ಆರ್‌ಟಿ‌ಒ ಅಧಿಕಾರಿಗಳಿಂದ ಹಗಲು ದರೋಡೆ: ಕ್ರಮ ಕೈಗೊಳ್ಳದ ಮೇಲಾಧಿಕಾರಿಗಳು

ಹೊಸದಿಗಂತ ವರದಿ ಕೊಪ್ಪಳ:

ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ 50ರಲ್ಲಿ ಆರ್‌ಟಿ‌ಒ ಅಧಿಕಾರಿಗಳಿಂದ ಹಗಲು ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೌದು! ಕೊಪ್ಪಳದ ಆರ್ ಟಿ ಓ ಅಧಿಕಾರಿಗಳಿಂದ ಹಗಲು ದರೋಡೆ ಸುಲಿಗೆ ನಡೆಯುತ್ತಿದೆ.
ಲಾರಿ ಚಾಲಕರಿಂದ ಹಾಗೂ ಖಾಸಗಿ ವಾಹನಗಳಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಲಾರಿ ಚಾಲಕನೊಬ್ಬನ 50 ರೂ. ಹಿಡಿದು ಆರ್‌ಟಿ‌ಒ ಅಧಿಕಾರಿಗೆ ಕೊಡಲು ಬಂದಾಗ ಮಾಧ್ಯಮದವರ ಕೈಗೆ ಸಿಕ್ಕುಬಿದ್ದಿದ್ದು ಕ್ಯಾಮೆರಾವನ್ನು ಕಂಡು ಅಧಿಕಾರಿ ಗಡಿಬಿಡಿಗೊಂಡ ಘಟನೆ ನಡೆಯಿತು.

ಇನ್ನು ಮಾಧ್ಯಮದವರನ್ನು ನೋಡಿ ಆರ್‌ಟಿ‌ಒ ಸಿಬ್ಬಂದಿಯೊಬ್ಬ ಪಕ್ಕದಲ್ಲಿದ್ದ ಹೊಲದಲ್ಲಿ ಓಡಿದ ಘಟನೆ ಕೂಡ ಜರುಗಿತು. ದುಡ್ಡು ತುಂಬಿದ ಚೀಲ ಹಿಡಿದ ಓಡಿದ ಸಿಬ್ಬಂದಿ ಹಿಂದೆ ಮಾಧ್ಯಮದವರು ಬೆನ್ನೆಟ್ಟಿದಾಗ ತಪ್ಪಿಸಿಕೊಂಡ ಘಟನೆ ಕೂಡ ಜರುಗಿತು. ಒಟ್ಟಾರೆ ಕೊಪ್ಪಳದಲ್ಲಿ ಆರ್‌ಟಿ‌ಒ ಅಧಿಕಾರಿಗಳಿಂದ ಹಗಲು ದರೋಡೆ ನಡೆಯುತ್ತಿದ್ದರೂ ಮೇಲಾಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ದುರಂತವೇ ಸರಿ.

ಮೇಲಾಧಿಕಾರಿಗಳು ಶಾಮೀಲು?
ಆರ್‌ಟಿ‌ಒ ಅಧಿಕಾರಿಗಳಿಂದ ಹಗಲು ದರೋಡೆ ನಡೆಯುತ್ತಿರುವ ಬಗ್ಗೆ ವಿಡಿಯೋ ವೈರಲ್ ಆಗಿದ್ದರೂ, ಸಹ ಮೇಲಾಧಿಕಾರಿಗಳು ಕ್ರಮಕೈಗೊಂಡಿಲ್ಲ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀ‌ಕಾಂತ್ ರನ್ನು ವಿಚಾರಿಸಿದರೆ, ನಾನು ಬೆಂಗಳೂರಿನಲ್ಲಿ ಇದ್ದೇನೆ. ಈ ಬಗ್ಗೆ ಕ್ರಮಕೈಗೊಂಡಿಲ್ಲ. ಆರ್‌ಟಿ‌ಒ ಅಧಿಕಾರಿಗೆ ಕರೆ ಮಾಡಿದ್ದೆ. ಆದರೆ, ರೀಚ್ ಆಗುತ್ತಿಲ್ಲ. ಕೊಪ್ಪಳ ಕ್ಕೆ ಬಂದು ಪರಿಶೀಲನೆ ನಡೆಸುವೆ. ನೋಡೋಣ ಎಂದು ಆರಿಕೆ ಉತ್ತರ ನೀಡಿದ್ದಾರೆ. ಈ ಹಗಲು ದರೋಡೆ ಯಲ್ಲಿ ಮೇಲಾಧಿಕಾರಿಗಳ ಪಾತ್ರ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!