ಚೆಕ್ಪೋಸ್ಟ್ ಗಳಿಗೆ ದಿಢೀರ್ ಭೇಟಿ ನೀಡಿದ ಡಿಸಿ: 8 ಮಂದಿ ಸರ್ಕಾರಿ ನೌಕರರಿಗೆ ನೋಟೀಸ್ ಜಾರಿ

ಹೊಸದಿಗಂತ, ಹಾಸನ :

ಜಿಲ್ಲಾ ಚುನಾವಣಾಧಿಕಾರಿ ಸಿ ಸತ್ಯಭಾಮ ಚೆಕ್ ಪೋಸ್ಟ್ ಗಳಿಗೆ ದಿಢೀರ್ ಕಾರ್ಯಾಚರಣೆಗಾಗಿ ತೆರೆಳಿದ್ದು, ಸಿಬ್ಬಂದಿಗಳ ಕೆಲ ಲೋಪದಿಂದ ಎಂಟು ಮಂದಿ ಸರ್ಕಾರಿ ನೌಕರರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಹಾಸನ ಲೋಕಸಭಾ ಚುನಾವಣೆ ಹಿನ್ನೆಲೆ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಹಾಗೂ ಎಸ್ಪಿ ಸೂಜಿತ ಮೊಹಮ್ಮದ್ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಚನ್ನರಾಯಪಟ್ಟಣ, ಅರಕಲಗೂಡು ತಾಲ್ಲೂಕಿನ ಗಡಿ ಭಾಗಗಳಲ್ಲಿ ಹಾಕಿರುವ ಚೆಕ್ ಪೋಸ್ಟ್ ಬಳಿ ಕೆಲ ಹೊತ್ತು ದೂರದಲ್ಲಿ ನಿಂತು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಕಾರ್ಯವೈಖರಿ ವೀಕ್ಷಿಸಿದ್ದಾರೆ.

ಕಾರ್ಯಚರಣೆ ವೇಳೆ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುವ ಬದಲಾಗಿ ತಮ್ಮ ಮೊಬೈಲ್‌ಗಳನ್ನು ನೋಡುತ್ತಾ ಕುಳಿತು, ಬೇಜವಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಎಂಟು ಮಂದಿ ಸರ್ಕಾರಿ ನೌಕರರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಇದೇ ರೀತಿ ಮುಂದೆ ತಪ್ಪುಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ತೀವ್ರ ನಿಗವಹಿಸಿ ಕಾರ್ಯನಿವಹಿಸಬೇಕು. ಯಾವುದೇ ಒಂದು ಸಣ್ಣ ಲೋಪವಾಗಬಾರದು ಎಂದಿ ಎಚ್ಚರಿಕೆ ಜಿಲ್ಲಾ ಚುನಾವಣಾಧಿಕಾರಿ ನೀಡಿದರು.

ಜಿಲ್ಲೆಯಾದ್ಯಂತ 22 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಯಾವುದೇ ಅಕ್ರಮಗಳಿಗೆ ಅಸ್ಪದನೀಡಬಾರದು, ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಚೆಕ್ ಪೋಸ್ಟ್ ಸಿಬ್ಬಂಧಿಗಳಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!