ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗೆ ದಯಾನಂದ ಸ್ವಾಮೀಜಿ ಆಗ್ರಹ

ಹೊಸದಿಗಂತ ವರದಿ, ಬಾಗಲಕೋಟೆ:
ಜಿಲ್ಲೆಯ ಇಳಕಲ್ ತಾಲ್ಲೂಕಿನ ಗುಗ್ಗಲಮರಿ ಗ್ರಾಮದಲ್ಲಿ ಮೇ.22 ರಿಂದ 26 ರವರೆಗೆ ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಬೇಕು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀ ಜಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ‌.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರ ಹೆಸರಿನಲ್ಲಿ ಪ್ರಾಣಿಬಲಿ ಕೊಡುವುದು ಕೊಲೆಯಾಗುತ್ತದೆ. ದೇವಾಲಯ ದಿವ್ಯಾಲಯ ಆಗಬೇಕು. ಪ್ರಾಣಿಬಲಿ ಕ್ರೌರ್ಯ, ಅನಾಗರಿಕ ಎಂದು ಹೇಳಿದರು. ಪ್ರಾಣಿಬಲಿ ನಿಷೇಧ ಮಾಡಿ ಕೋರ್ಟ್ ಆದೇಶ ಮಾಡಿದ್ದು, ಇದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ಜಿಲ್ಲಾಡಳಿತ ಕೂಡ ದೇವಸ್ಥಾನದ ಮುಂದೆ ಜಾಗೂ ಜಾತ್ರೆಯಲ್ಲಿ ನಡೆಯುವ ಪ್ರಾಣಿಬಲಿ ಹಾಗೂ ರಕ್ತ ಹರಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಇತ್ತೀಚಿಗೆ ಮಂಗಳಗುಡ್ಡ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಸಾವಿರಾರು ಪ್ರಾಣಿಗಳ ಮಾರಣ ಹೋಮ ನಡೆಯಿತು. ಪೊಲೀಸರ ಮುಂದೆಯೇ ಬಲಿ ಕೊಡುವ ಪದ್ದತಿ ನಡೆಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!