ದಿನ ಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ?

ಮೇಷ
ಇತರರಿಗೆ ನೆರವಾಗುವ ಧಾವಂತದಲ್ಲಿ ನೀವು ಕಷ್ಟಕ್ಕೆ ಸಿಲುಕದಿರಿ. ವೃತ್ತಿಯಲ್ಲಿ ಹೊಂದಾಣಿಕೆ ಅವಶ್ಯ. ನಿಮ್ಮದೇ ಅಭಿಪ್ರಾಯ ಹೇರಲು ಹೋಗಬೇಡಿ.

ವೃಷಭ
ಇಂದು ಶಾಂತ ಮನಸ್ಥಿತಿ ಕಾಯ್ದುಕೊಳ್ಳಿರಿ. ಸಣ್ಣ ವಿಷಯಕ್ಕೂ ಕಟುವಾದ ಪ್ರತಿಕ್ರಿಯೆ ನೀಡಲು ಹೋಗದಿರಿ. ಭಾವೋದ್ವೇಗ ನಿಯಂತ್ರಣ ಅವಶ್ಯ.

ಮಿಥುನ
ಗಂಭೀರ ಕಾರ್ಯ ಮಾಡದೆ ನಿರಾಳವಾಗಿ ಇರುವುದು ನಿಮ್ಮ ಉದ್ದೇಶ. ಆದರೆ ಕೆಲವು ಅನಿವಾರ್ಯತೆ ನಿಮ್ಮ ವಿರಾಮವನ್ನು ಕಸಿಯಬಹುದು.

ಕಟಕ
ವೃತ್ತಿಯಲ್ಲಿ ಅಥವಾ ಪ್ರೀತಿಯ ವಿಷಯದಲ್ಲಿ ರಾಜತಾಂತ್ರಿಕ ನಡೆ ಒಳ್ಳೆಯದು. ಸಂದರ್ಭಕ್ಕೆ ತಕ್ಕಂತೆ ನಡಕೊಳ್ಳಿ. ಏಕಾಗ್ರತೆ ಅತಿ ಮುಖ್ಯ.

ಸಿಂಹ
ನಿಮ್ಮ ಕಾರ್ಯದಲ್ಲಿ ನಿಮಗೆ ಮನಸ್ಸಿಲ್ಲ. ಬೇರಾವುದೋ ವಿಷಯ ನಿಮ್ಮ ಮನ ಕೊರೆಯುತ್ತದೆ. ವಿಶ್ವಾಸದಿಂದ ಹೆಜ್ಜೆಯಿಡಿ.

ಕನ್ಯಾ
ಅನಿರೀಕ್ಷಿತ ಸವಾಲು ಎದುರಿಸುವಿರಿ. ಅದನ್ನು ಜಾಣತನದಿಂದ ನಿಭಾಯಿಸಿ. ಇತರರ ವಿರೋಧ ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಡಿ. ಸಹನೆ ಅತ್ಯವಶ್ಯ.

ತುಲಾ
ಆಪ್ತರೊಂದಿಗೆ ಮುನಿಸು. ಅದರಿಂದಾಗಿ ನಿಮ್ಮ ಏಕಾಗ್ರತೆ ನಷ್ಟ. ಭಾವನಾತ್ಮಕ ಏರುಪೇರು. ಸ್ವಸ್ಥ ಚಿತ್ತದಿಂದ ಆಲೋಚಿಸಿ ಮುಂದುವರಿಯಿರಿ.

ವೃಶ್ಚಿಕ
ಪ್ರಚಲಿತ ಸಮಸ್ಯೆ ಪರಿಹಾರ ಕಾಣಲು ಇನ್ನೂ ಒಂದೆರಡು ದಿನ ಬೇಕು. ಹಾಗಾಗಿ ತಾಳ್ಮೆ ಕಾಯ್ದುಕೊಳ್ಳಿ. ಅವಸರದ ಕ್ರಮಕ್ಕೆ ಮುಂದಾಗದಿರಿ.

ಧನು
ನಿಮ್ಮ ವ್ಯಕ್ತಿತ್ವದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಿ. ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಭಾವನಾತ್ಮಕ ದೃಢತೆ ಇಂದು ಪ್ರದರ್ಶಿಸುವಿರಿ.

ಮಕರ
ಕೆಲವು ವಿಚಾರಗಳಲ್ಲಿ ಕಠಿಣ ನಿಲುವು ಬಿಟ್ಟು ಸ್ಪಂದನೀಯ ನಿಲುವು ತಳೆಯಿರಿ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಿ. ಆಪ್ತರ ಸಹಕಾರ,ನೆರವು ಲಭಿಸಲಿದೆ.

ಕುಂಭ
ನಿಮ್ಮ ಉದ್ದೇಶ ಇಂದು ಸಾಧಿತವಾಗುವುದು. ಸಿಗುವ ಸಣ್ಣ ಅವಕಾಶವನ್ನೂ ಕಳಕೊಳ್ಳದಿರಿ. ಬಂಧುಗಳಿಂದ ಉತ್ತಮ ಸಹಕಾರ ಲಭ್ಯ.

ಮೀನ
ನಿಮಗೇನು ಬೇಕು ಎಂಬ ಕುರಿತಂತೆ ನಿಮ್ಮಲ್ಲೇ ಸ್ಪಷ್ಟತೆಯಿಲ್ಲ.ಮೊದಲು ನಿಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಿ. ಕೌಟುಂಬಿಕ ನೆಮ್ಮದಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!