಿಲ್ಲ. ಆತ್ಮೀಯರ ಸಂಗದಲ್ಲಿ ಸಂತೋಷ ಪಡುವಿರಿ.

ಮಕರ
ಕಠಿಣ ಶ್ರಮ ಹಾಕಿದರಷ್ಟೆ ನೀವು ಬಯಸಿದ ಕಾರ್ಯ ಮುಗಿವುದು. ಇತರರನ್ನು ನಂಬಿ ಕೂರದಿರಿ.ಬಂಧುಗಳ ಟೀಕೆಗೆ ಮನಸ್ಸು  ಕೆಡಿಸಿಕೊಳ್ಳದಿರಿ.

ಕುಂಭ
ಸಹೋದ್ಯೋಗಿಗಳ ಜತೆ ಸಂಘರ್ಷ ನಡೆದೀತು. ಕೆಲವು ವಿಷಯಗಳನ್ನು ಮುಕ್ತವಾಗಿ ಚರ್ಚಿಸಬೇಕು. ಮುಸುಕಿನ ಗುದ್ದಾಟ ಒಳ್ಳೆಯದಲ್ಲ.

ಮೀನ
ಹೆಚ್ಚು ಕೆಲಸ. ಹೆಚ್ಚು ಹೊಣೆಗಾರಿಕೆ. ಆರ್ಥಿಕವಾಗಿ ಪೂರಕ ದಿನವಲ್ಲ. ಖರ್ಚು ಹೆಚ್ಚು. ಬಂಧುಗಳ ಮಾತು ಚಿಂತೆಗೆ ಕಾರಣವಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!