ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಪ್ರದೇಶಕ್ಕೆ ಕಾಂಗ್ರೆಸ್ ಬದಲಾವಣೆಯ ಶಕ್ತಿ ನೀಡಲಿದ್ದು, ನೆಮ್ಮದಿಯ ದಿನಗಳು ಬರಲಿವೆ. ಘೋಷಣೆಯಾಗಿರುವ ೪ ಗ್ಯಾರೆಂಟಿಗಳು ಜನಪರ ಆಡಳಿತಕ್ಕೆ ಮುನ್ನುಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನಗಳು ಹತ್ತಿರದಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಅವರು ಭಾನುವಾರ ಉಡುಪಿ ಜಿಲ್ಲೆಯ ಬೈಂದೂರಿನ ಜೆ.ಎನ್.ಆರ್ ಕಲಾ ಮಂದಿರದಲ್ಲಿ ನಡೆದ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನಾವು ಕರಾವಳಿ ಭಾಗಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ, ಉದ್ಯೋಗ ಸೃಷ್ಟಿಸುವ ಸಂಕಲ್ಪ ಮಾಡಿದ್ದು, ಅಧಿಕಾರಕ್ಕೆ ಬಂದ ಕೂಡಲೇ ಈ ಕುರಿತು ತಿರ್ಮಾನ ಕೈಗೊಳ್ಳುತ್ತೇವೆ. ಕರಾವಳಿ ಪ್ರಗತಿಯೇ ನಮ್ಮ ಆದ್ಯತೆ. ಹಿಂದುತ್ವ ಯಾರ ಮನೆ ಆಸ್ತಿಯಲ್ಲ, ನಾನು ಕೂಡ ಹಿಂದೂ ನನ್ನಂತರ ಸಾವಿರಾರು ಜನ ಕಾಂಗ್ರೆಸ್ ಕಾರ್ಯರ್ತರು ನಿತ್ಯ ಪೂಜೆ ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಆದರೆ ಬಿಜೆಪಿ ಹಿಂದುತ್ವ ರಾಜಕೀಯ ಲಾಭ್ ಹಿಂದುತ್ವವಾಗಿದೆ. ಬಿಜೆಪಿ ಜನರು ಬದುಕಿನ ಬಗ್ಗೆ ಚಿಂತೆ ಮಾಡಲ್ಲ, ಭಾವನೆಗೆ ಬೆಲೆ ಕೊಡುತ್ತಾರೆ. ನಮ್ಮ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗ ಪ್ರವಾಸೋದ್ಯಮ, ಉದ್ಯೋಗ, ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಮೂಲಕ ನಿರುದ್ಯೋಗ ಹೋಗಲಾಡಿಸುತ್ತೇವೆ, ಕರಾವಳಿ ಭಾಗದ ಮೀನುಗಾರರ ಸಮಸ್ಯೆಗಳನ್ನು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ ಭರವಸೆ ನೀಡಿದ್ದರು.